ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತಯಾಚನೆಗೂ ಮೊದಲೇ ಬಿಜೆಪಿ ಸಭಾತ್ಯಾಗ!

By Gururaj
|
Google Oneindia Kannada News

Recommended Video

ವಿಶ್ವಸಮತಯಾಚನೆಗೂ ಮುಂಚೆನೇ ಸಭಾತ್ಯಾಗ ಮಾಡಿದ ಬಿಜೆಪಿ | Oneindia Kannada

ಬೆಂಗಳೂರು, ಮೇ 25 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಮೊದಲೇ ಬಿಜೆಪಿ ಸಭಾತ್ಯಾಗ ಮಾಡಿದೆ. ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕರು ಸಭಾತ್ಯಾಗ ಮಾಡಿದರು.

ಶುಕ್ರವಾರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸದನದಲ್ಲಿ ವಿಶ್ವಾಸಮತವನ್ನು ಸಾಬೀತು ಮಾಡುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ನಿರ್ಣಯ ಮಂಡಿಸಿ ಒಂದು ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದರು.

ಕರ್ನಾಟಕ ವಿಶ್ವಾಸಮತ LIVE : ಸದನದಿಂದ ಹೊರನಡೆದ ಬಿಜೆಪಿ ಶಾಸಕರುಕರ್ನಾಟಕ ವಿಶ್ವಾಸಮತ LIVE : ಸದನದಿಂದ ಹೊರನಡೆದ ಬಿಜೆಪಿ ಶಾಸಕರು

ಕುಮಾರಸ್ವಾಮಿ ಅವರ ಭಾಷಣದ ಬಳಿಕ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸುದೀರ್ಘ ಭಾಷಣವನ್ನು ಮಾಡಿದರು. ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ಕೊಡುವುದಾಗಿ ಹೇಳಿದರು.

Karnataka BJP boycott the floor test

ತಮ್ಮ ಭಾಷಣದಲ್ಲಿ ಆಡಳಿತ ಪಕ್ಷದ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಪ್ರಮುಖ ನಾಯಕರಿಂದ ಅಭಿನಂದನೆಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಪ್ರಮುಖ ನಾಯಕರಿಂದ ಅಭಿನಂದನೆ

ವಿಶ್ವಾಸಮತಯಾಚನೆ ನಿರ್ಣಯ ಮಂಡನೆ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಈಗ ಯಡಿಯೂರಪ್ಪ ರೈತರ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ. ಆದರೆ, 2010ರಲ್ಲಿ ಯಡಿಯೂರಪ್ಪ ಅವರು ಸಾಲಮನ್ನಾಕ್ಕೆ ಹಣವಿಲ್ಲ ಎಂದಿದ್ದರು' ಎಂದರು.

ಕುಮಾರಸ್ವಾಮಿ ಅವರ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, 'ಇಂದು ಸಂಜೆಯೊಳಗೆ ಸಾಲಮನ್ನಾ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೋಮವಾರ ಕರ್ನಾಟಕ ಬಂದ್ ನಡೆಸುತ್ತೇವೆ' ಎಂದು ಸದನದಲ್ಲಿ ಘೋಷಣೆ ಮಾಡಿ, ಸಭಾತ್ಯಾಗ ಮಾಡಿದರು.

English summary
Karnataka BJP boycott the Congress-JD(S) alliance government floor test in Karnataka assembly on May 25, 2018. Chief Minister H.D.Kumaraswamy to prove majority on the floor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X