ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನಗಳ ಮುಖ್ಯಮಂತ್ರಿ ಯಡಿಯೂರಪ್ಪ: ಸಿದ್ದರಾಮಯ್ಯ ಟ್ವೀಟ್

|
Google Oneindia Kannada News

Recommended Video

ಸಿಎಂ ಕುರ್ಚಿ ಇಂದ ಬಿ ಎಸ್ ವೈ ಕೆಳಗಿಳಿಯೋದು ಪಕ್ಕಾ ಅಂದ್ರು ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಮೇ 19: ರಾಜ್ಯ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜಕಾರಣಿಗಳು ಮತ್ತು ಜನರ ಕುತೂಹಲ, ಉದ್ವೇಗ ಹೆಚ್ಚಾಗಿದೆ.

ಆದರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರ ಅಧಿಕಾರದ ಅವಧಿ ಇಂದೇ ಮುಕ್ತಾಯವಾಗಲಿದೆ. ಅವರು ಮೂರು ದಿನಗಳ ಮಟ್ಟಿಗಿನ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕರ್ನಾಟಕ ವಿಶ್ವಾಸಮತ LIVE: ತಾಜ್ ವೆಸ್ಟೆಂಡ್ ನಲ್ಲಿ ಪತ್ತೆಯಾದ ಮಿಸ್ಸಿಂಗ್ ಶಾಸಕರು!ಕರ್ನಾಟಕ ವಿಶ್ವಾಸಮತ LIVE: ತಾಜ್ ವೆಸ್ಟೆಂಡ್ ನಲ್ಲಿ ಪತ್ತೆಯಾದ ಮಿಸ್ಸಿಂಗ್ ಶಾಸಕರು!

ಕಲಾಪ ಆರಂಭಕ್ಕೂ ಮುನ್ನ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಹುಮತವಿಲ್ಲದೆಯೇ ಸಂವಿಧಾನ ಬಾಹಿರವಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ನಾಡಿನ ಮತದಾರರ ಆಶಯಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಇಂದು ಸಂಜೆ ಜನಾಭಿಪ್ರಾಯಕ್ಕೆ ಜಯ ದೊರೆಯಲಿದೆ ಎಂಬ ವಿಶ್ವಾಸವಿರುವುದಾಗಿ ಹೇಳಿಕೊಂಡಿದ್ದಾರೆ.


ಸಂಜೆ 4 ಗಂಟೆಗೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಯಡಿಯೂರಪ್ಪ ಅವರು ತಮಗೆ ಬಹುಮತ ಇರುವುದನ್ನು ಸಾಬೀತುಪಡಿಸಿಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Karnataka assembly floor test 2018 siddaramaiah tweets yeddyurappa ruling will end today

ಬಿಜೆಪಿಯು ತನಗೆ ಅಗತ್ಯವಿರುವಷ್ಟು ಮತಗಳನ್ನು ಪಡೆದುಕೊಳ್ಳಲು ತಮ್ಮ ಶಾಸಕರನ್ನು ಸೆಳೆಯಲಿವೆ ಎಂಬ ಭಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅವರು ಅತ್ತಿತ್ತ ಸುಳಿಯದಂತೆ ತಡೆಯಲು ಹರಸಾಹಸಪಡುತ್ತಿವೆ.

English summary
Karnataka assembly floor test 2018: Ex chief minister Siddaramaiah tweeted that the ruling of three days chief minister Yeddyurappa will end today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X