ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.25 ರಂದು ಕರ್ನಾಟಕ ಬಂದ್, ಫೆ.4 ರಂದು ಬೆಂಗಳೂರು ಬಂದ್

By Mahesh
|
Google Oneindia Kannada News

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್ | ಬೆಂಗಳೂರಿನಲ್ಲಿ ರಸ್ತೆಗಳೆಲ್ಲ ಖಾಲಿ ಖಾಲಿ | Oneindia Kannada

ಬೆಂಗಳೂರು, ಜನವರಿ 25: ಕರ್ನಾಟಕದ ಜನತೆಗೆ ಬಂದ್ ಬಿಸಿ ಮತ್ತೊಮ್ಮೆ ಬಲವಾಗಿ ತಟ್ಟಲಿದೆ. ಕರ್ನಾಟಕ ಬಂದ್ ಹಾಗೂ ಬೆಂಗಳೂರು ಬಂದ್ ಗೆ ಸಿದ್ಧರಾಗುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಜನವರಿ 25ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 04ರಂದು ಬೆಂಗಳೂರು ಬಂದ್.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಕಳಸಾ ಬಂಡೂರಿ ಹೋರಾಟಗಾರರು, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನಾಕಾರರು ಬಂದ್ ಗೆ ಕರೆ ನೀಡಿದ್ದಾರೆ.

18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ? 18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?

ಬಂದ್ ದಿನಾಂಕ ಗೊಂದಲ: ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಕೆಎಫ್ ಸಿಸಿ ಅಧ್ಯಕ್ಷ ಸಾ.ರಾ ಗೋವಿಂದು ಸೇರಿದಂತೆ ಕನ್ನಡ ಒಕ್ಕೂಟದವರು ಮೊದಲಿಗೆ ಜನವರಿ 27 ಶನಿವಾರದಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರು.

Karnataka Bandh on Jan 25 and Bengaluru Bandh on Feb 4 -Mahadayi Row

ಜನವರಿ 28 (ಭಾನುವಾರ) ರಂದು ಮೋದಿ ಕರ್ನಾಟಕ ಭೇಟಿ ನಿಗದಿಯಾಗಿತ್ತು. ಹೀಗಾಗಿ, ಬಂದ್ ಅನ್ನು ಜನವರಿ 25ಕ್ಕೆ ಹಿಂದೂಡಲಾಯಿತು.

ಆದರೆ, ಪ್ರಧಾನಿ ಮೋದಿ ಭೇಟಿ ಈಗ ಫೆಬ್ರವರಿ 04ರಂದು ನಿಗದಿಯಾಗುತ್ತಿದ್ದಂತೆ, ಮತ್ತೆ ಬಂದ್ ದಿನಾಂಕ ಗೊಂದಲ ಆರಂಭವಾಯಿತು.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

ಈ ಮಧ್ಯೆ ಕಳಸಾ ಬಂಡೂರಿ ಸಮನ್ವಯ ಸಮಿತಿ ಭಾನುವಾರದಂದು ವಾಟಾಳ್ ನಾಗರಾಜ್ ಅವರ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿ, 'ಯಾರನ್ನು ಕೇಳಿ ಬಂದ್ ದಿನಾಂಕ ನಿಗದಿ ಮಾಡಿದ್ದೀರಿ?' ಎಂದು ಪ್ರಶ್ನಿಸಿದರು.

ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸುತ್ತಿರುವ ಹೋರಾಟಗಾರರು, ಮೋದಿ ಅವರು ಬೆಂಗಳೂರಿಗೆ ಬರುವ ದಿನದಂದೇ ಬಂದ್ ಆಚರಿಸುವಂತೆ ಆಗ್ರಹಿಸಿದರು.

ಕಳಸಾ-ಬಂಡೂರಿ ಯೋಜನೆ ಎಂದರೇನು? ಕಳಸಾ-ಬಂಡೂರಿ ಯೋಜನೆ ಎಂದರೇನು?

ಈ ನಡುವೆ ಫೆಬ್ರವರಿ 04ರಂದು ಬೆಂಗಳೂರು ಬಂದ್ ಗೆ ಕಳಸಾ ಬಂಡೂರಿ ಹೋರಾಟಗಾರರು ಕರೆ ನೀಡಿದರು. ಜತೆಗೆ ವಾಟಾಳ್ ಅವರು ಫೆಬ್ರವರಿ 04ರಂದು ಕರ್ನಾಟಕ ಬಂದ್ ಮಾಡಲು ಸಮ್ಮತಿಸಿದರು. ಹೀಗಾಗಿ, ಎರಡು ದಿನಗಳಲ್ಲೂ ಬಂದ್ ಆಚರಣೆಗೆ ಸಿದ್ಧತೆ ನಡೆದಿದೆ.

English summary
Brace yourself two bandhs in less than 10 days Karnataka Bandh on Jan 25 and Bengaluru Bandh on Feb 4. Karnataka Bandh called by Vatal Nagaraj and Feb 04th Bengaluru called by Kalasa Banduri protesters. Both demand PM Modi to solve Mahadayi Row
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X