ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಭದ್ರತೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

By Madhusoodhan
|
Google Oneindia Kannada News

ಬೆಂಗಳೂರು, ಜುನ್ 04: ಜನರಿಗೆ ಸಾಮಾಜಿಕ ಭದ್ರತೆ ನೀಡುವ ವಿಷಯದಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಪಿಎಐ(The Public Affairs Index) ಈ ವರದಿಯನ್ನು ನೀಡಿದೆ. ಒಂದು ಅಂಕ ಮೀಸಲಿಟ್ಟ ಜಾಗದಲ್ಲಿ ರಾಜ್ಯಕ್ಕೆ 0.547 ಅಂಕ ಲಭಿಸಿದೆ. 2012 ರಿಂದ 2015 ರ ನಡುವಿನ ಅವಧಿಯಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ.

ಸಾಮಾಜಿಕ ಭದ್ರತೆ ನೀಡುವಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ತಮಿಳುನಾಡು ಎರಡನೇ ಸ್ಥಾನ ಪಡೆದುಕೊಂಡಿದೆ. ಉದ್ಯೋಗ, ಸಾಮಾಜಿಕ ನ್ಯಾಯ, ಸಾರ್ವಜನಿಕ ಆಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಮುಂತಾದ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಲಾಗಿತ್ತು.[ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ]

karnataka

ಎಸ್ ಸಿ, ಎಸ್ ಟಿ ಗೆ ಸೌಲಭ್ಯ ನೀಡಿಕೆ, ವಿದ್ಯಾರ್ಥಿ ವೇತನ ನೀಡಿಕೆ, ವಸತಿ ವ್ಯವಸ್ಥೆಯಲ್ಲಿ ಕರ್ನಾಟಕ ಸಾಧನೆ ಮಾಡಿದ್ದು ಮೂರನೇ ಸ್ಥಾನ ಲಭಿಸಲು ಕಾರಣವಾಗಿದೆ. ಮಿಜೋರಾಂ ಮತ್ತು ಸಿಕ್ಕಿಂ ಕರ್ನಾಟಕದ ನಂತರದ ಸ್ಥಾನ ಪಡೆದುಕೊಂಡಿವೆ.[ಜೂನ್ 8 ಅಥವಾ 9 ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ ಸಿಂಚನ]

ಪರಿಸರ ಉಳಿವಿಕೆ ವಿಷಯದಲ್ಲಿ ಕರ್ನಾಟಕ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದೆ. ಪಾರದರ್ಶಕ ಆಡಳಿತ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಕರ್ನಾಟಕ ಸಾಧನೆ ಮಾಡಿದ್ದು ಮೂರನೇ ಸ್ಥಾನ ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ 0.66 ಅಂಕ ಪಡೆದುಕೊಂಡಿದ್ದು 10 ನೇ ಸ್ಥಾನ ಲಭಿಸಿದೆ.

ದಿ ಪಬ್ಲಿಕ್ ಅಫೆರ್ಸ್ ಸೆಂಟರ್ ಆಡಳಿತಕ್ಕೆ ಸಂಬಂಧಿಸಿದ 25 ಸಂಗತಿಗಳನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿತ್ತು. 68 ಉಪ ವಿಷಯಗಳನ್ನು ಇದು ಒಳಗೊಂಡಿತ್ತು.

English summary
Karnataka Ranked third among all states in governance, Karnataka took the top slot for giving social protection to its citizens. The Public Affairs Index (PAI) 2016 reveals the state scored 0.547 on a scale of 0 to 1, from data analyzed from 2012 to 2015.The Public Affairs Centre, Bengaluru, studied the governance quotient in each state based on 10 themes, 25 focus subjects and 68 indicators of governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X