ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ 13, ಕರ್ನಾಟಕ ಬಂದ್ : ಓಲಾ, ಉಬರ್. ಆಟೋ ಒಕ್ಕೂಟದ ಮಹತ್ವದ ನಿರ್ಧಾರ

|
Google Oneindia Kannada News

ಬೆಂಗಳೂರು, ಫೆ 8: ಇದೇ ಬರುವ ಗುರುವಾರ, ಫೆಬ್ರವರಿ 13ರಂದು ಕನ್ನಡಪರ ಸಂಘಟನೆಗಳು ಕರೆನೀಡಿರುವ ಕರ್ನಾಟಕ ಬಂದ್ ಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ.

ಬಂದ್‍ಗೆ, ಓಲಾ, ಉಬರ್, ಆಟೋ ಮತ್ತು ಟ್ಯಾಕ್ಸಿ ಮಾಲೀಕರ ಬೆಂಬಲ ಸೂಚಿಸಿದ್ದು, ಅಂದು ಈ ಎಲ್ಲಾ ಸೇವೆಯು ಬಂದ್ ಆಗಲಿದೆ. ಓಲಾ ಮತ್ತು ಉಬರ್ ವಾಹನ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಈ ವಿಷಯವನ್ನು ಖಚಿತ ಪಡಿಸಿದ್ದಾರೆ.

ಫೆಬ್ರವರಿ 13ರಂದು ಕರ್ನಾಟಕ ಬಂದ್‌ಗೆ ಕರೆ ಫೆಬ್ರವರಿ 13ರಂದು ಕರ್ನಾಟಕ ಬಂದ್‌ಗೆ ಕರೆ

"ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆನೀಡಿವೆ. ಇವರು ನಡೆಸುತ್ತಿರುವ ಪ್ರತಿಭಟನೆ ಫೆಬ್ರವರಿ 13ಕ್ಕೆ 100ನೇ ದಿನಕ್ಕೆ ಕಾಲಿಡಲಿದೆ. ಹಾಗಾಗಿ, 13ಕ್ಕೆ ಕರೆದಿರುವ ಬಂದ್ ಗೆ ನಮ್ಮ ಬೆಂಬಲವು ಇರಲಿದೆ" ಎಂದು ತನ್ವೀರ್ ತಿಳಿಸಿದ್ದಾರೆ.

Karnataka Bandh On February 13: No Ola, Uber, Auto And Taxi Service From 6AM to 6PM

"ಕನ್ನಡ ಒಕ್ಕೂಟದ ಅಧ್ಯಕ್ಷ ನಾಗೇಶ್ ನಮ್ಮನ್ನು ಭೇಟಿ ಮಾಡಿ ಹೋರಾಟದ ವಾಸ್ತವಾಂಶ ತಿಳಿಸಿ ಬಂದ್‍ ಗೆ ಬೆಂಬಲಿಸಲು ಮನವಿ ಮಾಡಿದ್ದಾರೆ. ನಾವು ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಬಂದ್ ಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದೇವೆ" ಎಂದು ತನ್ವೀರ್ ಹೇಳಿದ್ದಾರೆ.

"ಆಟೋ ಮತ್ತು ಟ್ಯಾಕ್ಸಿ ಸಂಘಟನೆಯ ಮುಖಂಡರ ಜೊತೆ ಸಭೆ ನೆಡೆಸಿದ್ದೇವೆ. ಅವರೂ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ಫೆಬ್ರವರಿ 13ರ ಬೆಳಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಓಲಾ, ಉಬರ್, ಆಟೋ ಮತ್ತು ಟ್ಯಾಕ್ಸಿ ಸರ್ವಿಸ್ ಇರುವುದಿಲ್ಲ" ಎಂದು ತನ್ವೀರ್ ಹೇಳಿದ್ದಾರೆ.

"ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ 2019ರ ನವೆಂಬರ್ 4ರಿಂದ ಮೌರ್ಯ ವೃತ್ತದಲ್ಲಿ ಧರಣಿ ನಡೆಸಲಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ" ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಹೇಳಿಕೆಯನ್ನು ನೀಡಿದ್ದರು.

English summary
Karnataka Bandh On February 13: No Ola, Uber, Auto And Taxi Service From 6AM to 6PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X