ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ "ಬೆಲ್ಲದ" ಮಾತು!

|
Google Oneindia Kannada News

ಬೆಂಗಳೂರು, ಜೂನ್ 15: ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎನ್ನುವುದು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಸ್ವಪಕ್ಷೀಯರು ಮತ್ತು ವಲಸೆ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬರುತ್ತಿರುವ ದಿನಗಳಲ್ಲಿ ಉತ್ತರ ಕರ್ನಾಟಕದ ಶಾಸಕ ಅರವಿಂದ್ ಬೆಲ್ಲದ್ ಹೆಸರು ಮುಂಚೂಣಿಗೆ ಬರುತ್ತಿದೆ. ಇದರ ಮಧ್ಯ ತಮ್ಮ ಮೂರು ದಿನಗಳ ದೆಹಲಿ ಪ್ರವಾಸದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಶಿಕಾರಿಪುರಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ!ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಶಿಕಾರಿಪುರಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ!

ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನನ್ನ ಕ್ಷೇತ್ರದ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ವಿಚಾರವಾಗಿ ಗೃಹ ಸಚಿವರನ್ನು ಭೇಟಿ ಮಾಡಿದ್ದೇನೆಯೇ ವಿನಃ ಬೇರೆ ಏನೂ ವಿಚಾರ ಚರ್ಚೆ ಮಾಡಿಲ್ಲ. ಇನ್ನು ದೆಹಲಿಯಲ್ಲಿ ವರಿಷ್ಠರ ಭೇಟಿ ವಿಚಾರವಾಗಿ ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ದೆಹಲಿಯಲ್ಲಿ ಎರಡು ದಿನ ವೈಯಕ್ತಿಕ ಕೆಲಸವಿದ್ದು, ನಂತರ ಪಕ್ಷದ ಹಿರಿಯರನ್ನು ಭೇಟಿ ಮಾಡಿದ್ದೇನೆ," ಎಂದು ಸ್ಪಷ್ಟಪಡಿಸಿದರು.

Karnataka BJP Leadership Crisis: MLA Arvind Bellad Clarification About Delhi Visit


ದೆಹಲಿ ವರಿಷ್ಠ ಭೇಟಿ ಒಂದು ಪದ್ಧತಿ ಎಂದ ಬೆಲ್ಲದ್:

"ನವದೆಹಲಿಗೆ ಹೋದಾಗ ಬೆಂಗಳೂರಿಗೆ ಬಂದಾಗ ನಾಯಕರನ್ನು ಭೇಟಿ ಮಾಡುವುದು ಒಂದು ಪದ್ದತಿ. ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ನಾನೇನೂ ಕಾಮೆಂಟ್ ಮಾಡುವುದಿಲ್ಲ. ಅರುಣ್ ಸಿಂಗ್ ರನ್ನು ಬೆಂಗಳೂರಿನಲ್ಲಿ ಮತ್ತೆ ಭೇಟಿ ಮಾಡುತ್ತೇನೆ," ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

English summary
Karnataka BJP Leadership Change Crisis: MLA Arvind Bellad Clarification About Delhi Visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X