ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕರ ಓವರ್ ಟೈಮ್ ಕೆಲಸದ ಮಿತಿ ಹೆಚ್ಚಳ: ತಿದ್ದುಪಡಿ ಮಸೂದೆಗೆ ಅಂಗೀಕಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಕರ್ನಾಟಕ ವಿಧಾನಸಭೆ ಶುಕ್ರವಾರ ಅನುಮೋದನೆ ನೀಡಿದೆ. ಕೈಗಾರಿಕಾ ವಿವಾದಗಳು ಮತ್ತು ಇತರೆ ಕೆಲವು ಕಾನೂನುಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2020ಅನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿತು. ಈ ಮಸೂದೆಗೆ ವ್ಯಾಪಾರ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದರೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಈ ಮಸೂದೆ 'ಕಾರ್ಮಿ ವಿರೋಧಿ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರ ಹೊರತಾಗಿ ಅಧಿವೇಶನದಲ್ಲಿ ಹೆಚ್ಚಿನ ವಿರೋಧವಿಲ್ಲದೆ ಅಂಗೀಕಾರಗೊಂಡಿತು.

ಹಾಲಿ ಅಸ್ತಿತ್ವದಲ್ಲಿರುವ ಕಾನೂನಿಗೆ ಮೂರು ಪ್ರಮುಖ ತಿದ್ದುಪಡಿಗಳನ್ನು ಮಾಡಲಾಗಿದೆ. 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಸರ್ಕಾರದ ಅನುಮತಿ ಇಲ್ಲದೆ ಉದ್ಯೋಗ ಕಡಿತ ಮಾಡುವಂತಿರಲಿಲ್ಲ. ಈ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಆ ಮಿತಿಯನ್ನು 300ಕ್ಕೆ ಏರಿಸಲಾಗಿದೆ.

ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?

ಕೆಲಸದ ಅವಧಿಯ ಮಿತಿಯನ್ನು 75 ಗಂಟೆಯಿಂದ 125ಕ್ಕೆ ಹೆಚ್ಚಳ ಮಾಡಲಾಗಿದೆ. ಜತೆಗೆ ಶಕ್ತಿ ಸಂಪನ್ಮೂಲ ಬಳಕೆ ಮಾಡುವ ಕಾರ್ಖಾನೆಗಳಲ್ಲಿನ ಉದ್ಯೋಗಿಗಳ ಮಿತಿಯನ್ನು 10 ರಿಂದ 20ಕ್ಕೆ ಮತ್ತು ಶಕ್ತಿ ಬಳಕೆ ಮಾಡದ ಕಾರ್ಖಾನೆಗಳಲ್ಲಿ 20 ರಿಂದ 40ಕ್ಕೆ ಉದ್ಯೋಗಿಗಳ ಮಿತಿಯನ್ನು ಹೆಚ್ಚಿಸುವಂತೆ ತಿದ್ದುಪಡಿ ಮಾಡಲಾಗಿದೆ. ಮುಂದೆ ಓದಿ.

ಮೂರು ಕಾಯ್ದೆಗಳ ತಿದ್ದುಪಡಿ

ಮೂರು ಕಾಯ್ದೆಗಳ ತಿದ್ದುಪಡಿ

ಕೈಗಾರಿಕಾ ವಿವಾದಗಳ ಕಾಯ್ದೆ, ಕಾರ್ಖಾನೆಗಳ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದತಿ) ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮಸೂದೆಗಳು ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆದುಕೊಂಡಿವೆ.

ಉದ್ಯಮ ಚಟುವಟಿಕೆಗೆ ಅನುಕೂಲ

ಉದ್ಯಮ ಚಟುವಟಿಕೆಗೆ ಅನುಕೂಲ

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಈ ಮಸೂದೆಗಳನ್ನು ಮಂಡಿಸಿದರು. ಉದ್ಯಮ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಅವಧಿಗೂ ಮೀರಿದ ಸಮಯ ಕೆಲಸ ಮಾಡಲು ಬಯಸುವವರಿಗೆ ಅವಕಾಶ ಕಲ್ಪಿಸಲು ನೆರವಾಗಲಿದೆ ಎಂದರು.

ಉಪಕರಣಗಳ ಖರೀದಿಯಲ್ಲಿ ಹಗರಣವಾಗಿಲ್ಲ, ತನಿಖೆಯೂ ಬೇಕಿಲ್ಲ: ಸುಧಾಕರ್ಉಪಕರಣಗಳ ಖರೀದಿಯಲ್ಲಿ ಹಗರಣವಾಗಿಲ್ಲ, ತನಿಖೆಯೂ ಬೇಕಿಲ್ಲ: ಸುಧಾಕರ್

ಪ್ರಿಯಾಂಕ್ ಖರ್ಗೆ ವಿರೋಧ

ಪ್ರಿಯಾಂಕ್ ಖರ್ಗೆ ವಿರೋಧ

ಉದ್ಯೋಗಿಗಳ ಓವರ್ ಟೈಮ್ ಅವಧಿ ಹೆಚ್ಚಿಸುವ ಪ್ರಸ್ತಾಪ ಮುಂದಿರಿಸುತ್ತಿದ್ದಂತೆಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, 'ಇದು ಕಾರ್ಮಿಕ ವಿರೋಧಿ. ಉದ್ಯಮ ವ್ಯವಹಾರ ಸುಗಮಗೊಳಿಸುವ ನೆಪದಲ್ಲಿ ಕಾರ್ಯ ಸ್ಥಿತಿಯನ್ನು ಭಯಾನಕಗೊಳಿಸಲಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಂ ಹೆಬ್ಬಾರ್, ಸುದೀರ್ಘ ಪಾಳಿಗಳಲ್ಲಿ ಕೆಲಸ ಮಾಡಲು ಉದ್ಯೋಗಿಗಳು ಇಚ್ಛಿಸುತ್ತಿದ್ದಾರೆ ಎಂದು ಹೇಳಿದರು.

Recommended Video

Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada
ಫ್ಯಾಕ್ಟರಿಗಳನ್ನು ಮುಚ್ಚಿಸಲಾಗದು

ಫ್ಯಾಕ್ಟರಿಗಳನ್ನು ಮುಚ್ಚಿಸಲಾಗದು

'ನಾವು ಕೋವಿಡ್ 19ರ ನಡುವೆ ಬದುಕುತ್ತಿದ್ದೇವೆ. ನಾವು ಫ್ಯಾಕ್ಟರಿಗಳನ್ನು ಮುಚ್ಚಿಬಿಡಲು ಸಾಧ್ಯವಿಲ್ಲ. ಅವುಗಳನ್ನು ನಡೆಸುವುದು ನಮಗೆ ಅನಿವಾರ್ಯ. ಹೆಚ್ಚು ಸಮಯ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಿಗಳು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ನಾವು ಅವಕಾಶ ನೀಡುತ್ತಿದ್ದೇವೆ ಅಷ್ಟೇ' ಎಂದರು.

English summary
Karnataka Assembly passes amendments to increase over time working hours for labourers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X