ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?

|
Google Oneindia Kannada News

Recommended Video

ಬಿಜೆಪಿ ಹೊಸ ಸರ್ಕಾರ ರಚನೆಯಾಗುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? | Oneindia Kannada

ಬೆಂಗಳೂರು, ಜುಲೈ 26 : "ಕರ್ನಾಟಕದ ವಿಧಾನಸಭೆ ಬಿಜೆಪಿ ಪಾಲಿಗೆ ಪ್ರಯೋಗಾಲಯವಾಗಿದೆ. ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಬಿ. ಎಸ್. ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡನೆ ಮಾಡಿದರು. ಸಂಜೆ 6 ಗಂಟೆಗೆ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

"ಕರ್ನಾಟಕ ಬಿಜೆಪಿ 105 ಸದಸ್ಯ ಬಲವನ್ನು ಮಾತ್ರ ಹೊಂದಿದೆ. ವಿಧಾನಸಭೆಯ ಬಲಾಬಲಕ್ಕಿಂತ ಅರ್ಧದಷ್ಟು ಕಡಿಮೆ ಬಲವಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿದ್ದು, ಸರ್ಕಾರ ರಚನೆಯನ್ನು ಖಂಡಿಸಿದರು.

76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?

"ಬಿಜೆಪಿಗೆ ಬಹುಮತವೇ ಇಲ್ಲ. ಸಂವಿಧಾನದ ಯಾವ ನಿಯಮದ ಅನ್ವಯ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಪಕ್ಷಕ್ಕೆ ಆಹ್ವಾನ ನೀಡಿದರು?" ಎಂದು ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಪ್ರಶ್ನೆ ಮಾಡಿದರು..

Breaking News ಇಂದೇ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರBreaking News ಇಂದೇ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

ಪಕ್ಷಕ್ಕೆ ಬಹುಮತವೇ ಇಲ್ಲ

ಪಕ್ಷಕ್ಕೆ ಬಹುಮತವೇ ಇಲ್ಲ

"ಕರ್ನಾಟಕ ವಿಧಾನಸಭೆ ಬಿಜೆಪಿಗೆ ಪ್ರಯೋಗಾಲಯವಾಗಿದೆ. ಬಿಜೆಪಿ ಬೆಂಬಲಿತ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧ ವಾಗಿ ಸರ್ಕಾರ ರಚನೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಬಹುಮತವೇ ಇಲ್ಲದ ಪಕ್ಷಕ್ಕೆ ಸಂವಿಧಾನದ ಯಾವ ನಿಯಮದ ಪ್ರಕಾರ ಸರ್ಕಾರ ರಚನೆ ಮಾಡಲು ಒಪ್ಪಿಗೆ ಕೊಡಲಾಗಿದೆ" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

105 ಸದಸ್ಯರ ಬಲಮಾತ್ರವಿದೆ

105 ಸದಸ್ಯರ ಬಲಮಾತ್ರವಿದೆ

"ಸಂವಿಧಾನದ ಪ್ರಕಾರ ಹೋದರೆ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವದ ಆಶಯದ ಮೇಲೆ ನಂಬಿಕೆ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಬಿಜೆಪಿ 105 ಸದಸ್ಯ ಬಲ ಹೊಂದಿದೆ ಇದು ಬಹುಮತಕ್ಕಿಂತ ಅರ್ಧದಷ್ಟು ಕಡಿಮೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಂಖ್ಯಾಬಲದ ಲೆಕ್ಕದ ವಿವರ

ಸಂಖ್ಯಾಬಲದ ಲೆಕ್ಕದ ವಿವರ

224 ಬಲದ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 105. ಮಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್‌ ಬೆಂಬಲ ನೀಡಿದರೆ 106. ಬಹುಮತ ಸಾಬೀತಿಗೆ ಬೇಕಾದ ಮ್ಯಾಜಿಕ್ ನಂಬರ್ ಪ್ರಸ್ತುತ 111 (3 ಶಾಸಕರ ಅನರ್ಹತೆ ಬಳಿಕ).

221 ಸದಸ್ಯ ಬಲ

221 ಸದಸ್ಯ ಬಲ

ಸ್ಪೀಕರ್ ರಮೇಶ್ ಕುಮಾರ್ 3 ಶಾಸಕರನ್ನು ಗುರುವಾರ ಅನರ್ಹತೆ ಮಾಡಿದರು. ಇದರಿಂದಾಗಿ ವಿಧಾನಸಭೆ ಬಲ 221ಕ್ಕೆ ಕುಸಿದಿದೆ. ಬಹುಮತ ಸಾಬೀತು ಮಾಡಲು 111 ಮ್ಯಾಜಿಕ್ ನಂಬರ್. ಇಬ್ಬರು ಅನರ್ಹಗೊಂಡ ಬಳಿಕ ಕಾಂಗ್ರೆಸ್‌ ಬಲ 76, ಜೆಡಿಎಸ್ ಬಲ 37 (ರಾಜೀನಾಮೆ ಕೊಟ್ಟವರು ಸೇರಿ). ಬಿಎಸ್‌ಪಿ 1, ಪಕ್ಷೇತರ 1.

English summary
Congress CLP leader and Former Chief Minister of Karnataka Siddaramaiah tweeted that Karnataka assembly has become an experimental lab for BJP Karnataka. BJP backed governor to try unconstitutional ways to form government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X