ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್; ಕೋಡಿಹಳ್ಳಿ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23 : "ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ" ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

Recommended Video

Karnataka ಬಂದ್ ಯಾವಾಗ ಅನ್ನೋದು ಕೊನೆಗೂ ನಿಗದಿ | Oneindia Kannada

ಕರ್ನಾಟಕ ಬಂದ್‌ ಕರೆ ನೀಡುವ ಬಗ್ಗೆ ಬುಧವಾರ ಬೆಳಗ್ಗೆಯಿಂದ ರೈತ ಸಂಘದ ನಡುವೆಯೇ ಒಮ್ಮತ ಮೂಡಿರಲಿಲ್ಲ. ಸಂಜೆ 4 ಗಂಟೆಯ ಸಭೆಯ ಬಳಿಕ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಸೆ. 25ರಂದು ಬಂದ್ ಇಲ್ಲ, ರೈತ ಸಂಘಗಳಿಂದ ಹೆದ್ದಾರಿ ತಡೆ ಚಳುವಳಿ ಸೆ. 25ರಂದು ಬಂದ್ ಇಲ್ಲ, ರೈತ ಸಂಘಗಳಿಂದ ಹೆದ್ದಾರಿ ತಡೆ ಚಳುವಳಿ

"ಸೆಪ್ಟೆಂಬರ್ 25ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ 500ಕ್ಕೂ ಅಧಿಕ ಜನರು ಸೇರಿ ಧರಣಿ ನಡೆಸಿ, ರಸ್ತೆ ತಡೆ ನಡೆಸಲಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ" ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಹೇಳಿದ್ದಾರೆ.

 ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ

ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ನಡೆಸಲು ಎಲ್ಲಾ ರೈತ ಮುಖಂಡರು ಸಮ್ಮತಿ ಸೂಚಿಸಿದ್ದಾರೆ. 32ಕ್ಕೂ ಅಧಿಕ ರೈತ ಸಂಘಟನೆಗಳು ಬಂದ್‌ಗೆ ಬೆಂಬಲವನ್ನು ನೀಡಿವೆ.

ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್ ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್

ಸರ್ಕಾರದ ಮೊಸಳೆ ಕಣ್ಣೀರು

ಸರ್ಕಾರದ ಮೊಸಳೆ ಕಣ್ಣೀರು

"ನಮ್ಮ ಒತ್ತಾಯಕ್ಕೆ ಮಣಿದು ಸರ್ಕಾರ ಎಪಿಎಂಸಿ ಮಸೂದೆ ಮಂಡನೆ ಮಾಡುವುದನ್ನು ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ, ಸರ್ಕಾರ ಮೊಸಳೆ ಕಣ್ಣೀರು ಸುರಿಸಿದೆ. ಬೀದಿಯಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನು ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ" ಎಂದು ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.

ಶುಕ್ರವಾರ ನಗರದಲ್ಲಿ ಪ್ರತಿಭಟನೆ

ಶುಕ್ರವಾರ ನಗರದಲ್ಲಿ ಪ್ರತಿಭಟನೆ

"ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಈ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಯಡಿಯೂರಪ್ಪ ಮುಖವಾಡ ಬಯಲಾಗಿದೆ" ಎಂದು ಆರೋಪಿಸಿದರು.

ಕರ್ನಾಟಕ ಬಂದ್ ತೀರ್ಮಾನಕ್ಕೆ ಬೆಂಬಲ

ಕರ್ನಾಟಕ ಬಂದ್ ತೀರ್ಮಾನಕ್ಕೆ ಬೆಂಬಲ

"ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 9ಕ್ಕೂ ಹೆಚ್ಚು ರೈತ ಸಂಘಟನೆಗಳು, 10ಕ್ಕೂ ಹೆಚ್ಚು ದಲಿತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಪಾಲ್ಗೊಂಡಿದ್ದವು. ಕರ್ನಾಟಕ ಬಂದ್ ತೀರ್ಮಾನಕ್ಕೆ ಬೆಂಬಲ ನೀಡಲಾಗಿದೆ" ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ನಾಗೇಂದ್ರ ಹೇಳಿದರು.

32 ಸಂಘಟನೆಗಳ ಬೆಂಬಲ

32 ಸಂಘಟನೆಗಳ ಬೆಂಬಲ

ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಕರ್ನಾಟಕ ಬಂದ್‌ಗೆ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 32ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದೆ. ಇದರಿಂದಾಗಿ ಕರ್ನಾಟಕ ಬಂದ್ ನಡೆಯುವುದು ಬಹುತೇಕ ಖಚಿತವಾಗಿದೆ.

English summary
Karnataka Rajya Raitha Sangha president Kodihalli Chandrashekar said that we called for Karntaka bandh on September 28 to protest against farmer and labor against move by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X