ಕರ್ನಾಟಕ ರಾಜಕೀಯದ ದಿಕ್ಕು ಬದಲಿಸೀತಾ ಮೋದಿ ಅಲೆ..?!

Posted By: ವಿಕಾಸ್ ನಂಜಪ್ಪ
Subscribe to Oneindia Kannada
   Karnataka Elections 2018 : ಕರ್ನಾಟಕದಲ್ಲಿ ಮೋದಿ ಅಲೆ ವರ್ಕ್ ಔಟ್ ಆಗುತ್ತಾ? | Filmibeat Kananda

   ಬೆಂಗಳೂರು, ಮಾರ್ಚ್ 30: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು 'ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಲಿದೆ' ಎಂದಿರುವುದು ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. 'ಸಮೀಕ್ಷೆಗಳು ಸರ್ಕಾರಿ ಪ್ರಾಯೋಜಿತ' ಎಂದು ಬಿಜೆಪಿಯ ಕೆಲವು ಮುಖಂಡರು ಸಮಜಾಯಿಷಿ ನೀಡಿದ್ದರೂ ಒಳಗೊಳಗೇ ಭಯವಿರುವುದು ಸುಳ್ಳಲ್ಲ.

   ಆದ್ದರಿಂದಲೇ ಕರ್ನಾಟಕದಲ್ಲೂ ಮೋದಿ ಅಲೆ ಕೆಲಸಮಾಡೀತು ಎಂಬ ವಿಶ್ವಾಸದಲ್ಲಿರುವ ಬಿಜೆಪಿ ನಾಯಕರು ಪ್ರಧಾನಿ ಮೋದಿಯವರನ್ನು ಕರ್ನಾಟಕಕ್ಕೆ ಆಮಂತ್ರಿಸಿದ್ದು, ಅವರು ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸುಮಾರು 25 ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

   ಸಿದ್ದರಾಮಯ್ಯ, ಅಮಿತ್ ಶಾರಿಂದ ಮೈಸೂರಿನಲ್ಲಿ ಭರ್ಜರಿ ಮತ ಬೇಟೆ

   ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾರಕ್ಕೊಮ್ಮೆ ಎಂಬಂತೆ ಕರ್ನಾಟಕಕ್ಕೆ ಆಗಮಿಸಿ ಬೇರೆ ಬೇರೆ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲೂ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

   Karnataka assembly elections 2018: PM Modi to address 25 rallies

   ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಮೋದಿ ಅಲ್ಲಿ 24 rally ಗಳಲ್ಲಿ ಭಾಗವಹಿಸಿದ್ದರು. ಬಿಹಾರದಲ್ಲಿ 31 rally ಗಳಲ್ಲಿ ಭಾಗವಹಿಸಿದ್ದು ಇದುವರೆಗಿನ ಗರಿಷ್ಠ ಸಂಖ್ಯೆ. ಕರ್ನಾಟಕದಲ್ಲಿ 25 rally ಗಲ್ಲಿ ಖುದ್ದು ಮೋದಿ ಭಾಗವಹಿಸುತ್ತಿರುವುದು ಇಲ್ಲಿನ ಬಿಜೆಪಿ ನಾಯಕರಲ್ಲಿ ಹೊಸ ಹುರುಪು ಮೂಡಿಸಿದೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   ಚುನಾವಣೆಗೂ ಮುನ್ನ ಸುಮಾರು 10 ಕ್ಕೂ ಹೆಚ್ಚು ಬಾರಿ ಮೋದಿ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ದಿನವೂ ತಲಾ 2 rally ಗಳಲ್ಲಿ ಅವರು ಭಾಗವಹಿಸಲಿದ್ದಾರೆ.

   ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

   ಕರ್ನಾಟಕದಲ್ಲಿ ಮೇ.12 ರಂದು ಮತದಾನ ನಡೆಯಲಿದ್ದು ಮೇ.15 ರಂದು ಫಲಿತಾಂಶ ಹೊರಬೀಳಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka assembly elections 2018: With a few poll surveys suggesting that the Congress is ahead in Karnataka, the BJP has decided to have more of Narendra Modi in the campaign. He would address at least 25 rallies before the state goes to poll on May 12.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ