ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ: 'ನೋಟಾ'ದತ್ತ ಹಲವರ ನೋಟ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 15 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಆಯ್ಕೆಗೆ ಅವಕಾಶ ಕಲ್ಪಿಸಿರುವುದು ಕುತೂಹಲ ಮೂಡಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಆಯ್ಕೆ ಮೊದಲ ಬಾರಿ ಜಾರಿಗೆ ಬಂತು. ಕರ್ನಾಟಕದ ವಿಧಾಸನಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ನೋಟಾ ಎಂದರೇನು ?
NOTA ಪೂರ್ಣ ಅರ್ಥ NONE OF THE ABOVE ಎಂಬುದು, ಮೇಲಿನವರಲ್ಲಿ ಯಾರು ಬೇಡ ಎಂಬುದು ಇದರ ಅರ್ಥ. ವಿದ್ಯುನ್ಮಾನ ಮತಯಂತ್ರದಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಕೊನೆಯಲ್ಲಿ ನೋಟಾ ಬ್ಯಾಟನ್ ಇರುತ್ತದೆ. ಯಾವ ಅಭ್ಯರ್ಥಿಗೂ ಮತ ಹಾಕಲು ಇಷ್ಟವಿಲ್ಲದಿದ್ದರೆ ಈ ಬಟನ್ ಒತ್ತುವ ಮೂಲಕ ತಮ್ಮ ಹಕ್ಕು ಚಲಾಯಿಸಬಹುದು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಾಂಗ್ರೆಸ್, ಬಿಜೆಪಿ ಬಳಿಕ ಹೆಚ್ಚು ಮತ
ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಳಿಕ ಹೆಚ್ಚು ಮತ ಚಲಾವಣೆ ಆಗಿದ್ದು, ನೋಟಾ ಗೆ. ಒಟ್ಟು 1665 ಮತಗಳು ಬಿದ್ದಿದ್ದವು. ಈ ಮೂಲಕ ಮೂರನೇ ಸ್ಥಾನ ಲಭಿಸಿತ್ತು. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ 1593 ಮತದಾರರು ನೋಟಾ ಚಲಾಯಿಸಿದ್ದರು.

ನೋಟಾಕ್ಕೀಗ ಐದರ ಹರೆಯ! ಕೋಟಿ ದಾಟಿದ ಓಟಿನ ಓಟ! ನೋಟಾಕ್ಕೀಗ ಐದರ ಹರೆಯ! ಕೋಟಿ ದಾಟಿದ ಓಟಿನ ಓಟ!

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ 13 ಸಾವಿರಕ್ಕೂ ಅಧಿಕ ನೋಟಾ ಮತಗಳು ಚಲಾವಣೆಗೊಂಡಿದ್ದವು. ನಂಜನಗೂಡು ಉಪಚುನಾವಣೆಯಲ್ಲಿ 1665 ಮತಗಳು ಬಿದ್ದಿದ್ದವು. ಚುನಾವಣೆಗೂ ಮುನ್ನ ಮತಯಂತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಅಳವಡಿಸಿ ಅಣಕು ಮತದಾನ ನಡೆಸಲಾಗುತ್ತದೆ. ಆಗ ನೋಟಾ ಆಯ್ಕೆ ಕೂಡ ಇರಲಿದೆ. ಈ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಅಧಿಕಾರಿ ವರ್ಗ.

Karnataka Assembly elections: NOTA will have an important role

ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಸೇರಿದಂತೆ ಕೆಲ ಸಂಘಟನೆಗಳ ಸದಸ್ಯರು ಈ ಬಾರಿ ನೋಟಾ ಆಯ್ಕೆ ಬಳಸುವ ಮೂಲಕ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳು ಈ ಬಾರಿ ನೋಟಾ ತಮ್ಮಆಯ್ಕೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಚುನಾವಣೆ ಮೇಲೆ ನೋಟಾ ಅಷ್ಟೇನೂ ಪ್ರಾಭವ ಬೀರುವದಿಲ್ಲ. ಅಭ್ಯರ್ಥಿಗಳ ಗೆಲುವಿನ ಅಂತರ ತುಸು ಕಡಿಮೆಯಾಗಬಹುದು ಅಷ್ಟೆ. ಆದರೆ ಇದೊಂದು ಪ್ರತಿರೋಧದ ಅಸ್ತ್ರ ಎನ್ನುತ್ತಾರೆ ಚುನಾವಣೆ ವಿಶ್ಲೇಷಕರು.

ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲೂ ನೋಟಾ ಆರಿಸಲು ಹಲವರು ನಿರ್ಧರಿಸಿದ್ದು, ಮುಂದೇನಾಗುತ್ತದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

English summary
Karnataka assembly elections 2018: According to some political experts, many people will choose NOTA(None Of The Above) option in this elections, especially in Mysuru region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X