ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್‌ ಕರೆ ಕೊಟ್ಟವರಿಗೆ ಹೈಕೋರ್ಟ್‌ ಆದೇಶದಿಂದ ಸಂಕಷ್ಟ

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಕರ್ನಾಟಕ ಬಂದ್ಗೆ ಕರೆ ಕೊಟ್ಟು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ನಷ್ಟ ಉಂಟು ಮಾಡಿದವರಿಂದ ಪರಿಹಾರವನ್ನು ವಸೂಲಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಮಂಗಳವಾರ ಕರ್ನಾಟಕ ಹೈಕೋರ್ಟ್ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಬಂದ್ ಕರೆ ಕೊಟ್ಟಿದ್ದರಿಂದ ಆಗಿರುವ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಬಗ್ಗೆ ಅಂದಾಜು ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಸೂಲಾತಿ ಆಯೋಗ ರಚನೆ ಮಾಡಲಾಗಿದೆ.

ದೆಹಲಿಯ ಗುಲಾಬಿ ಮಾರ್ಗದ ಐದು ಮೆಟ್ರೋ ನಿಲ್ದಾಣಗಳು ಬಂದ್ ದೆಹಲಿಯ ಗುಲಾಬಿ ಮಾರ್ಗದ ಐದು ಮೆಟ್ರೋ ನಿಲ್ದಾಣಗಳು ಬಂದ್

ಹೈಕೋರ್ಟ್ ಆದೇಶದಂತೆ ನಿವೃತ್ತ ನ್ಯಾಯಾಧೀಶ ಮೊಹಮ್ಮದ್ ಗೌಸ್ ನೇತೃತ್ವದ ನಿಯೋಗ ನಷ್ಟದ ಬಗ್ಗೆ ಅಂದಾಜು ಮಾಡಿ ವರದಿ ನೀಡಲಿದೆ. ಈ ವರದಿ ಅನ್ವಯ ಸರ್ಕಾರ ಬಂದ್‌ಗೆ ಕರೆ ಕೊಟ್ಟವರಿಂದ ಪರಿಹಾರವನ್ನು ವಸೂಲಿ ಮಾಡಲಿದೆ.

ದೆಹಲಿಯಲ್ಲಿ ಶಾಹಿನ್ ಬಾಗ್ ಬೆನ್ನಲ್ಲೇ ಮೆಟ್ರೋ ಸ್ಟೇಷನ್ ಬಂದ್! ದೆಹಲಿಯಲ್ಲಿ ಶಾಹಿನ್ ಬಾಗ್ ಬೆನ್ನಲ್ಲೇ ಮೆಟ್ರೋ ಸ್ಟೇಷನ್ ಬಂದ್!

Karnataka Bandh High Court Ordered For Recover Loss

6 ವಾರದಲ್ಲಿ ವಸೂಲಾತಿ ಆಯೋಗ ನೇಮಿಸಿ ಆಗಿರುವ ನಷ್ಟಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ವಿವಿಧ ಕಾರಣಕ್ಕೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟವರಿಗೆ ಹೈಕೋರ್ಟ್ ಆದೇಶದಿಂದ ಸಂಕಷ್ಟ ಎದುರಾಗಿದೆ.

ಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿ ಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿ

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ 2018ರಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನವಾದಾಗಲೂ ಬಂದ್‌ಗೆ ಕರೆ ನೀಡಲಾಗಿತ್ತು.

ಜನವರಿ 25, ಏಪ್ರಿಲ್ 12, ಫೆಬ್ರವರಿ 14ರಂದು ನಡೆದ ಬಂದ್‌ ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿತ್ತು. ಇಂತಹ ನಷ್ಟವನ್ನು ಬಂದ್‌ಗೆ ಕರೆ ನೀಡಿದವರಿಂದಲೇ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

English summary
Karnataka high court ordered to recover the loss happen in the time of Karnataka bandh. Retired judge appointed to submit report on the loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X