• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ-ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ

|
   ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ತಿರುಗಿ ಬಿದ್ದ ಬಿಜೆಪಿ | Oneindia Kannada

   ಬೆಂಗಳೂರು, ಜೂನ್ 28: ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಅವರಿಬ್ಬರ ವಿರುದ್ಧ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ಸಜ್ಜಾಗಿದೆ.

   ಕೆಲಸ ನಾವು ಮಾಡಬೇಕು ಮತ ಮೋದಿಗೆ ಹಾಕ್ತೀರಾ? ಎಂದು ಸಿಎಂ ಕುಮಾರಸ್ವಾಮಿ ಅವರು ಮೊನ್ನೆಯಷ್ಟೆ ಕೇಳಿದ್ದರು, ಅದರ ಬೆನ್ನಲ್ಲೆ ಸಿದ್ದರಾಮಯ್ಯ ಅವರು ಸಹ ಅದೇ ಮಾದರಿಯ ಹೇಳಿಕೆ ನೀಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

   ನಿದ್ದೆ ಮಾಡೋರಿಗೆ ವೋಟ್ ಹಾಕಬೇಡಿ ಎಂದಿದ್ದೆ, ತಪ್ಪೇನು?: ಸಿದ್ದರಾಮಯ್ಯ

   ಈ ಇಬ್ಬರು ಮೈತ್ರಿ ನಾಯಕರ ಹೇಳಿಕೆಯ ವಿರುದ್ಧ ರಾಜ್ಯ ಬಿಜೆಪಿಯು ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

   ಜೂನ್ 26 ರಂದು ಗ್ರಾಮ ವಾಸ್ತವ್ಯಕ್ಕೆಂದು ಕುಮಾರಸ್ವಾಮಿ ಅವರು ತೆರಳುವ ಸಂದರ್ಭದಲ್ಲಿ ವೈಟಿಪಿಎಸ್ ಪ್ರತಿಭಟನಾಕಾರರು ಬಸ್ ಗೆ ಮುತ್ತಿಗೆ ಹಾಕಿದೆ ಸಂದರ್ಭ ಸಿಟ್ಟಿಗೆದ್ದ ಕುಮಾರಸ್ವಾಮಿ, ವೋಟು ಮೋದಿಗೆ ಹಾಕ್ತೀರಾ, ಕೆಲಸ ಮಾಡಿಸುವಂತೆ ನನ್ನನ್ನು ಕೇಳುತ್ತೀರಾ? ಎಂದು ಕೂಗಾಡಿದ್ದರು, ಅಷ್ಟೆ ಅಲ್ಲದೆ, ಲಾಠಿ ಚಾರ್ಜ್ ಮಾಡಿಸಬೇಕಾ? ಎಂದು ಸಹ ಕೇಳಿದ್ದರು. ಇದು ರಾಜ್ಯದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

   ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ

   ನಿನ್ನೆ ಬಾದಾಮಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಅಕ್ಕಿ ಕೊಟ್ಟಿದ್ದು ನಾವು, ಮಕ್ಕಳಿಗೆ ಮೊಟ್ಟೆ ಕೊಟ್ಟಿದ್ದು ನಾವು, ಎಲ್ಲ ಅಭಿವೃದ್ಧಿ ನಾವು ಮಾಡಿ, ಮೋದಿಗೆ ಮತ ಹಾಕ್ತೀರಲ್ಲ ಎಂದು ಪ್ರಶ್ನೆ ಮಾಡಿದ್ದರು.

   English summary
   Karnataka BJP planing to do protest against CM Kumaraswamy and Siddaramaiah for their recent statment about 'you vote Modi, but asking us to work'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X