ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷ

|
Google Oneindia Kannada News

Recommended Video

      Live : Karnataka Assembly Session 2019 | Karnataka Floor Test

      ಬೆಂಗಳೂರು, ಜುಲೈ 22: ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ.

      ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು? ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?

      ಒಂದು ಗಂಟೆ ತಡವಾಗಿ ಆರಂಭವಾದ ಸದನದಲ್ಲಿ ಮೊದಲು ಸ್ಪೀಕರ್ ರಮೇಶ್ ಕುಮಾರ್ ಅವರು ಕ್ರಿಯಾ ಲೋಪದ ಕುರಿತಾದ ರೂಲಿಂಗ್ ಪ್ರಕಟಿಸಿದರು. ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡುವುದು ಶಾಸಕಾಂಗ ಪಕ್ಷದ ನಾಯಕರ ಹಕ್ಕು ಎಂದು ಹೇಳಿದರು.

      ವಿಶ್ವಾಸಮತಕ್ಕೆ ಮುನ್ನ ಸಿಎಂ ಕುಮಾರಸ್ವಾಮಿ ಮಹತ್ವದ ಪತ್ರಿಕಾ ಪ್ರಕಟಣೆವಿಶ್ವಾಸಮತಕ್ಕೆ ಮುನ್ನ ಸಿಎಂ ಕುಮಾರಸ್ವಾಮಿ ಮಹತ್ವದ ಪತ್ರಿಕಾ ಪ್ರಕಟಣೆ

      ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು ಅತೃಪ್ತ ಶಾಸಕರಿಗೂ ಬಿಜೆಪಿಗೂ ಸಂಬಂಧವಿದೆ ಎಂದು ಆರೋಪಿಸಿದರು. ಅದಕ್ಕೆ ಸಂಬಂಧಿಸಿದಂತೆ ಅವರು ವಿವಿಧ ವರದಿಗಳನ್ನು, ಆಡಿಯೋ ಸಂಭಾಷಣೆಗಳ ವಿವರಗಳನ್ನು ಪ್ರಸ್ತಾಪಿಸಿದರು.

      'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ? 'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ?

      Karnataka Assembly floor Test live updates in Kannada


      ಕೃಷ್ಣ ಬೈರೇಗೌಡರ ಭಾಷಣದ ವೇಳೆ ಅನೇಕ ಬಾರಿ ಗದ್ದಲಗಳು ಉಂಟಾದವು. ಈ ಸಂದರ್ಭದಲ್ಲಿ ಆಪರೇಷನ್ ಕಮಲದ ಕುರಿತು ಸಹ ಚರ್ಚೆ ನಡೆಯಿತು.

      ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

      ಇಂದು ವಿಶ್ವಾಸಮತ ಯಾಚನೆ ನಡೆಸುವುದು ಬೇಡ. ಎರಡು ದಿನ ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

      ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

      ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಗೊಂದಲ ಬಗೆಹರಿಸಲು ಸ್ಪೀಕರ್ ಮುಂದಾಗಬೇಕು. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಅಥವಾ ಅವರನ್ನು ಅನರ್ಹಗೊಳಿಸುವುದೇ ಎಂದು ನಿರ್ಧರಿಸಬೇಕು ಎಂದು ಕಾಂಗ್ರೆಸ್ ಕೋರಿದೆ.

      ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ? ಗೊಂದಲ, ದ್ವಂದ್ವ ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ? ಗೊಂದಲ, ದ್ವಂದ್ವ

      ಇಂದು ಕೂಡ ಸದನದಲ್ಲಿ ಚರ್ಚೆ ನಡೆಸಿ ವಿಶ್ವಾಸಮತ ಯಾಚನೆಯನ್ನು ಮುಂದೂಡಲು ಮೈತ್ರಿ ನಾಯಕರು ಪ್ರಯತ್ನಿಸುತ್ತಿದ್ದಾರೆ.

      ವಿಶ್ವಾಸಮತ: ಸುಪ್ರೀಂಕೋರ್ಟ್ ಕದ ತಟ್ಟಿದ ಪಕ್ಷೇತರ ಶಾಸಕರುವಿಶ್ವಾಸಮತ: ಸುಪ್ರೀಂಕೋರ್ಟ್ ಕದ ತಟ್ಟಿದ ಪಕ್ಷೇತರ ಶಾಸಕರು

      ವಿಶ್ವಾಸಮತಕ್ಕೂ ಮುನ್ನ ಬಿಎಸ್‌ಪಿ ನಾಯಕಿ ಮಾಯಾವತಿ, ಕುಮಾರಸ್ವಾಮಿ ಸರ್ಕಾರದ ಪರ ನಿಲ್ಲಲು ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಕರ್ನಾಟಕದಲ್ಲಿರುವ ಬಿಎಸ್‌ಪಿ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

      Newest FirstOldest First
      11:51 PM, 22 Jul

      ಬಿಜೆಪಿಯ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಸಹ ಕಲಾಪವನ್ನು ಮುಂದೂಡಿ ಎದ್ದು ಹೊರಗೆ ನಡೆದರು.
      11:48 PM, 22 Jul

      ಸಿದ್ದರಾಮಯ್ಯ ಅವರು ನೀಡಿದ ಸಲಹೆಯಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಂಜೆ ಆರು ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಬೇಕು ಎಂದು ಹೇಳಿ, ಕಲಾಪವನ್ನು ನಾಳೆ 10 ಕ್ಕೆ ಪ್ರಾರಂಭ ಮಾಡಲಾಗುವುದು ಎಂದು ಹೇಳಿ ಹೊರಟರು.
      11:45 PM, 22 Jul

      ನಾಳೆ ಐದು ಗಂಟೆಗೆ ಸಿಎಂ ಕುಮಾರಸ್ವಾಮಿ ಚರ್ಚೆಯ ಮೇಲೆ ಉತ್ತರ ಹೇಳುತ್ತಾರೆ. ಅಂತಿಮವಾಗಿ ಆರು ಗಂಟೆಗೆ ಮತಕ್ಕೆ ಹಾಕಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಸ್ಪಷ್ಟವಾಗಿ ಹೇಳಿ, ನಾಳೆ ಹತ್ತು ಗಂಟೆಗೆ ಕಲಾಪವನ್ನು ಮುಂದಕ್ಕೆ ಹಾಕಿದರು.
      11:43 PM, 22 Jul

      ಆರು ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಯುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
      11:42 PM, 22 Jul

      ನಾಳೆ ಸಂಜೆ 8 ಗಂಟೆಗೆ ವಿಶ್ವಾಸಮತ ಅಂಗೀಕಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
      11:30 PM, 22 Jul

      ಅಪ್ಪನಿಗೆ ಹುಟ್ಟಿದ್ದೀನಿ, ಅಪ್ಪನಿಗೆ ಹುಟ್ಟಿದ ರಾಜಕೀಯ ಮಾಡುತ್ತೀನಿ ಎಂದು ತೀವ್ರ ಸಿಟ್ಟಿನಿಂದ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಾಂವಿಧಾನಿಕ ಪದವನ್ನು ಬಳಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯ ಬೊಮ್ಮಾಯಿ ಅವರು ಸಹ ಕೆಟ್ಟದಾಗಿ ಮಾತನಾಡಿದರು. ಸದನದಲ್ಲಿ ಗದ್ದಲ ಪ್ರಾರಂಭವಾಯಿತು.
      11:24 PM, 22 Jul

      ಸ್ಪೀಕರ್ ಅವರು ಅತೃಪ್ತ ಶಾಸಕರ ಕುರಿತು ಇಂದು ರೂಲಿಂಗ್ ನೀಡಿದ್ದಾರೆ. ನಾಳೆ ಅವರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಹಾಗಿದ್ದಾಗ ಅತೃಪ್ತ ಶಾಸಕರಿಗೆ ವಾಪಸ್ ಬರಲು ಸಹ ಅವಕಾಶ ನೀಡದೇ ವಿಶ್ವಾಸಮತ ಅಂಗೀಕಾರ ಮಾಡಿದರೆ ಅದು ನ್ಯಾಯವಲ್ಲ ಎಂದು ಜೆಡಿಎಸ್ ಶಾಸಕ ಶೀವಲಿಂಗೇ ಗೌಡ ಹೇಳಿದರು.
      Advertisement
      11:00 PM, 22 Jul

      ಗದ್ದಲ ಹೆಚ್ಚಾಗಿದ್ದು, ಆಡಳಿತ ಪಕ್ಷದ ಸದಸ್ಯರು ನಾಳೆಗೆ ಸದನ ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ. ದೇಶಪಾಂಡೆ ಅವರು ಮಾತನಾಡುತ್ತಿದ್ದು, ಅವರೂ ಸಹ ನಾಳೆಗೆ ಸದನ ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ.
      10:33 PM, 22 Jul

      ಊಟದ ವಿರಾಮವನ್ನೂ ತೆಗೆದುಕೊಳ್ಳದೆ ಕಲಾಪ ಜಾರಿಯಲ್ಲಿದೆ. ಕೆಲವು ಆಡಳಿತ ಪಕ್ಷದ ಸದಸ್ಯರು ಕಲಾಪವನ್ನು ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ.
      10:18 PM, 22 Jul

      ಹಲವು ಶಾಸಕರು ಸಕ್ಕರೆ ಖಾಯಿಲೆ ರೋಗಿಗಳಿದ್ದಾರೆ, ಅವರಿಗೆ ಊಟಕ್ಕೆ ತಡವಾಗುತ್ತಿದೆ. ನಾಳೆಗೆ ವಿಶ್ವಾಸಮತ ಯಾಚನೆ ಮುಂದೂಡಿ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯ ಹೇರಿದರು. ಆದರೆ ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
      10:13 PM, 22 Jul

      ಊಟದ ವ್ಯವಸ್ಥೆ ಮಾಡಿಕೊಡಿ, ನಾವೆಲ್ಲ ಊಟ ಮಾಡುತ್ತೇವೆ ರಾತ್ರಿ ಒಂದು ಗಂಟೆ ಆದರೂ ಸಹ ಇಲ್ಲೇ ಇರುತ್ತೇವೆ, ಆಡಳಿತ ಪಕ್ಷದವರ ಮಾತು ಕೇಳುತ್ತೇವೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಕೇಳಿದರು. ಆದರೆ ಆಡಳಿತ ಪಕ್ಷದ ಕೆಲವು ಸದಸ್ಯರು ಸದನವನ್ನು ಮುಂದೂಡಲು ಕೇಳಿದರು.
      9:35 PM, 22 Jul

      ನಾನು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಧ್ಯಮಗಳಿಗೆ ಪತ್ರವೊಂದು ಹರಿದಾಡುತ್ತಿದೆ. ಆ ಪತ್ರದಲ್ಲಿ ನನ್ನ ಸಹಿಯನ್ನು ನಕಲು ಮಾಡಲಾಗುತ್ತಿದೆ ನನ್ನ ರಾಜೀನಾಮೆಗೆ ಕೊಡಿಸಿ ಯಾರ್ಯಾರು ಸಿಎಂ ಆಗಲು ಆತುರದಿಂದಾದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
      Advertisement
      9:32 PM, 22 Jul

      ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ, ಎಚ್‌.ಕೆ.ಪಾಟೀಲ್ ಅವರು ಹೇಳಿದ ಮಾತುಗಳಿಗೆ ಬೆಂಬಲಿಸಿ ಮಾತನಾಡಿ, ಈ ಹಿಂದೆ ಸಹ ಸರ್ಕಾರಕ್ಕೆ ಬೆನ್ನು ತೋರಿದ್ದ ಶಾಸಕರು ಮತ್ತೆ ವಾಪಸ್ ಬಂದಿರುವ ಉದಾಹರಣೆಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.
      9:31 PM, 22 Jul

      ಇಂದು ವಿಶ್ವಾಸಮತ ಯಾಚನೆ ಬೇಡ ಎಂದು ಎಚ್‌.ಕೆ.ಪಾಟೀಲ್ ಅವರು ಸ್ಪೀಕರ್ ಅವರ ಬಗ್ಗೆ ಮನವಿ ಮಾಡಿದರು. ಇಂದು ಸ್ಪೀಕರ್ ಅವರು ರೂಲಿಂಗ್ ನೀಡಿದ್ದಾರೆ, ಆ ಭಯದಿಂದ ಅವರು ಸದನಕ್ಕೆ ಬರಬಹುದು ಎಂದು ಎಚ್‌.ಕೆ.ಪಾಟೀಲ್‌ ಅವರು ಹೇಳಿದರು.
      9:29 PM, 22 Jul

      ಅತೃಪ್ತ ಶಾಸಕರಿಗೆ ಯಾವುದೇ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಿರಲಿಲ್ಲವೆಂದುಸ ಸ್ಪೀಕರ್‌ಗೆ ಡಿಜಿಪಿ ಅವರು ಸ್ಪಷ್ಟಪಡಿಸಿದ್ದು, ಅಂದಿನ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ನೀಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್ ಅವರು ಸದನಕ್ಕೆ ಸಹ ಸ್ಪಷ್ಟನೆ ನೀಡಿದರು.
      9:16 PM, 22 Jul

      ಎಚ್‌.ಡಿ.ರೇವಣ್ಣ ಅವರು ಮಾತನಾಡಿ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ ಹಾಗಿದ್ದ ಮೇಲೆ ಇಂದು ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತವಲ್ಲ ಎಂದು ಎಚ್‌.ಡಿ.ರೇವಣ್ಣ ಹೇಳಿದರು. ಅರವಿಂದ ಲಿಂಬಾವಳಿ ಅವರು ಮಧ್ಯೆ ಪ್ರವೇಶಿಸಿದರು ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕ-ಮಕಿ ನಡೆಯಿತು.
      9:15 PM, 22 Jul

      ಎಚ್‌.ಡಿ.ರೇವಣ್ಣ ಅವರು ಮಾತನಾಡಿ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ ಹಾಗಿದ್ದ ಮೇಲೆ ಇಂದು ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತವಲ್ಲ ಎಂದು ಎಚ್‌.ಡಿ.ರೇವಣ್ಣ ಹೇಳಿದರು.
      8:53 PM, 22 Jul

      'ಶುಕ್ರವಾರವೇ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ವಚನ ನೀಡಿದ್ದರು, ಸೋಮವಾರ ವಿಶ್ವಾಸಮತ ಯಾಚನೆ ಮಾಡುತ್ತೇವೆ ಎಂದು ಅಂತೆಯೇ ನಡೆದುಕೊಳ್ಳಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮಾತನಾಡಲಿ, ನಾವು ಕೇಳುತ್ತೇವೆ, 12 ಗಂಟೆ ಆದರೂ ಇಲ್ಲೇ ಕೂತಿರುತ್ತೇವೆ, ಇಂದೇ ವಿಶ್ವಾಸಮತ ಯಾಚನೆ ಮುಗಿಸಲಿ' ಎಂದು ಯಡಿಯೂರಪ್ಪ ಅವರು ಹೇಳಿದರು.
      8:49 PM, 22 Jul

      ಗದ್ದಲ ಮುಗಿದಿದ್ದು, ಯಡಿಯೂರಪ್ಪ ಅವರಿಗೆ ಮತ್ತೆ ಮಾತನಾಡಲು ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಅವರಿಗೆ ಚುಟುಕಾಗಿ ಮಾತನಾಡಲು ಕೋರಲಾಗಿದೆ.
      8:46 PM, 22 Jul

      ಪ್ರತಿಭಟನೆ ಮಾಡುತ್ತಿರುವ ಆಡಳಿತ ಪಕ್ಷದ ಸದಸ್ಯರನ್ನು ಸಿದ್ದರಾಮಯ್ಯ ಅವರು ಗದರಿ ತಮ್ಮ-ತಮ್ಮ ಸ್ಥಾನಗಳಿಗೆ ವಾಪಸ್ ತೆರಳುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರು ಹೇಳಿದ ಕೂಡಲೇ ಎಲ್ಲರೂ ತಮ್ಮ-ತಮ್ಮ ಸ್ಥಾನಗಳಿಗೆ ವಾಪಸ್ ತೆರಳಿದರು.
      8:44 PM, 22 Jul

      ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. 'ನ್ಯಾಯ ಬೇಕು, ಸಂವಿಧಾನ ಉಳಿಯಲಿ' ಎಂಬಿತ್ಯಾದಿ ಘೋಷಣೆಗಳನ್ನು ಆಡಳಿತ ಪಕ್ಷದ ಸದಸ್ಯರು ಕೂಗುತ್ತಿದ್ದಾರೆ.
      8:36 PM, 22 Jul

      ಇಂದೇ ವಿಶ್ವಾಸಮತ ಅಂಗೀಕಾರ ಮಾಡಬೇಕು ಎಂಬ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಗಲಾಟೆ ಪ್ರಾರಂಭ ಮಾಡಿದರು. ಇದಕ್ಕೆ ರಮೇಶ್ ಕುಮಾರ್ ಅವರು ಸಿಟ್ಟಾದರು.
      8:35 PM, 22 Jul

      ರಾತ್ರಿ 12 ಗಂಟೆ ಆದರೂ ಸರಿ ನಾವು ಇಲ್ಲೇ ಇರುತ್ತೀವಿ ಇಂದೇ ವಿಶ್ವಾಸಮತ ಅಂಗೀಕಾರ ಆಗಲಿ ಎಂದು ಯಡಿಯೂರಪ್ಪ ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಾನೂ ಸಹ ಇಲ್ಲೇ ಇರುತ್ತೇನೆ ಎಂದು ಹೇಳಿದರು.
      8:33 PM, 22 Jul

      ಕಲಾಪ ಪುನರರಾಂಭವಾಗಿದ್ದು, ವಿಪಕ್ಷ ನಾಯಕ ಯಡಿಯೂರಪ್ಪ ಅವರು ಮಾತನಾಡುತ್ತಿದ್ದಾರೆ.
      8:25 PM, 22 Jul

      ಸ್ಪೀಕರ್ ರಮೇಶ್ ಕುಮಾರ್ ಅವರ ಮನವೊಲಿಸಲು ದೋಸ್ತಿ ನಾಯಕರು ನಿರತರಾಗಿದ್ದಾರೆ. ನಾಳೆ ಒಂದು ದಿನ ಸಮಯಾವಕಾಶ ಕೊಡಬೇಕು ಎಂದು ದೋಸ್ತಿ ನಾಯಕರು ಸ್ಪೀಕರ್ ಅವರ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಸ್ಪೀಕರ್ ಅವರು ಇದಕ್ಕೆ ಒಪ್ಪುತ್ತಿಲ್ಲ ಎನ್ನಲಾಗಿದೆ.
      8:14 PM, 22 Jul

      ಹತ್ತು ನಿಮಿಷಕ್ಕೆ ಮುಂದೂಡಿದ್ದ ಸದನ ಒಂದೂವರೆ ಗಂಟೆ ಆದರೂ ಇನ್ನೂ ಪ್ರಾರಂಭವಾಗಿಲ್ಲ.
      7:07 PM, 22 Jul

      ಇಂದೇ ವಿಶ್ವಾಸಮತ ಯಾಚನೆ ಮಾಡಿ, ಇಲ್ಲವಾದರೆ ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ, ಬೇರೆ ಯಾರಾದರೂ ಹೊಸ ಸ್ಪೀಕರ್ ಅನ್ನು ಹುಡುಕಿಕೊಳ್ಳಿ ಎಂದು ರಮೇಶ್ ಕುಮಾರ್ ಅವರು ಹೇಳಿದ್ದಾರೆ.
      7:06 PM, 22 Jul

      ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಭೇಟಿ ನೀಡಿದರು. ಆ ನಂತರ ಬಿಜೆಪಿ ಪ್ರಮುಖ ಮುಖಂಡರು ಸಹ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದರು.
      6:22 PM, 22 Jul

      ಆಡಳಿತ ಪಕ್ಷದ ಸದಸ್ಯರು ಗದ್ದಲ ಆರಂಭಿಸಿದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಹತ್ತು ನಿಮಿಷದ ಕಾಲ ಮುಂದಕ್ಕೆ ಹಾಕಿದರು.
      6:21 PM, 22 Jul

      ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಆಡಳಿತ ಪಕ್ಷದ ಶಾಸಕರು ಗದ್ದಲ ಆರಂಭಿಸಿದ್ದಾರೆ.
      READ MORE

      English summary
      Curiosity over Karnataka government Floor Test is continuing its not at cleared that government will seeks the vote of confidence today.Karnataka Assembly floor Test live updates in Kannada.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X