• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%

|

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಇಡೀ ದೇಶವೂ ಕರ್ನಾಟಕದತ್ತ ಕುತೂಹಲದ ಕಣ್ಣಿಂದ ನೋಡುತ್ತಿದೆ.

ರಾಜ್ಯದ 15ನೇ ವಿಧಾನಸಭಾ ಚುನಾವಣೆಗೆ ವಿವಿಧ ಜಿಲ್ಲೆಗಳಲ್ಲಿ ಮತದಾನ ಪ್ರಾರಂಭಗೊಂಡಿದೆ. ಜನರು ಉತ್ಸಾಹದಿಂದ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಆಡಳಿತ ಯಾರು ನಡೆಸಬೇಕು ಎಂದು ನಿರ್ಣಯಿಸುವ ಕಾಲ ಪ್ರಾರಂಭವಾಗಿದೆ

2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಂದು(ಮೇ 12) ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೂ ಮತದಾನ ನಡೆಯಲಿದೆ. ಮತದಾನಕ್ಕೆ ಸಂಬಂಧಿಸಿದ ಕ್ಷ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Karnataka Assembly Elections 2018 : Voting Live updates May 12

ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ 9000 ಕ್ಕೂ ಅಧಿಕ ನಕಲಿ ವೋಟರ್ ಐಡಿಗಳು ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ಮುಂದೂಡಲ್ಪಟ್ಟಿರುವುದರಿಂದ 2 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿಲ್ಲ. ಮೇ 15ರಂದು ಬಹು ನಿರೀಕ್ಷಿತ ಕರ್ನಾಟಕ ಚುನಾವಣಾ ಕದನದ ಫಲಿತಾಂಶ ಹೊರ ಬೀಳಲಿದೆ.

Newest First Oldest First
5:51 PM, 12 May
5 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 64%
5:31 PM, 12 May
ಹೆಬ್ಬಾಳ ಕ್ಷೇತ್ರದ ಲೊಟ್ಟಗೊಲ್ಲಹಳ್ಳಿ ಮತಗಟ್ಟೆ ಸಂಖ್ಯೆ 2 ರ ಮತಯಂತ್ರದಲ್ಲಿ ದೋಷ. ಮರು ಮತದಾನ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿಕೆ.
4:54 PM, 12 May
ಜೆಡಿಎಸ್ ಮುಖಂಡರ ಜೊತೆ ಬಂದು ಮತದಾನ ಮಾಡಿದ ಮಾಜಿ ಸಚಿವ, ನಟ ಅಂಬರೀಶ್
3:43 PM, 12 May
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರು ಬೆಂಗಳೂರಿನಲ್ಲಿ ಮತಚಲಾಯಿಸಿದರು.
3:41 PM, 12 May
ಕಲಬುರಗಿಯಲ್ಲಿ 43 ಡಿಗ್ರಿ ಸೆಲ್ಷಿಯಸ್ ತಾಪಮಾನವಿದ್ದು, ಇದರಿಂದಾಗಿ ಮತದಾನದ ಪ್ರಮಾಣ ಕೊಂಚ ಕಡಿಮೆಯಾಗಿದೆ. ಬೆಳಿಗ್ಗಿನ ಸಮಯದಲ್ಲಿ ಕೆಲವರು ಮತಚಲಾಯಿಸಿದ್ದು ಕಂಡುಬಂತಾದರೂ, ಈಗ ಅಲ್ಲಿನ ಮತಗಟ್ಟೆಗಳು ಬಿಕೋ ಎನ್ನುತ್ತಿವೆ.
3:13 PM, 12 May
ಇದುವರೆಗೂ ಶೇ.56 ರಷ್ಟು ಮತದಾನದ ದಾಖಲೆ.
2:03 PM, 12 May
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ನಗರಪಾಲಿಕೆ ಸದಸ್ಯ ಪೌರಕಾರ್ಮಿಕರಿಗೆ ಧಮ್ಕಿ ಹಾಕಿರುವ ಘಟನೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದೆ.
1:46 PM, 12 May
1 ಗಂಟೆಯವರೆಗೆ ಶೇ.37 ರಷ್ಟು ಮತದಾನ ದಾಖಲು
1:39 PM, 12 May
ಬೆಳಗಾವಿಯಲ್ಲಿ ಬುರ್ಖಾ ಧರಿಸಿ ಮತದಾನಕ್ಕೆ ಬಂದ ಮಹಿಳೆಯೊಬ್ಬರನ್ನುಚುನಾವಣಾ ಸಿಬ್ಬಂದಿಗಳು ತಡೆದ ಘಟನೆ ನಡೆದಿದೆ. ಆದರೆ ಸಿಬ್ಬಂದಿಯೊಬ್ಬರಿಗೆ ಅವರಿ ಪರಿಚಿತರೇ ಆಗಿದ್ದರಿಂದ ನಂತರ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯ್ತು.
1:21 PM, 12 May
"ವರ್ಷ ವರ್ಷವೂ ಚುನಾವಣಾ ಅಕ್ರಮಗಳು ಹೆಚ್ಚುತ್ತಿವೆ. ಸೀರೆ ಹಂಚುವುಸು, ಆಲ್ಕೋಹಾಲ್, ಧೋತಿ, ಕುಕ್ಕರ್ ಗಳನ್ನೆಲ್ಲ ರಾಜಾರೋಷವಾಗಿ ಹಂಚಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಉತ್ತಮ ಲಕ್ಷಣವಲ್ಲ"- ಬೆಂಗಳೂರಿನಲ್ಲಿ ಮತಚಲಾಯಿಸಿದ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿಕೆ
12:53 PM, 12 May
ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ಕೃಷ್ಣಾ ನದಿ ನಡುಗಡ್ಡೆ ಪ್ರದೇಶದ ಕದಡದರಗಡ್ಡೆಯ ಜನ ಮತದಾನ ಬಹಿಷ್ಕಾರ ಮಾಡಿದ್ದಾರೆ. ಅವರ ಮನವೊಲಿಸಲು ಬಂದ ತಹಶೀಲ್ದಾರ್ ಅವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದ್ದಾರೆ.
12:43 PM, 12 May
ಮಡಿಕೇರಿಯಲ್ಲಿ ಮದುವೆಗೂ ಮುನ್ನ ಮತ ಚಲಾಯಿಸಿ ಮತದಾನದ ಮಹತ್ವವನ್ನು ಸಾರಿಹೇಳಿದ ವಧು.
12:42 PM, 12 May
ಯಡಿಯೂರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ 120 ಕ್ಷೇತ್ರಗಳಲ್ಲಿ ಜಯಗಳಿಸಲಿದೆ- ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ
12:35 PM, 12 May
ಬಳ್ಳಾರಿಯಲ್ಲಿ ಮತ ಚಲಾಯಿಸಿದ ಬಿಜೆಪಿ ಮುಖಂಡ ಶ್ರೀರಾಮುಲು ತಾಯಿ. ಶ್ರೀರಾಮುಲು ಅವರು ಬಾಗಲಕೊಟೆ ಜಿಲ್ಲೆಯ ಬಾದಾಮಿ ಮತ್ತು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
12:33 PM, 12 May
ಮೈಸೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತದಾನ. ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಆಗಮಿಸಿ ಮತದಾನ ಮಾಡಿದ ಪ್ರಮೋದಾದೇವಿ.
12:30 PM, 12 May
ಮೈಸೂರು ಜಿಲ್ಲೆಯಾದ್ಯಂತ 11ಗಂಟೆ ವೇಳೆಗೆ ಶೇ.19.43%.
12:27 PM, 12 May
ಬಳ್ಳಾರಿಯಲ್ಲಿ ಮತ ಚಲಾಯಿಸಿದ ಬಿಜೆಪಿ ಮುಖಂಡ ಶ್ರೀರಾಮುಲು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮತ್ತು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು, ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸಲಿದ್ದಾರೆ.
12:17 PM, 12 May
"ನಾನು ಕಳೆದ ಒಂದೂವರೆ ವರ್ಷದಿಂದ ವರುಣದಲ್ಲಿ ಸುತ್ತಾಟ ನಡೆಸಿದ್ದೇನೆ, ನನಗೆ ಚುನಾವಣಾ ಪ್ರಚಾರ ಭಿನ್ನವೆಂದು ಅನ್ನಿಸಿಲ್ಲ. ನಾನು ಎಲ್ಲೇ ಹೋದರು ಜನರು ಕಾಂಗ್ರೆಸ್ ಸರ್ಕಾರದ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ"- ಡಾ.ಯತೀಂದ್ರ ಸಿದ್ದರಾಮಯ್ಯ, ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
11:40 AM, 12 May
ಕಲಬುರಗಿಯ ಬಸವನಗರ ಮತಗಟ್ಟೆ ಸಂಖ್ಯೆ 109 ರಲ್ಲಿ ಮತದಾನ ಮಾಡಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ.
11:36 AM, 12 May
ರಾಮನಗರದ ಕೇತನಾಗನಹಳ್ಳಿಯ ಮತಗಟ್ಟೆ ಸಂಖ್ಯೆ 232 ರಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಮತ ಚಲಾಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಎಚ್ ಡಿ ಕುಮಾರಸ್ವಾಮಿ ರಾಮನಗರದ ಜೆಡಿಎಸ್ ಅಭ್ಯರ್ಥಿ.
11:31 AM, 12 May
ಶಿಡ್ಲಘಟ್ಟ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಜಣ್ಣಗೆ ತೀವ್ರ ಅನಾರೋಗ್ಯ, ಐಸಿಯುನಲ್ಲಿ ಚಿಕಿತ್ಸೆ, ಹಾಲಿ ಶಾಸಕ ರಾಜಣ್ಣ ಜೆಡಿಎಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದರು. ಎರಡು ಬಾರಿ ಭಿ-ಫಾರಂ ಪಡೆದರೂ ಕೂಡ ಕೊನೆ ಗಳಿಗೆಯಲ್ಲಿ ಅವರ ಭಿ-ಫಾರಂ ಅನ್ನು ಜೆಡಿಎಸ್ ವರಿಷ್ಠರು ರದ್ದುಗೊಳಿಸಿ ಮೇಲೂರು ರವಿಗೆ ಟಿಕೆಟ್ ನೀಡಿದ್ದರು.
11:18 AM, 12 May
11 ಗಂಟೆಯವರೆಗೆ ಶೇ.24 ರಷ್ಟು ಮತದಾನ ರಾಜ್ಯದಲ್ಲಿ ದಾಖಲಾಗಿದೆ.
11:04 AM, 12 May
ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಮತದಾನ. ಪತ್ನಿ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ. ಪತ್ನಿ ಅರ್ಪಿತಾ ಸಿಂಹರಿಂದಲೂ ಮತದಾನ. ವಿಜಯನಗರ ಕಾನ್ ಕಾರ್ಡ್ ಇಂಟರ್ನ್ಯಾಷನಲ್ ಸ್ಕೂಲ್‌ ಮತಗಟ್ಟೆಯಲ್ಲಿ ಮತದಾನ.
11:03 AM, 12 May
ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗಡೆ ದಂಪತಿ ಮತದಾನ, ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾವಣೆ ಮಾಡಿದ ವೀರೇಂದ್ರ ಹೆಗಡೆ
11:03 AM, 12 May
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮತ ಚಲಾಯಿಸಿದ ವಿಶಿಷ್ಠ ಚೇತನ ಯುವಕ. ವ್ಹೀಲ್ ಚೇರ್ ನಲ್ಲೇ ಬಂದು ಮತ ಚಲಾಯಿಸಿ ಆದರ್ಶ ಮೆರೆದ ಯುವಕ.
11:01 AM, 12 May
ಕನಕಪುರದಲ್ಲಿ ಮತಚಲಾಯಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ
10:47 AM, 12 May
ಬೆಂಗಳೂರಿನ ವಿಜಯನಗರದ ಹಂಪೀನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯ ಕರ್ತರಿಂದ ಮಾರಾಮಾರಿ. ಬಿಜೆಪಿ ಕಾರ್ಪೋರೇಟರ್ ಆನಂದ್ ಬೆಂಬಲಿಗರಿಂದ ಹಲ್ಲೆ.
10:39 AM, 12 May
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಮತದಾನ ಮಾಡಿದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ.
10:24 AM, 12 May
ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಮತದಾನ. ಮತದಾನ ಮಾಡಿದ 111 ವರ್ಷ ವಯಸ್ಸಿನ ಶತಾಯುಷಿ ಸ್ವಾಮೀಜಿ.
10:18 AM, 12 May
ಮೈಸೂರಿನಲ್ಲಿ ಒಟ್ಟು 8.2 % ಮತದಾನ, ಕೃಷ್ಣರಾಜ ನಗರ – 8.80 %, ಹುಣಸೂರು – 7.19 %, ಹೆಚ್.ಡಿ ಕೋಟೆ – 9.95 % ಮತದಾನ ನಂಜನಗೂಡು – 5.29 %, ಚಾಮರಾಜ – 7.8 % - ಕೆ.ಆರ್ ನಗರ – 9.39 %, ನರಸಿಂಹರಾಜ – 9.04 %, ವರುಣಾ – 8.38 %, ಟಿ ನರಸೀಪುರ – 7.13 % ಮತದಾನ
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Elections 2018 : Voting Live updates are here. Voting began today (May 12) for 222 constituencies amid tight security at 7 am. It will continue till 6 pm. Total 58,008 polling stations have been set up all over the state. Oneindia-Kannada urges the voters to use this opportunity and vote without fail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more