ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ವಿಶ್ವಾಸಮತ ಪರೀಕ್ಷೆ: 340, 346 ನಿಮಯಗಳು ಏನು ಹೇಳುತ್ತವೆ?

|
Google Oneindia Kannada News

ಬೆಂಗಳೂರು, ಮೇ 19: ಕರ್ನಾಟಕದಲ್ಲಿ ಶನಿವಾರ ನಡೆಯಲಿರುವ ಮಹತ್ವದ ವಿಶ್ವಾಸಮತ ಪ್ರಕ್ರಿಯೆಯತ್ತ ಇಡೀ ದೇಶದ ಗಮನ ನೆಟ್ಟಿದೆ.

ಕರ್ನಾಟಕ ವಿಧಾನಸಭೆ ನಿಯಮಾವಳಿಯ 340ನೇ ನಿಯಮದ ಇಲ್ಲಿ ಹೆಚ್ಚು ನಿರ್ಣಾಯಕವಾಗಿದೆ. ವಿಧಾನಸಭೆಯ ನಿರ್ಣಯವನ್ನು ಸದಸ್ಯರೊಬ್ಬರು ಮಂಡಿಸುವ ನಿಲುವಳಿಯ ಆಧಾರದ ಮೇಲೆ ಸ್ಪೀಕರ್ ಮುಂದಿರಿಸುವ ಪ್ರಶ್ನೆಯು ನಿರ್ಧರಿಸುತ್ತದೆ.

ನಿಯಮ 346ರ ಅಡಿಯಲ್ಲಿ ಸ್ಪೀಕರ್ 'ಹೌದು' ಅಥವಾ 'ಇಲ್ಲ' ಎಂದು ಶಾಸಕರಿಂದ ಧ್ವನಿಮತ ನಡೆಸುತ್ತಾರೆ. ಬಳಿಕ ಧ್ವನಿಮತದಿಂದ ದೊರೆತ ಫಲಿತಾಂಶದ ಅಡಿ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು. ಒಂದು ವೇಲೆ ಅವರ ನಿರ್ಧಾರವನ್ನು ಪ್ರಶ್ನಿಸಲಾದರೆ, ಸ್ಪೀಕರ್ ಎಲ್ಲ ಬಾಗಿಲುಗಳನ್ನೂ ಮುಚ್ಚಿ ಮತ್ತೆ ಧ್ವನಿಮತದ ಬೆಂಬಲಕ್ಕೆ ಅನುವು ಮಾಡಿಕೊಡಬಹುದು.

ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?

ಈ ನಿರ್ಧಾರವನ್ನೂ ಪ್ರಶ್ನಿಸಿದರೆ, ನಿಲುವಳಿ ಪರ ಅಥವಾ ವಿರುದ್ಧವಾಗಿ ಬೆಂಬಲ ನೀಡಲು ತಮ್ಮ ತಮ್ಮ ಸೀಟುಗಳಿ

Karnataka assembly floor test 2018 what Rules 340, 346 say

ಇಲ್ಲಿ ಎದ್ದು ನಿಂತು ಬೆಂಬಲ ಸೂಚಿಸುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಶಾಸಕರ ಹೆಸರನ್ನು ದಾಖಲು ಮಾಡಿಕೊಳ್ಳದೆ ಇರುವುದರಿಂದ, ಶಾಸಕರು ಎಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ಸ್ಪೀಕರ್ ತೀರ್ಮಾನಿಸುತ್ತಾರೆ.

ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣುಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು

ಜಯನಗರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿದೆ. ವಿಧಾನಸಭೆಯ ಈಗಿನ ಒಟ್ಟು ಸಂಖ್ಯೆ 222 ಮಾತ್ರ. ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ವಿಶ್ವಾಸಮತ ಪ್ರಕ್ರಿಯೆ ವೇಳೆ ಅವರ ಒಂದು ಮತವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಮ್ಯಾಜಿಕ್ ಸಂಖ್ಯೆಯ ಗುರಿ ಇರುವುದು 111.

ಸಂವಿಧಾನಸ 189 (1) ವಿಧಿಯಂತೆ ಪರ ಮತ್ತು ವಿರೋಧ ಸಂಖ್ಯೆ ಸಮಯಬಲ ಬಂದಾಗ ಮಾತ್ರ ಸ್ಪೀಕರ್ ತಮ್ಮ ಮತ ಚಲಾವಣೆ ಮಾಡಬಹುದು.

ಕರ್ನಾಟಕದಲ್ಲಿ ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯು ಸರಳವಾಗಿದ್ದು, ಶಾಸಕರು ಯಡಿಯೂರಪ್ಪ ಅವರ ಪರ ಅಥವಾ ವಿರುದ್ಧವಾಗಿ ಮತ ಚಲಾವಣೆ ಮಾಡಬೇಕಿದೆ. ಒಂದು ವೇಳೆ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಬೇರೆ ಶಾಸಕರು ವಿಶ್ವಾಸಮತ ಯಾಚನೆಗೆ ಬಹುತಮ ಹೊಂದಿರುವುದಾಗಿ ಮುಂದೆಬರಬಹುದು.

English summary
Karnataka assembly floor test 2018: All eyes would be on Karnataka as the crucial trust vote would be held today. Rule 340 of the Karnataka Assembly Rules would be in focus as the decision of the House would be decided by means of a question put by the Speaker on the motion made by a member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X