'ಶನಿವಾರ' ಚುನಾವಣೆ: ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada
   ಕರ್ನಾಟಕ ಚುನಾವಣೆ 2018 ಶನಿವಾರ ( ಮೇ 12 ) | ಮತದಾನಕ್ಕೆ ಅಡ್ಡಿಯಾಗುತ್ತಾ ವೀಕೆಂಡ್? | Oneindia Kannada

   ಬೆಂಗಳೂರು, ಮಾರ್ಚ್ 29: ಶನಿವಾರ(ಮೇ 12) ಮತದಾನ, ಮಂಗಳವಾರ (ಮೇ 15) ಫಲಿತಾಂಶ.... ಈ ರಾಜ್ಯಕ್ಕೆ ಏನೇನು ಕಾದಿದೆಯೋ ಎಂದು ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಹಲವರು ತಮಾಷೆ ಮಾಡಿಕೊಂಡು ನಕ್ಕಿದ್ದಾರೆ. ಶನಿವಾರ ಮತ್ತು ಮಂಗಳವಾರ ಎರಡು ದಿನಗಳೂ ಶುಭಕಾರ್ಯಕ್ಕೆ ಹೇಳಿ ಮಾಡಿಸಿದ್ದಲ್ಲ ಎಂಬ ನಂಬಿಕೆ ಹಲವರಲ್ಲಿರುವುದರಿಂದ ಈ ದಿನಾಂಕಗಳ ಬಗ್ಗೆ ಅಸಮಧಾನವೂ ಇದೆ. ಹಾಗಂತ ಚುನಾವಣಾ ಆಯೋಗದ ನಿರ್ಧಾರವನ್ನು ಬದಲಿಸೋದಕ್ಕಾಗುತ್ತಾ..?

   ಈ ತರ್ಕಗಳೇನೇ ಇದ್ದಿರಲಿ, ಶನಿವಾರ ಮತದಾನವೆಂದರೆ ಮತದಾನದ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಬಹುದಾದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

   ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

   ವಾರಾಂತ್ಯವಾಗಿರುವುದರಿಂದ ಹಲವರು ದೂರದೂರದ ಊರಿಗೆ ತೆರಳಿದರೆ ಮತದಾನ ಮಾಡುವ ಸಾಧ್ಯತೆಗಳು ಕಡಿಮೆ. 2013 ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ರಾಜ್ಯದಲ್ಲಿ ಶೇ.71.29 ರಷ್ಟು ಮತದಾನ ದಾಖಲಾಗುವ ಮೂಲಕ 1978 ರ ನಂತರ ಮೊದಲ ಬಾರಿಗೆ ಅತೀ ಹೆಚ್ಚು ಮತದಾನವಾದ ಹೆಗ್ಗಳಿಕೆ ಕರ್ನಾಟಕದ ಪಾಲಾಗಿತ್ತು. 1978ರಲ್ಲಿ ಕರ್ನಾಟಕದಲ್ಲಿ ಶೇ.71.90 ಮತದಾನವಾಗಿತ್ತು.

   Karnataka assembly elections 2018: Will voter turnout be hit due to a weekend polling day?

   ಈ ವರ್ಷ ಮತದಾರರ ಸಂಖ್ಯೆಯೂ ಹೆಚ್ಚಿದ್ದರಿಂದ ಮತದಾನ ಜಾಸ್ತಿಯಾಗುವ ನಿರೀಕ್ಷೆ ಇತ್ತು. ಆದರೆ ಶನಿವಾರ ಮತದಾನವಾಗಿರುವುದರಿಂದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣ ಕಡಿಮೆಯಾದೀತು.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಮಾ.27 ರಂದು ಚುನಾವಣಾ ಆಯೋಗ ಘೋಷಿಸಿತ್ತು. ಮೇ.12 ರಂದು ಮತದಾನ, ಮೇ.15 ರಂದು ಫಲಿತಾಂಶ ಹೊರಬೀಳಲಿದ್ದು, ಮಾದರಿ ನೀತಿ ಸಂಹಿತೆ ಈಗಾಗಲೇ ಚಾಲ್ತಿಯಲ್ಲಿದೆ.

   ಈ ಬಾರಿ ಚುನಾವಣೆಯಲ್ಲಿ ಏನೇನು ಹೊಸತನವಿರಲಿದೆ?

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Karnataka assembly elections this year fall on a Saturday. The Election Commission of India announced that while polling will be held on May 12, counting would take place on May 15.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ