ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸ ಮತ ಯಾಚನೆ : ನೇರ ಪ್ರಸಾರಕ್ಕೆ ಸುಪ್ರೀಂ ಸೂಚನೆ

By Gururaj
|
Google Oneindia Kannada News

ಬೆಂಗಳೂರು, ಮೇ 19 : ದೇಶದ ಕಣ್ಣು ಕರ್ನಾಟಕದ ವಿಧಾನಸೌಧದ ಮೇಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತು ಮಾಡಬೇಕಿದೆ. ವಿಧಾನಸಭೆ ಕಲಾಪ ಈಗಾಗಲೇ ಆರಂಭವಾಗಿದೆ.

ಆನಂದ್ ಸಿಂಗ್, ಪ್ರತಾಪ್ ಗೌಡ ನಾಪತ್ತೆ : ಕಾಂಗ್ರೆಸ್ಸಿಗೆರಡು ಕಮ್ಮಿ ಆನಂದ್ ಸಿಂಗ್, ಪ್ರತಾಪ್ ಗೌಡ ನಾಪತ್ತೆ : ಕಾಂಗ್ರೆಸ್ಸಿಗೆರಡು ಕಮ್ಮಿ

ಹಂಗಾಂಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ವಿಧಾನಸಭೆ ಕಲಾಪವನ್ನು ನಡೆಸಿಕೊಡುತ್ತಿದ್ದಾರೆ. ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌-ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

Karnataka Assembly Floor Test : SC allows live telecast of proceedings

ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್ ವಿಶ್ವಾಸಮತ ಯಾಚನೆ ಕಲಾಪವನ್ನು ನೇರ ಪ್ರಸಾರ ಮಾಡಬೇಕು ಎಂದು ಸೂಚನೆ ನೀಡಿದೆ. ಇದರಿಂದಾಗಿ ಪಾದರ್ಶಕವಾಗಿ ವಿಶ್ವಾಸಮತ ಸಾಬೀತು ಪ್ರಕ್ರಿಯೆ ನಡೆಯಲಿದೆ.

ಕರ್ನಾಟಕ ವಿಶ್ವಾಸಮತ LIVE: ತಾಜ್ ವೆಸ್ಟೆಂಡ್ ನಲ್ಲಿ ಪತ್ತೆಯಾದ ಮಿಸ್ಸಿಂಗ್ ಶಾಸಕರು!ಕರ್ನಾಟಕ ವಿಶ್ವಾಸಮತ LIVE: ತಾಜ್ ವೆಸ್ಟೆಂಡ್ ನಲ್ಲಿ ಪತ್ತೆಯಾದ ಮಿಸ್ಸಿಂಗ್ ಶಾಸಕರು!

ಕರ್ನಾಟಕದ ಹಲವು ಖಾಸಗಿ ಚಾನೆಲ್‌ಗಳು ಕಲಾಪದ ನೇರ ಪ್ರಸಾರವನ್ನು ಮಾಡಲಿವೆ. ಇದನ್ನು ಬಳಸಿಕೊಳ್ಳಬಹುದು. ಪಾರದರ್ಶಕವಾಗಿ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕು ಎಂದು ಸುಪ್ರೀಂಕೋರ್ಟ್ ಶನಿವಾರ ಸೂಚನೆ ನೀಡಿದೆ.

ವಿಧಾನಸಭೆ ಕಲಾಪ ಆರಂಭವಾಗಿದ್ದು, ಎಲ್ಲಾ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಭೋಜನ ವಿರಾಮದ ಬಳಿಕ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭವಾಗಲಿದೆ.

English summary
Karnataka Assembly Floor Test Updates. Supreme Court allows live telecast of assembly proceedings. The crucial Karnataka trust vote is set to be held on Saturday, May 19, 2018 at 4 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X