ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂದ್; ಹಠಮಾರಿ ಸಿಎಂ, ನಮ್ಮ ನಡುವಿನ ಫೈಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 3; "ಡಿಸೆಂಬರ್ 5ರ ಕರ್ನಾಟಕ ಬಂದ್‌ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನಮ್ಮ ನಡುವಿನ ಫೈಟ್" ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಲು ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಡಿಸೆಂಬರ್ 5ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಈಗಾಗಲೇ ಬಂದ್‌ಗೆ ಸಿದ್ಧತೆ ನಡೆಸುತ್ತಿದೆ.

ಡಿ.5 ರಂದು ಕರ್ನಾಟಕ ಬಂದ್‌ ಯಶಸ್ಸಿಗೆ ಕರ್ನಾಟಕ ರಕ್ಷಣಾ ವೇದಿಕೆ ಕರೆ ಡಿ.5 ರಂದು ಕರ್ನಾಟಕ ಬಂದ್‌ ಯಶಸ್ಸಿಗೆ ಕರ್ನಾಟಕ ರಕ್ಷಣಾ ವೇದಿಕೆ ಕರೆ

ಬಂದ್ ಕುರಿತು ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, "ಬಹಳ ಗಂಭೀರವಾದ ವಿಚಾರದಲ್ಲಿ ನಾವು ಕರ್ನಾಟಕ ಬಂದ್ ಕರೆದಿದ್ದೇವೆ. ಡಿಸೆಂಬರ್ 5ರಂದು ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ" ಎಂದರು.

ಡಿ. 5ರ ಕರ್ನಾಟಕ ಬಂದ್; ಬಿಬಿಎಂಪಿ ಆಯುಕ್ತರಿಂದ ಎಚ್ಚರಿಕೆ ಡಿ. 5ರ ಕರ್ನಾಟಕ ಬಂದ್; ಬಿಬಿಎಂಪಿ ಆಯುಕ್ತರಿಂದ ಎಚ್ಚರಿಕೆ

Karnataka Bandh Fight Between Yediyurappa And Vatal Nagaraj

"ಈ ಬಂದ್ ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನದಾಗಿ ಯಡಿಯೂರಪ್ಪ ಮತ್ತು ನಮ್ಮ ನಡುವಿನ ಫೈಟ್. ಬಹಳ ಹಠಮಾರಿ ಮುಖ್ಯಮಂತ್ರಿ. ಇದರಿಂದ ಅನ್ಯಾಯ ಆಗುತ್ತದೆ ಎಂದರೆ ಏನಾದರೂ ಆಗಲಿ ನೋಡಿಕೊಳ್ಳುವೆ ಎನ್ನುವ ಹಠಮಾರಿ" ಎಂದು ವಾಟಾಳ್ ನಾಗರಾಜ್ ದೂರಿದರು.

ಡಿ.5ರ ಕರ್ನಾಟಕ ಬಂದ್; ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್ ಡಿ.5ರ ಕರ್ನಾಟಕ ಬಂದ್; ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್

"ನಿಗಮ ಸ್ಥಾಪನೆ ಮಾಡುವ ತೀರ್ಮಾನ ಕೈಗೊಂಡಾಗ ಅವರ ಬಿಜೆಪಿ ಪಕ್ಷದ ನಾಯಕರು, ಶಾಸಕರು, ಮಂತ್ರಿಗಳು ಕನ್ನಡಿಗರಿಗೆ ಅನ್ಯಾಯ ಆಗುತ್ತದೆ ಎಂದು ಮಾತನಾಡಿಲ್ಲ. ವಿರೋಧ ಪಕ್ಷಗಳ ಮೇಲೆ ನಿರೀಕ್ಷೆ ಇತ್ತು. ಅವರು ಸಹ ಮಾತನಾಡಿಲ್ಲ" ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.

"ಈಗಿನ ಚುನಾವಣೆ ಎಂಬುದು ಯಾರನ್ನು ಬೇಕಾದರೂ ಮಾರಾಟ ಮಾಡಬಹುದು ಎಂದು ಆಗಿದೆ. ಅಧಿಕಾರ ಬೇಕು ಎಂದರೆ ವಿಧಾನಸೌಧ, ಸುವರ್ಣ ವಿಧಾನಸೌಧವನ್ನು ಮಾರಾಟ ಮಾಡುತ್ತಾರೆ. ಇದನ್ನು ವಿರೋಧಿಸುವ, ಅಡ್ಡಿ ಪಡಿಸುವ ರಾಜಕಾರಣಿ ಇಲ್ಲೂ ಈಗ ಇಲ್ಲ" ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

"ಯಡಿಯೂರಪ್ಪ ಮಹಾ ದ್ವೇಷಿ. ಅವರಿಗೆ ದ್ವೇಷ ಬಿಟ್ಟರೆ ಬೇರೆ ಏನೂ ಇಲ್ಲ. 24 ಗಂಟೆಯೂ ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ತೆಗಿಬೇಕು, ಅಧಿಕಾರದಿಂದ ತೆಗೆದರೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಚಿಂತನೆ ನಡೆಸುತ್ತಾರೆ. ಇವರಿಗೆ ತತ್ವ, ಸಿದ್ಧಾಂತ ಯಾವುದೂ ಇಲ್ಲ" ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

Recommended Video

10 ಕೋಟಿ ಕೊಡ್ತೀನಿ ನನ್ನ ಬಿಡುಗಡೆ ಮಾಡಿ ಅಂತ ಹಟ | Shashikala | Oneindia Kannada

"ಕನ್ನಡ ಒಕ್ಕೂಟ ಬಂದ್ ಕರೆದಿರುವುದು ಅವರಿಗೆ ಸವಾಲು ಆಗಿ ಬಿಟ್ಟಿದೆ. ಮರಾಠ ಅಭಿವೃದ್ಧಿ ನಿಗಮ ರಚನೆ ಆದೇಶ ವಾಪಸ್ ಪಡೆಯಲು ನವೆಂಬರ್ 30ರ ಗಡುವು ನೀಡಲಾಗಿತ್ತು. ಆದರೆ, ಅವರು ಅದನ್ನು ವಾಪಸ್ ಪಡೆಯಲಿಲ್ಲ" ಎಂದು ವಾಟಾಳ್ ನಾಗರಾಜ್ ಹೇಳಿದರು.

English summary
December 5 Karnataka band fight between Yediyurappa and Vatal Nagaraj. Bandh called by Kannada okkuta against Karnataka government for approving to set up Maratha Development Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X