ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

104 ಅಥವಾ 120: ಬಿಜೆಪಿಗೆ ಸಿಗುತ್ತದೆಯಾ ಶಾಸಕರ ಬಲ?

By ವಿಕ್ಕಿ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 19: ತಮ್ಮ ಮೂವರು ಶಾಸಕರನ್ನು ಹೈಜಾಕ್ ಮಾಡಲಾಗಿದೆ ಎಂದು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ತನ್ನ ಎಲ್ಲ 78 ಶಾಸಕರೂ ತಮ್ಮೊಟ್ಟಿಗೇ ಇದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ.

ಇನ್ನು ಮೈತ್ರಿ ಕೂಟದ ಜತೆಗೆ ಗುರುತಿಸಿಕೊಂಡಿದ್ದರೂ ಇಬ್ಬರು ಪಕ್ಷೇತರ ಶಾಸಕರ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಎದುರಾಳಿ ಪಕ್ಷಗಳಿಂದ 16 ಶಾಸಕರನ್ನು ತನ್ನೆಡೆಗೆ ಸೆಳೆದುಕೊಳ್ಳುವುದಾಗಿ ಬಿಜೆಪಿ ಹೇಳಿಕೊಂಡಿದೆ.

ಶುಕ್ರವಾರ ಬಿಜೆಪಿ ಪಾಳಯದ ವಾತಾವರಣದಲ್ಲಿ ತೀವ್ರ ಬದಲಾವಣೆಗಳಾಗುತ್ತಿತ್ತು. ಕಾಂಗ್ರೆಸ್-ಜೆಡಿಎಸ್ ಕೂಟದಲ್ಲಿರುವ 16 ಶಾಸಕರ ಬೆಂಬಲವಿದ್ದು, ಬಿಜೆಪಿ ಸುಲಭವಾಗಿ ವಿಶ್ವಾಸಮತ ಗೆಲ್ಲಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು.

120 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಪ್ರಕ್ರಿಯೆಯನ್ನು ಗೆದ್ದುಕೊಳ್ಳಲಿದೆ ಎಂದು ಪಕ್ಷ ಹೇಳಿಕೊಂಡಿದೆ. ಬಿಜೆಪಿಯು 104 ಶಾಸಕರ ಬಲವನ್ನು ಹೊಂದಿದೆ.

ಎಲ್ಲ ಪಕ್ಷಗಳೂ ವಿಶ್ವಾಸಮತ ಕುರಿತು ತಲ್ಲಣಕ್ಕೆ ಒಳಗಾಗಿರುವುದರಿಂದ ತಮ್ಮ ಪರ ಶಕ್ತಿಯೇ ಹೆಚ್ಚಿದೆ ಎಂದು ಹೇಳಿಕೊಳ್ಳುತ್ತಿವೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ 20 ಲಿಂಗಾಯತ ಶಾಸಕರು ತನ್ನನ್ನು ಬೆಂಬಲಿಸಲಿದೆ ಎಂದು ಬಿಜೆಪಿ ಭರವಸೆ ಹೊಂದಿದೆ.

ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣುಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು

ತನ್ನ ಶಾಸಕರನ್ನು ಒಂದೆಡೆ ಸೇರಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳುಕೊಳ್ಳುತ್ತಿವೆ. ಈ ಎರಡೂ ಪಕ್ಷಗಳಲ್ಲಿರುವ ಆತಂಕವೆಂದರೆ ಕೆಲವರು ಅಡ್ಡಮತದಾನ ಮಾಡಬಹುದು ಎಂದು.

Karnataka assembly floor test 2018 BJP’s chances in the floor test

ಇಂದು ಏನೇನು ನಡೆಯಲಿದೆ?
* ಹಂಗಾಮಿ ಸ್ಪೀಕರ್ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಎತ್ತಿಕೊಳ್ಳಲಿದೆ.

* 10.30ಕ್ಕೆ ವಿಧಾನಸಭೆಯ ಅಧಿವೇಶನವನ್ನು ಸ್ಪೀಕರ್ ಆರಂಭಿಸಲಿದ್ದಾರೆ.

* ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ಒಬ್ಬೊಬ್ಬರೇ ಅಥವಾ ಒಟ್ಟಾಗಿಯೂ ನಡೆಯಬಹುದು. ಸ್ಪೀಕರ್ ಮೇಲೆ ಪ್ರಮಾಣವಚನ ಪ್ರಕ್ರಿಯೆ ಅವಲಂಬಿತವಾಗಿರುತ್ತದೆ.

ವಿಶ್ವಾಸಮತ : ಎಲ್ಲ ಕಣ್ಣು 20 ಲಿಂಗಾಯತ ಶಾಸಕರ ಮೇಲೆ ವಿಶ್ವಾಸಮತ : ಎಲ್ಲ ಕಣ್ಣು 20 ಲಿಂಗಾಯತ ಶಾಸಕರ ಮೇಲೆ

* ಸುಪ್ರೀಂಕೋರ್ಟ್‌ ಶುಕ್ರವಾರ ನೀಡಿರುವ ನಿರ್ದೇಶನಕ್ಕೆ ಅನುಗುಣವಾಗಿ ಹಂಗಾಮಿ ಸ್ಪೀಕರ್ ಸದನವನ್ನು ನಡೆಸಲಿದ್ದಾರೆ.

* ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.

* ವಿಶ್ವಾಸಮತ ಯಾಚನೆಗೆ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾಷಣ ಮಾಡಲು ಸ್ಪೀಕರ್ ಅವಕಾಶ ನೀಡಲಿದ್ದಾರೆ. ಬಳಿಕ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ.

* ನಂತರ ವಿಶ್ವಾಸಮತ ಯಾಚನೆ ನಡೆಯಲಿದೆ

English summary
Karnataka assembly floor test 2018: H D Kumaraswamy said that three of his JD(S) MLAs have been hijacked. The Congress says that its entire flock of 78 are intact. The two Independents who have been back and forth are not clear in their decision. The BJP says that it could swing 16 MLAs from the other camp in its favour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X