• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ, 2 ದಿನ ಸರ್ಕಾರ ಸೇಫ್

|
   Karnataka Assembly Live : 2nd Day CM HD Kumaraswamy Floor Test 2019 | BS Yeddyuppa

   ಬೆಂಗಳೂರು, ಜುಲೈ 19: ವಿಶ್ವಾಸಮತ ಯಾಚನೆಯನ್ನು ವ್ಯವಸ್ಥಿತವಾಗಿ ಮುಂದೂಡಲು ಯಶಸ್ವಿಯಾಗಿರುವ ಆಡಳಿತ ಪಕ್ಷದ ಸದಸ್ಯರು ಶುಕ್ರವಾರವಾದರೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

   Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

   ನಿನ್ನೆ ನಡೆದ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮೇಲೆ ಭಾಷಣ ಆರಂಭಿಸಿದ್ದಾಗ ಕಾರ್ಯಲೋಪವನ್ನು ಎತ್ತಿದ ಸಿದ್ದರಾಮಯ್ಯ ಅವರು ಸುಪ್ರೀಂತೀರ್ಪಿನಿಂದಾಗಿ ಪಕ್ಷದ ಹಾಗೂ ಶಾಸಕಾಂಗ ಪಕ್ಷದ ನಾಯಕನಿಗೆ ಇದ್ದ ಹಕ್ಕುಗಳ ಉಲ್ಲಂಘನೆ ಆಗಿದೆ, ಈ ಪ್ರಕರಣ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಬೇಡವೆಂದು ಮನವಿ ಮಾಡಿದರು.

   ವಿಶ್ವಾಸಮತ: ಗುರುವಾರ ಕಲಾಪದಲ್ಲಿ ಏನೇನೆಲ್ಲಾ ನಡೆಯಿತು?

   ಸಿದ್ದರಾಮಯ್ಯ ಅವರು ಎತ್ತಿದ ಪಾಯಿಂಟ್ ಆಫ್ ಆರ್ಡರ್ (ಕಾರ್ಯಲೋಪ)ದ ಬಗ್ಗೆ ಸದನದಲ್ಲಿ ಅಷ್ಟು ಸುದೀರ್ಘವಾಗಿ ಚರ್ಚೆ ನಡೆದಿದ್ದು ವಿರಳವಾದುದ್ದಾಗಿತ್ತು, ಪಾಯಿಂಟ್ ಆಫ್ ಆರ್ಡರ್ ಬಗ್ಗೆ ಇಷ್ಟು ಸುಧೀರ್ಘವಾದ ಚರ್ಚೆ ಬಿಜೆಪಿಯಲ್ಲಿ ಅಸಮಾಧಾನ ಮೂಡಿಸಿ ಪದೇ-ಪದೇ ವಿಶ್ವಾಸಮತ ಯಾಚನೆಗೆ ಒತ್ತಾಯಿಸಿದರು.

   Karnataka Assembly floor test live updates Friday

   ಭೋಜನ ವಿರಾಮದ ನಂತರ ಬಿಜೆಪಿ ಸದಸ್ಯರು ಸ್ಪೀಕರ್ ಅವರ ವಿರುದ್ಧ ಅಸಮಾಧಾನ ಹೊರಹಾಕಿ, ರಾಜ್ಯಪಾಲರಿಗೆ ಮನವಿ ನೀಡಿದರು. ಅಂತೆಯೇ ರಾಜ್ಯಪಾಲರು ಸ್ಪೀಕರ್ ಅವರಿಗೆ ಸಂದೇಶ ರವಾನಿಸಿ ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ ಎಂದರು. ಇದು ಆಡಳಿತ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಯಿತು.

   'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ?

   ಅಂತಿಮವಾಗಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಸದನದಲ್ಲಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ ಕಾರಣ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಆಡಳಿತ ಪಕ್ಷದ ಉದ್ದೇಶಪೂರ್ವಕ ವಿಳಂಬ ನೀತಿ ಖಂಡಿಸಿ ಬಿಜೆಪಿ ಸದಸ್ಯರು ರಾತ್ರಿಪೂರ್ತಿ ವಿಧಾನಸೌಧದಲ್ಲಿಯೇ ಕಳೆದರು.

   ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

   ಇಂದು 11 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಇಂದು ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಯಾಚನೆ ಮುಗಿಸುವುದಾಗಿ ಹೇಳಿರುವ ಕಾರಣ ಇಂದಾದರೂ ವಿಶ್ವಾಸಮತ ಯಾಚನೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

   Newest First Oldest First
   8:24 PM, 19 Jul
   ಪ್ರತಿಪಕ್ಷದ ವಿರೋಧದ ನಡುವೆಯೇ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು.
   8:22 PM, 19 Jul
   ಕಲಾಪವನ್ನು ಮುಗಿಸುವ ಕುರಿತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಸಲಹೆ ಕೇಳಿದ ಸ್ಪೀಕರ್ ರಮೇಶ್ ಕುಮಾರ್, 'ರಾಜ್ಯಪಾಲರು ಬರೆದಿರುವ ಪತ್ರಕ್ಕೆ ಅಗೌರವ ತೋರಿಸುವುದಿಲ್ಲ. ಹಾಗೆಯೇ ಸದಸ್ಯರ ಹಕ್ಕು ಮೊಟಕುಗೊಳಿಸುವ ಉದ್ದೇಶವೂ ಇಲ್ಲ. ಸೋಮವಾರ ಇದಕ್ಕೆಲ್ಲ ತೆರೆ ಎಳೆಯೋಣ, ಮತದಾನ ಅಂದು ಮುಗಿಸೋಣ" ಎಂದು ಸಿದ್ದರಾಮಯ್ಯ ಹೇಳಿದರು.
   8:14 PM, 19 Jul
   ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕರೆಸಿ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸಂಸದೀಯ ವ್ಯವಹಾರ ಸಚಿವರಿಗೆ ಮನವಿ ಮಾಡಿದರು.
   8:13 PM, 19 Jul
   ಕಲಾಪವನ್ನು ಸೋಮವಾರಕ್ಕೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರಿಂದ ಮತ್ತೆ ಒತ್ತಾಯ
   8:08 PM, 19 Jul
   "ಕುದುರೆ ವ್ಯಾಪಾರ, ಆಪರೇಷನ್ ಕಮಲ ಮುಖೇನ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂವಿಧಾನದ ಪಾಠವನ್ನು ನಿನ್ನೆ ಮತ್ತು ಇಂದು ಕರ್ನಾಟಕ ವಿಧಾನಸಭೆ ಮಾಡಿದೆ. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ರಚನೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸುವುದು ಬಿಜೆಪಿಗೆ ವ್ಯಾಪಾರದಂತಾಗಿದೆ" ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.
   7:58 PM, 19 Jul
   "ಇವತ್ತು ರಾತ್ರಿ 12 ಗಂಟೆಯ ತನಕ ನಾವು ಕಾಯಲು ಸಿದ್ಧ. ಮಾತನಾಡುವವರಿಗೆ ಎಲ್ಲಾ ಅವಕಾಶಕೊಡಿ. ಬಳಿಕ ಮುಖ್ಯಮಂತ್ರಿಗಳು ಮಾತನಾಡಲಿ. ಆ ಮೇಲೆ ಮತಕ್ಕೆ ಹಾಕಿ" ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.
   7:46 PM, 19 Jul
   ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಸದನಲ್ಲಿ ಮಾತನಾಡಿ, "ನಾವು ಕಷ್ಟಪಟ್ಟು ಶಾಸಕರಾಗಿದ್ದೇನೆ. ಮೊದಲ ಬಾರಿಗೆ ಶಾಸಕರಾದ ನಮಗೆ ಮಾತನಾಡಲು ಅವಕಾಶಕೊಡಿ. ನಾವು ಶಾಸಕರು ಮಾರಾಟದ ಸರಕಾಗಿದ್ದೇವೆ. ನಾವು ಕ್ಷೇತ್ರಕ್ಕೆ ಹೋದರೆ ಜನರು ಮಂಗಳಾರತಿ ಮಾಡುತ್ತಾರೆ" ಎಂದು ಹೇಳಿದರು
   7:43 PM, 19 Jul
   "ಪಕ್ಷಕ್ಕೆ ಚೂರಿ ಹಾಕಿದ್ದಾರೆ, ನಮ್ಮ ಪಕ್ಷದಿಂದ ಗೆದ್ದು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿಯವರು ಭಂಡತನ ಮಾಡಿದ್ದಾರೆ. ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದರು" ಎಂದು ಬೆಳಗಾವಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
   7:33 PM, 19 Jul
   ಸೋಮವಾರಕ್ಕೆ ಕಲಾಪ ಮುಂದೂಡುವಂತೆ ಕಾಂಗ್ರೆಸ್, ಜೆಡಿಎಸ್‌ ಸದಸ್ಯರಿಂದ ಮತ್ತೆ ಒತ್ತಾಯ.
   6:56 PM, 19 Jul
   "ಅವಿಶ್ವಾಸ ನಿರ್ಣಯದ ಮೇಲೆ ದಿನಗಟ್ಟಲೇ ಚರ್ಚೆ ನಡೆದಿದೆ. ವಿಶ್ವಾಸ ನಿರ್ಣಯದ ಮೇಲೆ ಒಂದೇ ದಿನದಲ್ಲಿ ಚರ್ಚೆ ಮುಗಿದಿದೆ. ದಯಮಾಡಿ ಇಂದೇ 8 ಗಂಟೆಯಾಗಲಿ ಚರ್ಚೆಯನ್ನು ಮುಗಿಸಿ" ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಹೇಳಿದರು.
   6:53 PM, 19 Jul
   "ಸೋಮವಾರ ಕಲಾಪವನ್ನು ಮಗಿಸೋಣ ಎಂದು ನಾನು ಕೃಷ್ಣ ಬೈರೇಗೌಡ ಅವರಿಗೆ ಹೇಳಿದೆ. ಮುಖ್ಯಮಂತ್ರಿಗಳಿಗೆ ಇದನ್ನು ತಿಳಿಸಲು ಹೇಳಿದ್ದೇನೆ. ಇದಕ್ಕೆ ನೀವು ಒಪ್ಪಿಗೆ ಕೊಡಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
   6:51 PM, 19 Jul
   ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಸದನ ಎಷ್ಟು ಹೊತ್ತಿಗೆ ಮುಗಿಸಬೇಕು ಎಂದು ನೀವು ತೀರ್ಮಾನಿಸಿ. ಶುಕ್ರವಾರ ಬೇಗ ಕಲಾಪ ಮುಗಿಸಬೇಕು, ಆದರೆ, ಮಹತ್ವದ ವಿಚಾರವಾದ ಕಾರಣ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲು ಆಗುವುದಿಲ್ಲ. ಒಂದು, ಎರಡು, ಮೂರು ದಿನದಲ್ಲಿ ವಿಶ್ವಾಸಮತ ಮುಗಿಯಬೇಕು ಎಂದು ಎಲ್ಲಿಯೂ ನಿಯಮಗಳಿಲ್ಲ. ಯಾರು ಯಾರು ಮಾತನಾಡುತ್ತಾರೆ ಎಂದು ಪಟ್ಟಿ ಕೊಡುತ್ತಾರೆ. ಸೋಮವಾರ ಆ ಕಡೆಯವರು ಮಾತನಾಡಲಿ. ಎಲ್ಲರೂ ಮಾತನಾಡಿದ ಮೇಲೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟ ಮೇಲೆ ಮತಕ್ಕೆ ಹಾಕೋಣ" ಎಂದರು
   6:47 PM, 19 Jul
   "ಸಭಾನಾಯಕರು, ಶಾಸಕಾಂಗ ಪಕ್ಷದ ನಾಯಕರು, ಉಪ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. 7.30ರ ತನಕ ಕಲಾಪ ನಡೆಸಲು ನಾವು ಒಪ್ಪಿಗೆ ಕೊಡುತ್ತೇವೆ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
   6:43 PM, 19 Jul
   "ಸದನದಲ್ಲಿ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಮಂಡಿಸಿದ್ದೇವೆ. ಸದನಕ್ಕೆ ಒಳಪಟ್ಟ ಯಾವುದೇ ವಿಷಯದಲ್ಲಿ ರಾಜ್ಯಪಾಲರಿಗೂ ಹಸ್ತಕ್ಷೇಪ ಮಾಡುವ ಅಧಿಕಾರವಿರುವುದಿಲ್ಲ. ಸಭಾಧ್ಯಕ್ಷರು ಸದನದ ಸರ್ವಾರ್ಧ್ಯಕ್ಷರು. ಅವರ ನಿರ್ಣಯವೇ ಅಂತಿಮ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಬಿಜೆಪಿ ಗೌರವ ನೀಡಬೇಕು" ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
   6:41 PM, 19 Jul
   "ನಮ್ಮ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದೆವು. ಶಾಸಕರು ಖುದ್ದಾಗಿ ಸಿಎಂಗೆ ಕರೆ ಮಾಡಿ ಮಾಹಿತಿ ನೀಡಿದರು. ಅದಕ್ಕಾಗಿ ನಾವು ತುರ್ತಾಗಿ ಮುಂಬೈಗೆ ಹೋದೆವು. ನಮ್ಮ ಶಾಸಕರಿಗೆ ರಕ್ಷಣೆ ಕೊಡುವ ಬಗ್ಗೆ ನಿರ್ಣಯಿಸಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
   6:29 PM, 19 Jul
   ಸದನದಲ್ಲಿ ಗದ್ದಲ, ಗಲಾಟೆ ಜೋರಾಗಿದೆ. ಬಿಜೆಪಿಯ ಮಾಧುಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಗದ್ದಲ ಉಂಟಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ಎಲ್ಲರನ್ನೂ ಸಮಾಧಾನ ಮಾಡುತ್ತಿದ್ದಾರೆ.
   6:22 PM, 19 Jul
   ಸಂಜೆ 7.30ರ ತನಕ ಮಾತ್ರ ಕಲಾಪ ನಡೆಯಲಿದೆ. ಯಾರು ಮಾತನಾಡಬೇಕು ಎಂದು ತೀರ್ಮಾನಿಸಿ ಹೇಳಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
   6:11 PM, 19 Jul
   "ಬೇರೆ ಸದಸ್ಯರು ಮಾತನಾಡಲು ಅವಕಾಶ ಕೊಡಿ. ಅವರೆಲ್ಲರೂ ಮಾತನಾಡಿದ ಮೇಲೆ ನಾನು ಪುನಃ ಮೈತ್ರಿ ಸರ್ಕಾರದ ಕೆಲವು ಕಾರ್ಯಕ್ರಮಗಳ ಮೇಲೆ ಮಾತನಾಡಿ ಮತಕ್ಕೆ ಹಾಕುವ. ಸೋಮವಾರ ಅವಕಾಶ ಕೊಡಿ" ಎಂದು ಸಭಾನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
   6:09 PM, 19 Jul
   "ಇಂದೇ ಚರ್ಚೆಯನ್ನು ಮುಗಿಸೋಣ. ತಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಅವರು ಬಯಸಿದ್ದಾರೆ. ನಾವು ಇಂತಹ ಚರ್ಚೆಯನ್ನು ಎಂದೂ ನೋಡಿಲ್ಲ. ಮುಖ್ಯಮಂತ್ರಿಗಳಿಗಿಂತ ಹೆಚ್ಚು ಶಾಸಕರೇ ಮಾತನಾಡುತ್ತಿದ್ದಾರೆ. ಕಾಲಹರಣ ಮಾಡಲು ತೀರ್ಮಾನಿಸಿದ್ದಾರೆ" ಎಂದು ಬಿಜೆಪಿ ಶಾಸಕ ಜೆ.ಸಿ.ಮಾಧಸ್ವಾಮಿ ಹೇಳಿದರು.
   6:07 PM, 19 Jul
   ಸೋಮವಾರ ಪೂರ್ತಿ ಚರ್ಚೆ ನಡೆಯಲಿ. ಮಂಗಳವಾರ ಮತಕ್ಕೆ ಹಾಕಿ ಎಂದು ಕಾಂಗ್ರೆಸ್ ಶಾಸಕರ ಒತ್ತಾಯ. ಮಂಗಳವಾರದ ತನಕ ಇದನ್ನು ನಡೆಸಲು ಇಷ್ಟ ಪಡುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ.
   6:01 PM, 19 Jul
   ನಾವು ಹೊಸ ಸದಸ್ಯರು, ನಮಗೂ ದೇವಾಲಯದಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, "ದೇವಾಲಯದಲ್ಲಿ ದುರಸ್ಥಿ ಕೆಲಸ ನಡೆಯುತ್ತಿದೆ. ಹೊಸಬರಿಗೆ ಗರ್ಭಗುಡಿಗೆ ಬರಲು ಬಳಿಕ ಅವಕಾಶ ನೀಡಲಾಗುತ್ತದೆ. ಭಕ್ತಾದಿಗಳು ಹೆಚ್ಚು ಜನರು ಇದ್ದಾರೆ. ದಯವಿಟ್ಟು ಸಹಕಾರ ನೀಡಬೇಕು" ಎಂದರು.
   5:58 PM, 19 Jul
   ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, "ವಿಶ್ವಾಸಮತದ ಏಲೆ ಚರ್ಚೆ ನಡೆಯಲಿ. ಇಷ್ಟು ಸಮಯದಲ್ಲೇ ಮುಗಿಸಬೇಕು ಎಂದು ಏನಿಲ್ಲ. ಇನ್ನೂ ಒಂದು ಗಂಟೆ ಚರ್ಚೆಗಳನ್ನು ಮುಂದುವರೆಸೋಣ" ಎಂದರು.
   5:58 PM, 19 Jul
   ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, "ಈ ನಿರ್ಣಯದ ಬಗ್ಗೆ ಮಾತನಾಡಲು ಹಲವು ಸದಸ್ಯರು ಆಸಕ್ತಿ ತೋರಿದ್ದಾರೆ. ನಾವು ತರಾತುರಿ ಮಾಡುವುದು ಬೇಡ. ಶುಕ್ರವಾರ ಮಧ್ಯಾಹ್ನ ಸದನ ಮುಂದೂಡುವುದು ವಾಡಿಕೆ. ಇರುವಂತಹ ಸನ್ನಿವೇಶದಲ್ಲಿ ಶಿವಲಿಂಗೇಗೌಡರು ಮಾತನಾಡಲಿ" ಎಂದು ಹೇಳಿದರು.
   5:54 PM, 19 Jul
   ಕಲಾಪವನ್ನು ಸೋಮವಾರಕ್ಕೆ ಮುಂದೂಡಿ. ಒಂದು ವಾರ ಆಗಿದೆ ನಾವು ಊರು ಬಿಟ್ಟು. ಬರಗಾಲವಿದೆ, ಅಲ್ಲಿನ ಕೆಲಸಗಳನ್ನು ನೋಡಬೇಕು ಎಂದು ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಅವರಿಗೆ ಮನವಿ ಮಾಡಿದ ಶಾಸಕರು
   5:40 PM, 19 Jul
   "ಎಷ್ಟು ರಾಜ್ಯದಲ್ಲಿ ನಿಮ್ಮ ಅಧಿಕಾರವಿದೆ. ಇದೊಂದು ಇರ್ತಿತ್ತಪ್ಪ ಅದನ್ನು ಉರುಳಿಸಲು ಹೊರಟಿದ್ದೀರಿ. ಇದನ್ನು ಭಗವಂತ ಮೆಚ್ಚುತ್ತಾನೆಯೇ?. ಅದು ಶಾಸಕರನ್ನು ಹೊತ್ತುಕೊಂಡು ಬಾಂಬೆಗೆ ಕರೆದುಕೊಂಡು ಹೋಗಿ ಸರ್ಕಾರ ಮಾಡಲು ಹೊರಟಿದ್ದೀರಿ" ಎಂದು ಶಿವಲಿಂಗೇಗೌಡ ಹೇಳಿದರು.
   5:34 PM, 19 Jul
   ರಾಜ್ಯಪಾಲರು ನೀಡಿದ ಗಡುವಿಗೆ 30 ನಿಮಿಷಗಳು ಬಾಕಿ ಇದೆ. ವಿಶ್ವಾಸಮತದ ಮೇಲಿನ ಚರ್ಚೆ ಇನ್ನೂ ಪೂರ್ಣಗೊಂಡಿಲ್ಲ. ಸಂಜೆ 6 ಗಂಟೆಗೆ ವಿಶ್ವಾಸಮತ ಸಾಬೀತು ಮಾಡಲಾಗುತ್ತದೆಯೇ? ಕಾದು ನೋಡಬೇಕು.
   5:29 PM, 19 Jul
   ವಿಶ್ವಾಸಮತಯಾಚನೆ ಬಗ್ಗೆ ರಾಜ್ಯಪಾಲರು ನಿರ್ದೇಶನ ನೀಡುವಂತಿಲ್ಲ ಎಂದು ಜೆಡಿಎಸ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜೂನ್ 19ರ 1.30ರೊಳಗೆ ವಿಶ್ವಾಸಮತಯಾಚನೆ ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದರು.
   5:24 PM, 19 Jul
   ವಿಧಾನಸಭೆಯಲ್ಲಿ ಎಚ್. ಡಿ. ಕುಮಾರಸ್ವಾಮಿ, ಸಚಿವ ಡಿ. ಕೆ. ಶಿವಕುಮಾರ್ ಗಹನ ಚರ್ಚೆ. ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ತಂದುಕೊಟ್ಟು ಆಪ್ತ ಸಹಾಯಕ. ಶಿವಲಿಂಗೇಗೌಡ ಭಾಷಣದ ನಡುವೆಯೇ ಉಭಯ ನಾಯಕರ ಚರ್ಚೆ ಮುಂದುವರೆದಿದೆ.
   5:13 PM, 19 Jul
   "15 ಜನರನ್ನು ಕರೆದುಕೊಂಡು ಹೋಗಿದ್ರೆ ಸಾಕಿತ್ತಲ್ಲ. ಶಾಸಕ ಶ್ರೀಮಂತ ಪಾಟೀಲ್ ಪಾಪ ಅಜ್ಜ ಅದು ಹೆಂಗೆ ಹೊಡ್ಕೊಂಡು ಹೋದ್ರೋ ಏನೋ ಅದೇನೋ ಎದೆ ಬಸ್ಟ್‌ ಆಗಿ ಬಿಡ್ತಂತೆ. ಹೋಗಿ ಮುಂಬೈ ಆಸ್ಪತ್ರೆಗೆ ಆಡ್ಮಿಟ್ ಆಗಿದಾರೆ. ನಮ್ಮಲ್ಲಿ ಎಂತಹ ಆಸ್ಪತ್ರೆಗಳಿವೆ. ವಿದೇಶದವರೂ ಬಂದು ಚಿಕಿತ್ಸೆ ಪಡೆಯುತ್ತಾರೆ" ಎಂದು ಶಿವಲಿಂಗೇಗೌಡ ಹೇಳಿದರು.
   5:09 PM, 19 Jul
   ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲುತ್ತಿದೆ. "ಅರಸೀಕೆರೆಯಿಂದ ಹೊರಟಾಗ ಎಂ.ಟಿ.ಬಿ.ನಾಗರಾಜ್ ಸಂಧಾನ ಸಫಲ ಎಂಬ ಸುದ್ದಿ ಬಂತು. ದಾರಿಯಲ್ಲಿ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು. ಶಾಸಕ ಮಿತ್ರರಿಗೆ ಫೋನ್ ಮಾಡಿ ನರಿ ಎಡದಿಂದ ಬಲಕ್ಕೆ ಹೋಯಿತು ಕುಮಾರಣ್ಣ ಉಳಿದುಕೊಳ್ಳುತ್ತಾರೆ ಎಂದು ಹೇಳಿದೆ. ಅಷ್ಟರಲ್ಲೇ ಎಂ.ಟಿ.ಬಿ.ನಾಗರಾಜ್ ವಿಮಾನ ಹತ್ತಿದರು ಎಂದರು, ಹೆಂಗಾಯಿತು ನರಿ ಶಾಸ್ತ್ರ" ಎಂದರು.
   READ MORE

   English summary
   Karnataka Assembly Floor Test Live Updates of Friday in Kannada. Congress-JDS members successfully wasted Thursday's time so Governor instructed to CM to prove majority on Friday before 1:30.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X