ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Bandh Live Updates:ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ ಪೂರ್ಣ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.

Karnataka bandh live updates in Kannada

ನಗರದ ಪುರಭವನದ ಬಳಿ‌ ಪ್ರತಿಭಟನಕಾರರು ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಅಲ್ಲದೇ ಮೇಖ್ರಿ ವೃತ್ತದಿಂದ ಆನಂದರಾವ್ ವೃತ್ತ ದವರೆಗೆ ಮೆರವಣಿಗೆ ನಡೆಸಲಿದ್ದಾರೆ. ಮೆರವಣಿಗೆಗೆ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಪರಿಸ್ಥಿತಿಯ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ರಾಜ್ಯದಲ್ಲಿ ಇಂದು ನಡೆಯಲಿರುವ ಕರ್ನಾಟಕ ಬಂದ್‌ನ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ ಕನ್ನಡ'ದಲ್ಲಿ ನೀಡಲಿದ್ದೇವೆ. ನಿರೀಕ್ಷಿಸಿ.

Newest FirstOldest First
7:31 PM, 5 Dec

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಶನಿವಾರ ನಡೆದ ಬಂದ್ ಪೂರ್ಣಗೊಂಡಿದೆ. ಕೆಲವು ಕಡೆ ಬೆಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದರೆ, ಅನೇಕ ಕಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
5:39 PM, 5 Dec

ಚಿಕ್ಕಪೇಟೆಯಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದರಿಂದ ವಾರಾಂತ್ಯದ ವ್ಯಾಪಾರದಲ್ಲಿ ಇಳಿಕೆಯಾಗಿದೆ.
4:54 PM, 5 Dec

ರಾಜ್ಯ ಸರ್ಕಾರ ನಿಗಮ-ಪ್ರಾಧಿಕಾರದ ಓಟ್ ಬ್ಯಾಂಕ್ ರಾಜಕಾರಣ ಕೈಬಿಟ್ಟು ಕೇಂದ್ರ ಸರ್ಕಾರದಿಂದ‌ ಬರಬೇಕಿರುವ ಅನುದಾನಗಳನ್ನು ತರುವೆಡೆಗೆ ಗಮನ ಹರಿಸಬೇಕು. ಹೈಕಮಾಂಡ್ ಗುಲಾಮಗಿರಿ ಮಾಡದೆ ಜನರ ಪರವಾಗಿ ನಿಲ್ಲುವ ಧೈರ್ಯವಿಲ್ಲದೇ ಹೋದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. - ಟಿಎ ನಾರಾಯಣಗೌಡ
3:51 PM, 5 Dec

ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಸಿಡಿದೆದ್ದ ಕನ್ನಡ ಪರ ಸಂಘಟನೆಗಳು ಕೊಟ್ಟ ಕರ್ನಾಟಕ ಬಂದ್ ಕರೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಬಂದ್‌ ಕರೆಯಿಂದ ಸೃಷ್ಟಿಯಾಗಿದ್ದ ಅಬ್ಬರ ಬಂದ್‌ ದಿನ ಕಂಡಿಲ್ಲ. ಪರಿಣಾಮ ಕೇವಲ ಪ್ರತಿಭಟನೆ, ಬಂಧನಕ್ಕಷ್ಟೇ ಕರ್ನಾಟಕ ಬಂದ್ ಸೀಮಿತವಾಗಿಹೋಯಿತು.
3:08 PM, 5 Dec

ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್, ಬಂದ್ ಇದ್ದರೂ ದಿನನಿತ್ಯದಂತಿರುವ ಬೆಂಗಳೂರು ಟ್ರಾಫಿಕ್, ಮಧ್ಯಾಹ್ನ ನಂತರ ರಸ್ತೆಗಿಳಿದ ವಾಹನಗಳು, ಬಂದ್ ಬಿಸಿ ಕಮ್ಮಿಯಾದ ನಂತರ ಹೆಚ್ಚೆಚ್ಚು ರಸ್ತೆಗಳಿದ ವಾಹನ ಸವಾರರು, ಕೆ.ಆರ್ ಸರ್ಕಲ್ ನಲ್ಲಿ ಎಂದಿಂತೆಯೇ ಇದೆ ವಾಹನ ದಟ್ಟಣೆ
2:50 PM, 5 Dec

ಮಾಗಡಿ ರಸ್ತೆಯ ಸುಮ್ಮನಹಳ್ಳಿ ಜಂಕ್ಷನ್ ನಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಸ್ತೆ ತಡೆ , ಲಯನ್ ಜೈರಾಜ್ ನಾಯ್ಡು ನೇತೃತ್ವದಲ್ಲಿ ರಸ್ತೆ ತಡೆ , ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ, ಬ್ಯಾಡರಹಳ್ಳಿ ಪೊಲೀಸರಿಂದ ಕಾರ್ಯಕರ್ತರ ಬಂಧನ, ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ
1:44 PM, 5 Dec

ವಾಟಾಳ್ ನಾಗರಾಜ್ ಹಾಗೂ ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಹೋರಾಟದ ಸ್ವರೂಪ ಸ್ವಲ್ಪ ಶಾಂತವಾಗಿದೆ.
Advertisement
1:22 PM, 5 Dec

ಕರ್ನಾಟಕ ಬಂದ್, ಹಲವೆಡೆ ಕನ್ನಡಪರ ಸಂಘಟನೆಗಳ ಪ್ರತಿಭಟನೆಯ ಚಿತ್ರಣ
1:09 PM, 5 Dec

ಬೆಳಗಾವಿ: ನಿರೀಕ್ಷೆಯಂತೆ ರಾಜ್ಯದ ಜನರು ಬಂದ್ ಕರೆಗೆ ಸಹಕಾರ ಕೊಟ್ಟಿಲ್ಲ, ಎಲ್ಲ ಜಿಲ್ಲೆಗಳಲ್ಲಿ ಜನ ಜೀವನ, ಬಸ್ ಸಂಚಾರ ಯತಾಸ್ಥಿತಿಯಲ್ಲಿದೆ, ಕೆಲವೆಡೆ ಒತ್ತಾಯಪೂರ್ವಕವಾಗಿ ಬಂದ್ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ, ಪೊಲೀಸ್, ಕೇಸರ್ಟಿಸಿ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ
12:53 PM, 5 Dec

ಆನಂದರಾವ್ ವೃತ್ತದ ಬಳಿ ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು. ಮಹಿಳೆ ಪೊಲೀಸರಿಗೆ ಆವಾಜ್ ಹಾಕಿದರು.
12:40 PM, 5 Dec

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧ ವ್ಯಕ್ತಪಡಿಸಿ ಒಂದೆಡೆ ಪ್ರತಿಭಟನೆಯ ಕಾವು ಏರಿದ್ದರೆ, ಮತ್ತೊಂದೆಡೆ ಇದ್ಯಾವುದರ ಪರಿವೆಯೇ ಇಲ್ಲದೇ ನವಜೋಡಿಯೊಂದು ಪ್ರೀ ವೆಡ್ಡಿಂಗ್‌ ಫೋಟ್‌ ಶೂಟ್‌ಗೆ ಪೋಸ್‌ಕೊಟ್ಟು ಬಿಂದಾಸ್‌ ಆಗಿದ್ದ ದೃಶ್ಯ ನಗರದಲ್ಲಿ ಕಂಡುಬಂತು.
12:31 PM, 5 Dec

ಬೆಂಗಳೂರಿನ ವಿವಿಧೆಡೆ ರಸ್ತೆ ತಡೆದು ಕಾರ್ಯಕರ್ತರ ಪ್ರತಿಭಟನೆ, ನಾರಾಯಣಗೌಡ, ವಾಟಾಳ್ ನಾಗರಾಜ್ ಸೇರಿ ಹಲವರು ವಶಕ್ಕೆ
Advertisement
12:26 PM, 5 Dec

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರಿಂದ ಕೆಎಸ್ಆರ್ಟಿಸಿ ಬಸ್ ಗೆ ತಡೆ,KSRTC ಬಸ್ ನಿಲ್ದಾಣಕ್ಕೆ ನುಗ್ಗಿ ತಡೆ ಬಸ್ ಸಂಚಾರ ಮಾಡದಂತೆ ತಡೆಯೊಡ್ಡಿ ಆಕ್ರೋಶ, ರಸ್ತೆಗಿಳಿದ ಬಸ್ ಗಳನ್ನು ತಡೆಯುತ್ತಿರುವ ಪ್ರತಿಭಟನಾಕಾರರು
12:09 PM, 5 Dec

ಬೆಂಗಳೂರಿನಲ್ಲಿ ಹಲವೆಡೆ ರಸ್ತೆ ತಡೆದು ಪ್ರತಿಭಟನೆ, ಬೆಳಗ್ಗೆ ನೀರಸ ಪ್ರತಿಕ್ರಿಯೆ, ಸಂಘಟನೆಗಳು ರಸ್ತೆಗಿಳಿಸಿದ ಬಳಿಕ ತೀವ್ರ ಸ್ವರೂಪ ಪಡೆದುಕೊಂಡ ಬಂದ್
12:00 PM, 5 Dec

ಮಂಗಳೂರು: ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ಸಿಕ್ಕಿಲ್ಲ. ಎಂದಿನಂತೆ ಜನಜೀವನ ನಡೆಯುತ್ತಿದೆ. ಖಾಸಗಿ, ಸರ್ಕಾರಿ ಬಸ್‌ಗಳು ಎಂದಿನಂತೆ ಓಡಾಟ ನಡೆಸುತ್ತಿವೆ.
11:51 AM, 5 Dec

ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
11:51 AM, 5 Dec

ಚಿತ್ರದುರ್ಗ: ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದ ಕರವೇ ಕಾರ್ಯಕರ್ತರು ಅರೆಸ್ಟ್, 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಪೊಲೀಸರ ವಶಕ್ಕೆ, ಬಾಯಿ ಬಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದ ಕನ್ನಡ ಕಾರ್ಯಕರ್ತರು, ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪೊಲೀಸರ ವಶಕ್ಕೆ, ನಡುರಸ್ತೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದಗಾ ಪೊಲೀಸ್ ವಶಕ್ಕೆ, ಮರಾಠಿ ಅಭಿವೃದ್ಧಿ ನಿಗಮ ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದ ವೇಳೆ ಪ್ರತಿಭಟನಾಕಾರರು.
11:38 AM, 5 Dec

ಕನ್ನಡ ಪರ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
11:15 AM, 5 Dec

ಬಿಜೆಪಿ, ಆರ್‌ಎಸ್‌ಎಸ್ ಕನ್ನಡ ಭಾಷಾ ವಿರೋಧಿಯಾಗಿದೆ, ಯಡಿಯೂರಪ್ಪ ಪರಭಾಷಾ ಏಜೆಂಟ್ ಎಂದು ಜರಿದ ವಾಟಾಳ್ ನಾಗರಾಜ್
11:08 AM, 5 Dec

ಟೌನ್‌‌ಹಾಲ್‌ನಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ, ಚಿಕ್ಕಪೇಟೆ ವ್ಯಾಪಾರಕ್ಕೂ ತಟ್ಟಿದ ಬಂದ್ ಬಿಸಿ
10:59 AM, 5 Dec

ಮೈಸೂರು: ಮರಾಠ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ, ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು. ಮೈಸೂರು ನಗರ ಬಸ್ ನಿಲ್ದಾಣದ ಬಳಿ ಬಂಧನ. 20 ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ. ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದ ಸದಸ್ಯರು. ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್ ದಾಟಲು ಪ್ರಯತ್ನ, ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ಸದಸ್ಯ. ತಕ್ಷಣ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದ ಪೊಲೀಸರು.
10:55 AM, 5 Dec

ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆಹಾಕಲು ಶಿವಾನಂದ ಸರ್ಕಲ್ ಮಾರ್ಗವಾಗಿ ತೆರಳುತ್ತಿರುವ ಕನ್ನಡ ಪರ ಕಾರ್ಯಕರ್ತರು.
10:51 AM, 5 Dec

25 ಸಾವಿರ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಾರೆ, ಪೊಲೀಸರು ಮಫ್ತಿಯಲ್ಲಿ ಹೋಗಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ-ವಾಟಾಳ್ ನಾಗರಾಜ್
10:48 AM, 5 Dec

ಟೌನ್ ಹಾಲ್ ಬಳಿ ಹೆಚ್ಚಾಯ್ತು ಹೊರಾಟದ ಕಿಚ್ಚು ,ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೋಲಿಸರ ಹರಸಾಹಸ ,ಟೌನ್ ಹಾಲ್ ಸಿಗ್ನಲ್ ಬಳಿ ಪ್ರತಿಭಟನಾಕಾರರು - ಪೋಲಿಸರ ನಡುವೆ ತಳ್ಳಾಟ- ನೂಕಾಟ ,ಪ್ರತಿಭಟನಾ ರ್ಯಾಲಿ ಮೂಲಕ ಬರುತ್ತಿರುವ ಹಲವು ಸಂಘಟನೆಗಳು ,ಟೌನ್ ಹಾಲ್ ಮುಂಬಾಗ ತಲುಪುವ ಮುನ್ನ ವಶಕ್ಕೆ ಪ್ರತಿಭಟನಾ ಕಾರರನ್ನ ವಶಕ್ಕೆ ಪಡೆಯುತ್ತಿರುವ ಪೋಲಿಸರು.
10:37 AM, 5 Dec

ಕರ್ನಾಟಕ ಬಂದ್: ಬೆಳಗಾವಿಯಿಂದಲೇ ಮಾಹಿತಿ ಪಡೆದ ಸಿಎಂ, ಹೋಂ ಮಿನಿಸ್ಟರ್

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಆರಂಭದಲ್ಲಿ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯ ಬಿಜೆಪಿ ಕಾರ್ಯಕಾರಣಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿಯಲ್ಲಿದ್ದಾರೆ. ಅಲ್ಲಿಂದಲೇ ಬಂದ್ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
10:37 AM, 5 Dec

ಮರಾಠ ನಿಗಮ ಮಂಡಳಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಟೌನ್‌ಹಾಲ್ ಬಳಿ ಪ್ರತಿಭಟನೆ ಆರಂಭವಾಗಿದೆ, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
10:22 AM, 5 Dec

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮೌರ್ಯ ಸರ್ಕಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚು ಬ್ಯಾರಿಕೇಡ್ ಹಾಕಿ ಬಂದೊಬಸ್ತ್ ಮಾಡಲಾಗಿದೆ.
10:12 AM, 5 Dec

ಶಿವಮೊಗ್ಗ: ಸರ್ಕಾರದ ವಿರುದ್ಧ ಕರ್ನಾಟಕ ಬಂದ್ ಹಿನ್ನಲೆ, ಮರಾಠ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವ ಕನ್ನಡಪರ ಸಂಘಟನೆಗಳು, ಶಿವಮೊಗ್ಗದಲ್ಲಿ ಬಂದ್ ಗೆ‌ ಕನ್ನಡ ಪರ ಹಾಗೂ ರೈತ ಪರ ಸಂಘಟನೆಗಳ ಬೆಂಬಲ, ಮಲೆನಾಡು ಶಿವಮೊಗ್ಗ ಜಿಲ್ಲೆಯಾದ್ಯಂತ ನೆಲ, ಜಲ, ಭಾಷೆ ಗೆ ಬೆಂಬಲಿಸಿ ಬಂದ್, ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸರ್ಪಗಾವಲು, ಮುಖ್ಯ ಬಸ್ ನಿಲ್ದಾಣದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಾವಲು ನಿಂತಿದ್ದಾರೆ.
10:07 AM, 5 Dec

ಚಿಕ್ಕಮಗಳೂರು : ಕರ್ನಾಟಕ ಬಂದ್ ಹಿನ್ನೆಲೆ, ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ, ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ, ವಾಹನಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿರೋ ಪ್ರತಿಭಟನಾಕಾರರು, ಬಂದ್ ಗೆ ಬೆಂಬಲ ಸೂಚಿಸುವಂತೆ ವಾಹನ ಸವಾರರಲ್ಲಿ ಮನವಿ, ವಾಹನಗಳನ್ನ ನಿಲ್ಲಿಸುವಂತೆ ಪ್ರತಿಭಟನಾಕಾರರ ಆಗ್ರಹ
10:03 AM, 5 Dec

ಮಂಡ್ಯ: ಇಂದು ಕರ್ನಾಟಕ ಬಂದ್ ಹಿನ್ನೆಲೆ, ಮಂಡ್ಯದಲ್ಲಿ ಕಾವೇರಿದ ಪ್ರತಿಭಟನೆ.ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಸಂಜಯ್ ವೃತ್ತದಲ್ಲಿ ಅರೆ ಬೆತ್ತಲೆ ಪ್ರತಿಭಟನೆ, ಮೈಸೂರು-ಬೆಂಗಳುರು ಹೆದ್ದಾರಿ ತಡೆದ ಪ್ರತಿಭಟನಾಕಾರರು, ಪ್ರತಿಭಟನಾಕಾರರ ರಸ್ತೆ ತಡೆ ನಿಲ್ಲಿಸಲು ಪೊಲೀಸರ ಹರಸಾಹಸ, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ, ಸ್ಥಳದಲ್ಲಿ ಪೋಲಿಸ್ ಬಿಗಿ ಬಂದ್ ಬಸ್ತ್.
READ MORE

English summary
Karnataka Bandh on Dec 5 Live Updates: Check out the latest breaking news, photos and videos here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X