• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಸುದ್ದಿ: ಮತದಾನ ಹಬ್ಬದಲ್ಲಿ ವೋಟ್ ಮಾಡಿ ಸಂಭ್ರಮಿಸಿದವರು

By Mahesh
|

ಬೆಂಗಳೂರು, ಮೇ 12: ರಾಜ್ಯದ 15ನೇ ವಿಧಾನಸಭಾ ಚುನಾವಣೆಗೆ ವಿವಿಧ ಜಿಲ್ಲೆಗಳಲ್ಲಿ ಮತದಾನ ಹಬ್ಬ ಸಂಭ್ರಮದಿಂದ ಶುರುವಾಗಿ, ಸಪ್ಪೆಯಾಗಿ ಸಾಗಿತು. ಕಳೆದ ಬಾರಿಯ ಮತದಾನದ ಪ್ರಮಾಣವನ್ನು ಮುಟ್ಟುವುದು ಕಷ್ಟವೆನಿಸಿದೆ. ಎಂದಿನಂತೆ, ಬೆಂಗಳೂರಿನ ಸತ್ ಪ್ರಜೆಗಳು ಮತದಾನ ಮಾಡದೆ ಲೋಕದ ಕಣ್ಣಲ್ಲಿ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.

ಆದರೆ, ರಾಜ್ಯದ ಹಲವೆಡೆಯಲ್ಲಿ ಸಾಹಿತಿಗಳು, ಸಿನಿತಾರೆಯರು, ವಯೋವೃದ್ಧರು, ಹೆಳವರು, ಯುವಕ, ಯುವತಿಯರು, ಮಹಿಳೆಯರು, ತೃತೀಯ ಲಿಂಗಿಗಳು, ನವ ವಧು, ದಂಪತಿ ಹೀಗೆ ವಿವಿಧ ಸ್ತರ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆ

ಐದು ವರ್ಷಗಳಿಗೊಮ್ಮೆ ಸಿಗುವ ಈ ಅವಕಾಶ ಬಳಸಿಕೊಂಡು ಪ್ರಜಾಪ್ರಭುತ್ವ ನೀಡಿರುವ ಹಕ್ಕನ್ನು ಚಲಾಯಿಸಿ ಎಂದು ಒನ್ಇಂಡಿಯಾ ಕನ್ನಡ ಮನವಿ ಮಾಡುತ್ತದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

ಮತದಾನ ಬಹುತೇಕ ಶಾಂತಿಯುತವಾಗಿ ಸಾಗಿದರೂ ಕೆಲವೆಡೆ ಗುಂಪು ಘರ್ಷಣೆ, ಮತದಾನ ಬಹಿಷ್ಕಾರ, 49 (ಒ) ಬಳಸಿ ಮತ ನಿರಾಕರಣೆ, ಸಾವು ನೋವಿನ ಪ್ರಕರಣಗಳು ನಡೆದಿವೆ.

In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ

ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ. ಜತೆಗೆ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಅಕ್ರಮ ಪತ್ತೆಯಾಗಿದ್ದರಿಂದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದೆ. ಮೇ 31ರಂದು ಫಲಿತಾಂಶ ಹೊರ ಬರಲಿದೆ.

ನವ ಮತದಾರರು

ನವ ಮತದಾರರು

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿಯ ವಾರ್ಡ್ 171 ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕಿ ಸಂಭ್ರಮಿಸಿದವರು.

ಡಾ. ವೀರೇಂದ್ರ ಹೆಗ್ಗಡೆ

ಡಾ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತದಾನ ಮಾಡಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದಂಪತಿ.

ಸಿದ್ದಗಂಗಾಶ್ರೀಗಳಿಂದ ಮತದಾನ

ಸಿದ್ದಗಂಗಾಶ್ರೀಗಳಿಂದ ಮತದಾನ

ತುಮಕೂರಿನ ಕ್ಯಾತಸಂದ್ರದಲ್ಲಿ ಮತದಾನ ಮಾಡಿದ 108 ವರ್ಷ ವಯಸ್ಸಿನ ಸಿದ್ದಗಂಗಾ ಮಠ ಶ್ರೀವಕುಮಾರ ಸ್ವಾಮೀಜಿಗಳು ಹಾಗೂ ಜತೆಯಲ್ಲಿ ಕಿರಿಯ ಸ್ವಾಮೀಜಿಗಳಾದ ಗೌರಿಶಂಕರಶ್ರೀಗಳು.

ಶತಾಯುಷಿ ಡಾ. ಜಿ. ವೆಂಕಟಸುಬ್ಬಯ್ಯ

ಶತಾಯುಷಿ ಡಾ. ಜಿ. ವೆಂಕಟಸುಬ್ಬಯ್ಯ

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಶತಾಯುಷಿ ಡಾ. ಜಿ. ವೆಂಕಟಸುಬ್ಬಯ್ಯ (105ವರ್ಷ ) ಅವರಿಂದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರ ೭ನೇ ಬ್ಲಾಕ್ ನಲ್ಲಿ ಮತ ಚಲಾವಣೆ

ಕೋಚ್ ರಾಹುಲ್ ದ್ರಾವಿಡ್

ಕೋಚ್ ರಾಹುಲ್ ದ್ರಾವಿಡ್

ಟೀಂ ಇಂಡಿಯಾದ ಮಾಜಿ ನಾಯಕ, ಹಾಲಿ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಬೆಂಗಳೂರಿನ ಇಂದಿರಾನಗರದಲ್ಲಿ ಮತದಾನ ಮಾಡಿದರು.

ಆಯೋಗದ ರಾಯಭಾರಿ ಪುನೀತ್

ಆಯೋಗದ ರಾಯಭಾರಿ ಪುನೀತ್

ಚುನಾವಣಾ ಆಯೋಗದ ರಾಯಭಾರಿಯಾಗಿ ರಾಹುಲ್ ದ್ರಾವಿಡ್ ರಂತೆ, ಮತದಾನ ಜಾಗೃತಿ ಮೂಡಿಸಿದ್ದ ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪತ್ನಿ ಹಾಗೂ ಅಣ್ಣನ ಮಗ ವಿನಯ್ ರಾಜಕುಮಾರ್ ಅವರ ಜತೆಗೂಡಿ ಮತದಾನ ಮಾಡಿದರು.

ವೃದ್ಧರಿಗೆ ನೆರವಾದ ಸಿಬ್ಬಂದಿ

ವೃದ್ಧರಿಗೆ ನೆರವಾದ ಸಿಬ್ಬಂದಿ

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿಯ 171ನೇ ವಾರ್ಡ್ ನಲ್ಲಿ ವಯೋವೃದ್ಧರಿಗೆ ನೆರವಾದ ಪೊಲೀಸ್ ಸಿಬ್ಬಂದಿ.

ಮದುವೆಗೂ ಮುನ್ನ ಮದುಮಗಳಿಂದ ಮತದಾನ

ಮದುವೆಗೂ ಮುನ್ನ ಮದುಮಗಳಿಂದ ಮತದಾನ

ಮಂಗಳೂರು ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಶಾಲೆಯಲ್ಲಿ ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ರಿಂದ ಮತದಾನ.

ಮತದಾನ‌ ಮಾಡಿ ಬೆಳ್ತಂಗಡಿಯಲ್ಲಿ ಮದುವೆಗೆ ತೆರಳಿದ ಮದುಮಗಳು

ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ

ತೃತೀಯ ಲಿಂಗಿಗಳು

ತೃತೀಯ ಲಿಂಗಿಗಳು

ಈ ಬಾರಿ ತೃತೀಯ ಲಿಂಗಿಗಳಿಗೆ ಮತದಾನ ಹಕ್ಕು ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಕಂಡು ಬಂದಿದೆ.

ಮೈಸೂರು ರಾಜ ವಂಶಸ್ಥೆ ಪ್ರಮೋದಾ ದೇವಿ

ಮೈಸೂರು ರಾಜ ವಂಶಸ್ಥೆ ಪ್ರಮೋದಾ ದೇವಿ

ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು, ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಆಗಮಿಸಿ ಮತದಾನ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಏನು ಬೇಕೆಂಬುದನ್ನು ಪ್ರಜೆಗಳೇ ನಿರ್ಧರಿಸುತ್ತಾರೆ‌ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Elections 2018 : Election Voting in pictures. Voting being held for 222 constituencies amid tight security on May 12 (From 7 AM to 6 PM). Oneindia-Kannada urges the voters to use this opportunity and vote without fail.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more