ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Bandh LIVE: ಕರ್ನಾಟಕ ಬಂದ್; ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಮಹಿಷಿ ವರದಿಗೆ ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಾವುದೇ ಸಂಘಟನೆಯಿಲ್ಲದೇ ತರಾತುರಿಯಲ್ಲಿ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳಿಗೆ ಮುಖಭಂಗವಾದಂತಾಗಿದೆ. ಬೆಂಗಳೂರಿನಲ್ಲಿ ಗುರುವಾರ ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ಜನಸಂಚಾರ ವಿರಳ ಎನ್ನುವುದನ್ನು ಬಿಟ್ಟರೇ ಎಲ್ಲವೂ ಎಂದಿನಂತೆ ಜನಜೀವನ ಕಂಡು ಬಂತು. ಬಂದ್ ನಡೆಸುತ್ತೇವೆ ಎಂದು ಹೇಳಿದ್ದ ಆಟೋ, ಓಲಾ ಊಬರ್ ಚಾಲಕರೂ ಕೂಡ ಬಂದ್‌ ನಡೆಸಲು ಉತ್ಸುಕತೆ ತೋರಿಸಲಿಲ್ಲ. ಸಾರಿಗೆ, ಹೋಟೆಲ್, ಅಂಗಡಿ, ಮುಂಗಟ್ಟುಗಳು, ಆಸ್ಪತ್ರೆ ಎಂದಿನಂತೆ ನಡೆದವು.

ಕೆಲ ಸಂಘಟನೆಗಳು ಸಿಟಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು. ಮಂಗಳೂರಿನಲ್ಲಿ ಖಾಸಗಿ ಬಸ್‌ಗೆ ಕಲ್ಲು ತೂರಾಟ ಪ್ರಕರಣ ಬಿಟ್ಟರೇ, ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

ಮತ್ತೆ ಕರ್ನಾಟಕ ಬಂದ್; ಮಹಿಷಿ ವರದಿ ಬಗ್ಗೆ ನಿಮಗೆಷ್ಟು ಗೊತ್ತು?ಮತ್ತೆ ಕರ್ನಾಟಕ ಬಂದ್; ಮಹಿಷಿ ವರದಿ ಬಗ್ಗೆ ನಿಮಗೆಷ್ಟು ಗೊತ್ತು?

ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಲಿಲ್ಲ. ಕೇವಲ ಪ್ರತಿಭಟನೆಗಳನ್ನು ನಡೆಸಿ, ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಕನ್ನಡಿಗರಿಗೆ ಉದ್ಯೋಗಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

Karnataka Bandh Live Updates

"ಮಹಿಷಿ ವರದಿ ಜಾರಿ ಬಗ್ಗೆ ನನ್ನ ಬಳಿ ಬಂದು ನೇರವಾಗಿ ಮಾತನಾಡಿ, ಬಂದ್ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದರು.

Newest FirstOldest First
1:24 PM, 13 Feb

ದಾವಣಗೆರೆಯಲ್ಲಿ ಮಹಿಷಿ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ
1:01 PM, 13 Feb

ಮಹಿಷಿ ವರದಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ
12:39 PM, 13 Feb

ಕನ್ನಡಿಗರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಬದ್ದವಿದ್ದು, ಕನ್ನಡ ಸಂಘಟನೆಗಳು ಬಂದ್ ನಡೆಸದೇ ಸರ್ಕಾರದ ಜೊತೆ ಮಾತುಕತೆ ನಡೆಸಲಿ, ಅವರ ಬೇಡಿಕೆಗಳನ್ನು ತಿಳಿಸಲಿ. ಈ ಕುರಿತು ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಗದಗನಲ್ಲಿ ಹೇಳಿದ್ದಾರೆ
12:27 PM, 13 Feb

ಟ್ವಿಟ್ಟರ್‌ನಲ್ಲಿ ಕರ್ನಾಟಕ ಬಂದ್ ಟ್ರೆಂಡಿಂಗ್‌ನಲ್ಲಿದೆ. #KarnatakaBandh ಬಳಸಿ, ಜನ ಟ್ವೀಟ್ ಮಾಡುತ್ತಿದ್ದಾರೆ. ಬಹಳಷ್ಟು ಜನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
12:19 PM, 13 Feb

ಸಿಟಿ ರೈಲು ನಿಲ್ದಾಣದಿಂದ ಫ್ರಿಡಂ ಪಾರ್ಕ್‌ವರೆಗೆ ಮೆರವಣಿಗೆ ಪ್ರಾರಂಭಿಸಿದ ಕನ್ನಡ ಸಂಘಟನೆಗಳು, ಪೊಲೀಸ್ ಬಿಗಿ ಭದ್ರತೆಯಲ್ಲಿ ಮೆರವಣಿಗೆ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್
12:17 PM, 13 Feb

ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ ಕನ್ನಡಪರ ಹೋರಾಟಗಾರರು
12:00 PM, 13 Feb

ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ದಾವಣಗೆರೆಯ ಕನ್ನಡ ಪರ ಸಂಘಟನೆಗಳಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ. ನಗರದ ಜಯದೇವ ಸರ್ಕಲ್‌ ನಲ್ಲಿ ಪ್ರತಿಭಟನೆ. ವಿನೂತನ ವಾಗಿ ಪ್ರತಿಭಟನೆ ಮಾಡಿದ ಕನ್ನಡ ಪರ ಸಂಘಟನೆಗಳು. ಕನ್ನಡಿಕ ಅನಾಥನಾಗಿದ್ದಾನೆ, ಪರ ಭಾಷಿಗರು ಕರ್ನಾಟಕದಲ್ಲಿ ಆಡಳಿತ ‌ನಡೆಸುತ್ತಿದ್ದಾರೆ ಎನ್ನುವ ಅಣಕು ಪ್ರದರ್ಶನ ಮಾಡಿದ ಸಂಘಟನೆ ಗಳು. ರಾಜ್ಯದ ಎಲ್ಲಾ ಮಾಜಿ ಹಾಲಿ ಮುಖ್ಯಮಂತ್ರಿಗಳ ಪೋಟೋಗಳನ್ನು ಇಟ್ಟು ಪ್ರತಿಭಟನೆ.
Advertisement
11:49 AM, 13 Feb

ರಾಜ್ಯಾದ್ಯಂತ ಕರ್ನಾಟಕ ಬಂದ್‌ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ.
11:05 AM, 13 Feb

ಮೌರ್ಯ ಸರ್ಕಲ್‌ ಬಳಿ ಕನ್ನಡ ಸಂಘಟನೆಗಳ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ
10:57 AM, 13 Feb

ಹೋರಾಟಗಾರರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ ಖಾಸಗಿ ಉದ್ಯೋಗಗಳಲ್ಲಿ ಶೇ 85 ರಷ್ಟು ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ಸಿಎಂ ನಿವಾಸಕ್ಕೆ ಕೆಲ ಕನ್ನಡ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿದ್ದರು.
10:41 AM, 13 Feb

ಹುಬ್ಬಳ್ಳಿ; ಬಂದ್ ಬೆಂಬಲಿಸಿ ಕೆಲ ಕನ್ನಡ ಸಂಘಟನೆಗಳು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿವೆ.
10:32 AM, 13 Feb

ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ ಖಾಸಗಿ ಉದ್ಯೋಗಗಳಲ್ಲಿ ಶೇ 85 ರಷ್ಟು ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ಸಿಎಂ ನಿವಾಸಕ್ಕೆ ಕೆಲ ಕನ್ನಡ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿದ್ದಾರೆ. ಸಿಎಂ ಭೇಟಿಗಾಗಿ ಕಾಯುತ್ತಿದ್ದಾರೆ.
Advertisement
10:09 AM, 13 Feb

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಬಂದ್‌ಗೆ ಕರೆನೀಡಿರುವ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಈ ನಿಟ್ಟಿನಲ್ಲಿ ಸಿಟಿ ರೈಲು ನಿಲ್ದಾಣ, ಟೌನ್ ಹಾಲ್, ಮೆಜಸ್ಟಿಕ್, ಫ್ರೀಡಂ ಪಾರ್ಕ್ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 11 ಗಂಟೆ ನಂತರ ಪ್ರತಿಭಟನಾಕಾರರು ಸಿಟಿ ರೈಲು ನಿಲ್ದಾಣದ ಬಳಿ ಸಮಾವೇಶಗೊಳ್ಳಲಿದ್ದಾರೆ
9:42 AM, 13 Feb

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕೆಲ ಕನ್ನಡಪರ ಹೋರಾಟಗಾರರು ಬಂದ್ ಆಚರಿಸುವುದು ಬೇಡ ಎಂದು ಬಿಎಂಟಿಸಿ ಸಿಬ್ಬಂದಿಗೆ ಹೂವು ನೀಡಿ ಕೆಲಸಕ್ಕೆ ಬಂದಿರುವುದಕ್ಕೆ ಧನ್ಯವಾದ ಹೇಳುತ್ತಿದ್ದಾರೆ
9:31 AM, 13 Feb

ಬೆಂಗಳೂರು ಹೊರತುಪಡಿಸಿ ರಾಜ್ಯದ ಹೊರ ಜಿಲ್ಲೆಗಳಲ್ಲಿ ನಡೆಯದ ಬಂದ್. ಎಂದಿನಂತೆ ಮುಂದುವರೆದ ಜನ ಜೀವನ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಸಂಘಟನೆಗಳ ನಿರ್ಧಾರ
9:23 AM, 13 Feb

ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಕೆಲ ಮುಖಂಡರನ್ನು ಬೆಂಗಳೂರು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ. ಆರ್ ಟಿ ನಗರದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಬಿಡದೇ ಪೊಲೀಸರು ಮನೆ ಮುಂದೆ ಪಹರೆ ಹಾಕಿದ್ದಾರೆ
9:13 AM, 13 Feb

ಬೆಂಗಳೂರು; ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಕಕಾಲದಲ್ಲೇ ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಕಂಡು ಬಂದಿದೆ. ಆಟೋ, ಕ್ಯಾಬ್‌ಗಳು ಕೈ ಕೊಡಬಹುದು ಎಂದು ಬೆಳಿಗ್ಗೆಯೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳಿ ವಿಮಾನಕ್ಕೆ ಕಾಯುತ್ತಾ ಕುಳಿತಿದ್ದಾರೆ.
8:48 AM, 13 Feb

ಬೆಂಗಳೂರು: ಬೆಳಗ್ಗೆ 10 ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕನ್ನಡಪರ ಹೋರಾಟಗಾರರ ಪ್ರತಿಭಟನಾ ಮೆರವಣಿಗೆ ಆರಂಭ, ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ.
8:29 AM, 13 Feb

ಬೆಂಗಳೂರಿನ ಗೊಲ್ಲರಹಟ್ಟಿ ಬಳಿ ವಾಹನ ಸಂಚಾರಕ್ಕೆ ತಡೆ, ಹೊಸೂರು ರಸ್ತೆಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
8:18 AM, 13 Feb

ಹಾಸನ; ಹಾಸನಕ್ಕೆ ತಟ್ಟದ ಬಂದ್ ಬಿಸಿ, ಕೆಲ ಕನ್ನಡ ಸಂಘಟನೆಗಳಿಂದ ಎನ್ ಆರ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದಿದೆ. ಸರೋಜಿನಿ ಮಹಿಷಿ ವರದಿ ಜಾರಿ ಆಗಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
8:01 AM, 13 Feb

ಕೆಲ ಸಂಘಟನೆಗಳ ಸದಸ್ಯರು ಬೆಂಗಳೂರಲ್ಲಿ ಹೋಟೆಲ್ ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಬಂದ್ ಮಾಡಿಸುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಪೊಲೀಸರು ಅಂತವರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ
7:58 AM, 13 Feb

ಬೆಂಗಳೂರಿನಲ್ಲಿ ಎರಡು ಸಂಘಟೆನಗಳಿಗೆ ಮಾತ್ರ ಪೊಲೀಸರು ಶಾಂತಿಯುತ ಮೆರವಣಿಗೆ ನಡೆಸಲು ಅವಕಾಶ ನಿಡಿದ್ದಾರೆ. ಅಂಬೇಡ್ಕರ್ ಸೇನೆ ಹಾಗೂ ಕನ್ನಡ ಸಂಘಟನೆಗಳ ಒಕ್ಕೂಟ ಎನ್ನುವ ಸಂಘಟನೆಗೆ ಮಾತ್ರ ಸಿಟಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲು ಬೆಂಗಳೂರು ಪೊಲೀಸರು ಅನುಮತಿ ನೀಡಿದ್ದಾರೆ
7:55 AM, 13 Feb

ಬೆಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಮೀನರ್ವ ವೃತ್ತ, ಕೆಆರ್‌ ಸರ್ಕಲ್, ಮೌರ್ಯ ಸರ್ಕಲ್ ಬಳಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ.
7:24 AM, 13 Feb

ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪ್ರಯಾಣಿಕರಿಗೆ ತಟ್ಟದ ಬಿಸಿ. ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ಪ್ರಯಾಣಿಕರ ಸಂಖ್ಯೆ ವಿರಳ ಇರುವುದು ಕಂಡು ಬಂದಿದೆ. ಆಟೋಗಳ ಸಂಚಾರವೂ ಕಂಡು ಬಂದಿದೆ. ಆದರೆ, ಆಟೋಗಳ ಸಂಖ್ಯೆ ಎಂದಿನಂತೆ ಕಂಡು ಬಂದಿಲ್ಲ
7:15 AM, 13 Feb

ಅರಮನೆ ನಗರಿ ಮೈಸೂರಿನಲ್ಲಿ ನಡೆಯದ ಬಂದ್. ಎಂದಿನಂತೆ ಸಾರಿಗೆ ಸೇವೆ ಆರಂಭ. ಹೋಟೆಲ್, ಅಂಗಡಿ ಮುಂಗಟ್ಟುಗಳು ಆರಂಭ. ಮಹಿಷಿ ವರದಿ ಜಾರಿ ಮಾಡಲು ಆಗ್ರಹಿಸಿ ಕನ್ನಡ ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ
7:14 AM, 13 Feb

ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಂಡು ಬರದ ಬಂದ್ ಪರಿಣಾಮ. ಯಾವುದೇ ಸಂಘಟನೆಗಳು ರಸ್ತೆಗಿಳಿಯದಿರುವುದು ಕಂಡು ಬಂದಿಲ್ಲ. ಜನಜೀವವ ಎಂದಿನಂತೆ ಸಹಜವಾಗಿರುವುದು ವರದಿಯಾಗಿದೆ. ಮಹಿಷಿ ವರದಿ ಜಾರಿ ಮಾಡಬೇಕು ಎಂದು ಕೆಲ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿವೆ.
7:07 AM, 13 Feb

ಬೆಂಗಳೂರಿನ ಜನನಿಬಿಡ ಮಾರುಕಟ್ಟೆಯಾದ ಕೆ ಆರ್ ಮಾರುಕಟ್ಟೆಗೆ ತಟ್ಟದ ಬಂದ್ ಬಿಸಿ. ವ್ಯಾಪಾರಸ್ಥರು ಎಂದಿನಂತೆ ಮಾರುಕಟ್ಟೆ ಪ್ರದೇಶದಲ್ಲಿ ಜಮಾಯಿಸಿರುವ ದೃಶ್ಯ ಕಂಡು ಬಂದಿದೆ. ಮಟ್ರೋದಲ್ಲಿ ಕೂಡ ಎಂದಿನಂತೆ ಪ್ರಯಾಣಿಕರು ಕಂಡು ಬಂದಿದ್ದಾರೆ. ಮೆಟ್ರೋ ಬಳಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ
6:57 AM, 13 Feb

ಬಂದ್; ಬೆಂಗಳೂರಿನಲ್ಲಿ ಕೆಲವೆಡೆ ರಸ್ತೆಗಳನ್ನು ಬಂದ್ ಮಾಡಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೊಸೂರು ರಸ್ತೆ, ನೈಸ್ ರಸ್ತೆ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ. ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ
6:53 AM, 13 Feb

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಿಡಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ತಿರುಪತಿಯಿಂದ ಮಂಗಳೂರಿಗೆ ಬಂದಿದ್ದ ಖಾಸಗಿ ಬಸ್ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ. ಮಂಗಳೂರಿನ ಪರಂಗಿಪೇಟೆಯಲ್ಲಿ ಈ ಘಟನೆ ನಡೆದಿದೆ.
6:48 AM, 13 Feb

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಗತ್ಯ ಭದ್ರತೆ ಕೈಗೊಂಡಿರುವ ಪೊಲೀಸರು. ಎಂದಿನಂತೆ ಮೆಟ್ರೋ ಸಂಚಾರ ನಿಗದಿತ ವೇಳಾಪಟ್ಟಿಯಂತೆ ಆರಂಭ. ಬೆಂಗಳೂರು ಪೊಲೀಸರು 180 ರೌಡಿ ಶೀಟರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕೆಲವೆಡೆ ಕನ್ನಡ ಸಂಘಟನೆಯವರು ರಸ್ತೆ ಬಂದ್ ಮಾಡಿದ್ದಾರೆ ಹಾಗೂ ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.
READ MORE

English summary
Karnataka Bandh Today Live News Updates: Get all the latest news and updates on Karnataka Bandh only on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X