ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಟ್ಟೀಟ್ ಗೆ ಟ್ವೀಟುತ್ತರ ನೀಡಿದ ಶೋಭಾ ಕರಂದ್ಲಾಜೆ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 7 : ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ನಡುವೆ ನಡೆಯುತ್ತಿದ್ದ ಟ್ಟಿಟ್ಟರ್ ಸಮರವೀಗ ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ ನಡುವೆ ನಡೆಯುತ್ತಿದೆ. ಟ್ವೀಟ್ ಟ್ವೀಟ್ ನಡುವೆ ಭಾರೀ ಚಕಮಕಿ ನಡೆಯುತ್ತಿದೆ. ಯಾರು ಗೆಲ್ಲುತ್ತಾರೋ ನೋಡೇಬಿಡೋಣ.

ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಬಾಣ ಎಸೆದಿದ್ದ ಮುಖ್ಯಮಂತ್ರಿಗೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತ್ಯುತ್ತರ ನೀಡಿದ್ದಾರೆ. #HublotPrideSidda ಹ್ಯಾಷ್ ಟ್ಯಾಗ್ ಬಳಸಿ ಅವರು 5 ಟ್ಟೀಟ್ ಗಳನ್ನು ಮಾಡಿದ್ದು ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತೆ ಅನ್ಕೊಂಡಿದೆ ಜೆಡಿಎಸ್ :ಶೋಭಾ ಲೇವಡಿರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತೆ ಅನ್ಕೊಂಡಿದೆ ಜೆಡಿಎಸ್ :ಶೋಭಾ ಲೇವಡಿ

ನಿಮಗೆ ಯಾಕೆ ಕರ್ನಾಟಕದ ಮತದಾರರು ಮತ ಹಾಕಬೇಕು ಎಂದು ಕರ್ನಾಟಕದ ಜನರಿಗೆ ಯಡಿಯೂರಪ್ಪ 5 ಕಾರಣಗಳನ್ನು ಕೊಡಲಿ ನೋಡೋಣ ಎಂದು ಟ್ಟೀಟ್ ನಲ್ಲೇ ಸವಾಲು ಹಾಕಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇಂಥ ಸವಾಲು ಎಸೆದರು ಶೋಭಾ ಅವರು ಸುಮ್ಮನಿರಲು ಸಾಧ್ಯವೆ? ಸವಾಲು ನಿಮ್ದು ಜವಾಬು ನಮ್ದು ಎಂಬಂತೆ ಶೋಭಾ ಕರಂದ್ಲಾಜೆ ಅವರು ಭರ್ಜರಿಯಾಗಿಯೇ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯನವರಿಂದ ಮತ್ತೆ ಪ್ರತ್ಯುತ್ತರ ಬಂದರೂ ಅಚ್ಚರಿಯಿಲ್ಲ, ನಿರೀಕ್ಷಿಸಿ.

Array

ಬೇರೆಯವರ ಮೇಲೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ

ತಮಗೆ ಯಾಕೆ ಮತ ಹಾಕಬಹುದು ಎಂದು ಕರ್ನಾಟಕದ ಜನರಿಗೆ ಯಡಿಯೂರಪ್ಪ 5 ಕಾರಣಗಳನ್ನು ಕೊಡಲಿ ನೋಡೋಣ ಎಂದು ಟ್ಟೀಟ್ ನಲ್ಲೇ ಸವಾಲು ಹಾಕಿದ್ದ ಸಿಎಂ, "ನಾನಿಲ್ಲಿ ಯಾಕೆ ಮತ ಹಾಕಬಾರದು ಎಂದು ನನ್ನ 5 ಕಾರಣಗಳನ್ನು ನೀಡಿದ್ದೇನೆ. ಮೊದಲೆನೆಯದ್ದು, 2008-13ರ ನಡುವಿನ ಬಿಜೆಪಿ ಸರಕಾರ ರಾಜ್ಯದ ಇತಿಹಾಸದಲ್ಲೇ ಭ್ರಷ್ಟ ಸರಕಾರ. ಓರ್ವ ಸಿಎಂ ಮತ್ತು 5 ಸಚಿವರು ಜೈಲಿಗೆ ಹೋಗಿದ್ದರು," ಎಂದು ಟ್ಟೀಟಿಸಿದ್ದರು.

ಇದಕ್ಕೆ ಉತ್ತರ ನೀಡಿರುವ ಶೋಭಾ ಕರಂದ್ಲಾಜೆ, "ದೇಶದ ಭದ್ರತೆಗೆ ಅಪಾಯಕಾರಿ ಎಂದು ಘೋಷಣೆಯಾದ, ತಲೆ ಮರೆಸಿಕೊಂಡ ವ್ಯಕ್ತಿಗಳ ಜೊತೆಗೆ ನೀವು ಡೀಲ್ ಕುದುರಿಸಿದ್ದೀರಿ. ಹೀಗಾಗಿ ಭಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಭ್ರಷ್ಟಾಚಾರ ಪ್ರಕರಣದಲ್ಲಿ ನಿಮ್ಮ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ. ಮತ್ತು ನೀವು ಅವರ ಜೊತೆಗೆ ಪ್ರಚಾರ ನಡೆಸುತ್ತೀರಿ. ಬೇರೆಯವರ ಮೇಲೆ ನೀವು ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ," ಎಂದಿದ್ದಾರೆ.

ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು: ಶೋಭಾ ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು: ಶೋಭಾ

Array

ಹಿಂಬಾಗಿಲಿಂದ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸಲು ಯತ್ನಿಸಿತ್ತು ಕಾಂಗ್ರೆಸ್

"5 ವರ್ಷಗಳ ಕಾಲ ಮೂರು ಮುಖ್ಯಮಂತ್ರಿಗಳನ್ನು ಹಿಡಿದುಕೊಂಡು ಅಸ್ಥಿರ ಸರಕಾರವನ್ನು ಬಿಜೆಪಿ ನಡೆಸಿತು. ಆಪರೇಷನ್ ಕಮಲ ಹೆಸರಿನಲ್ಲಿ ಶಾಸಕರ ಖರೀದಿ ಮತ್ತು ಮಾರಾಟ ನಡೆಯಿತು. ಅವರೆಲ್ಲಾ ರೆಸಾರ್ಟ್ ನಿಂದ ರೆಸಾರ್ಟ್ ಗೆ ಹಾರುತ್ತಿದ್ದರು. ಹೆಚ್ಚಿನ ಎಲ್ಲಾ ಸಮೀಕ್ಷೆಗಳು ರಾಜ್ಯದಲ್ಲಿ ಬಹುಮತಕ್ಕೆ ಬೇಕಾದಕ್ಕಿಂತ ತುಂಬಾ ಕಡಿಮೆ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎನ್ನುತ್ತಿದ್ದು, ರಾಜ್ಯ ಮತ್ತೆ ಈ ಹಿಂದಿನ ಸ್ಥಿತಿಗೆ ಹೋಗಿ ತಲುಪಲಿದೆ." ಎಂದು ಸಿಎಂ ಹೇಳಿ ಬಿಜೆಪಿಗೆ ಮತ ಹಾಕಬಾರದು ಎಂದಿದ್ದರು.

"ಕನ್ನಡಿಗರ ತೆರಿಗೆ ಹಣದಲ್ಲಿ ಗುಜರಾತ್ ನ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿ ತಂದಿಟ್ಟ ನೀವೇ ಇಂಥಹ ಮಾತನಾಡುತ್ತಿದ್ದೀರಿ. ಯುಪಿಎ 2 ಸರಕಾರ ಅ಻ಸ್ಥಿರ ಮಾತ್ರವೇ ಆಗಿರಲಿಲ್ಲ. ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳನ್ನೂ ಹಿಂಬಾಗಿಲ ಮೂಲಕ ಅಸ್ಥಿರಗೊಳಿಸಲು ಯತ್ನಿಸುತ್ತಿತ್ತು. ರಾಜ್ಯಪಾಲರ ಮೂಲಕ ಈ ರೀತಿಯ ಚಟುವಟಿಕ ನಡೆಸಿದ್ದಕ್ಕೆ ಕೋರ್ಟ್ ಗಳೂ ಖಂಡಿಸಿದ್ದವು," ಎಂದು ಶೋಭಾ ಕರಂದ್ಲಾಜೆ ಪ್ರತ್ಯುತ್ತರ ನೀಡಿದ್ದಾರೆ.

ಸಿದ್ಧರಾಮಯ್ಯ ಒಬ್ಬ ಕ್ರೂರಿ, ಧರ್ಮ, ಜಾತಿ, ಸಮಾಜ ಒಡೆದ ಸಿಎಂ: ಕರಂದ್ಲಾಜೆ ಸಿದ್ಧರಾಮಯ್ಯ ಒಬ್ಬ ಕ್ರೂರಿ, ಧರ್ಮ, ಜಾತಿ, ಸಮಾಜ ಒಡೆದ ಸಿಎಂ: ಕರಂದ್ಲಾಜೆ

20+ ರಾಜ್ಯಗಳನ್ನು ಮುಕ್ತ ಸ್ವಾತಂತ್ರ್ಯ ನೀಡಿ ಆಳುತ್ತಿದ್ದೇವೆ

"ಸ್ವಾತಂತ್ರ್ಯದ ಬಗ್ಗೆ ಬಿಜೆಪಿಗೆ ಯಾವುದೇ ಗೌರವ ಇಲ್ಲ. ಜನರು ಇಷ್ಟ ಬಂದಂತೆ ಅವರಿಗೆ ಜೀವಿಸುವ ಹಕ್ಕಿದೆ. ಒಮ್ಮೆ ಅಧಿಕಾರಕ್ಕೆ ಬಂದ ನಂತರ, ವಸ್ತ್ರ ಸಂಹಿತೆ, ಆಹಾರ ಸಂಹಿತೆ ಮತ್ತು ನೀವು ಯಾರನ್ನು ಪ್ರೀತಿಸಬಹುದು ಎಂಬ ಸಂಹಿತೆಯನ್ನು ಹೇರುತ್ತಾರೆ. ಇದೆಲ್ಲದಕ್ಕೂ ಮಿಗಿಲಾಗಿ ಕನ್ನಡದ ಮೇಲೆ ಹಿಂದಿಯನ್ನು ಹೇರುತ್ತಾರೆ," ಎಂದು ಬಿಜೆಪಿಯ ಕಾಲೆಳೆದಿದ್ದರು.

ಇದಕ್ಕೆ ತಪರಾಕಿ ನೀಡಿರುವ ಶೋಭಾ, "ಬಿಜೆಪಿ 20+ ರಾಜ್ಯಗಳನ್ನು ಮುಕ್ತ ಸ್ವಾತಂತ್ರ್ಯ ನೀಡಿ ಆಳುತ್ತಿದೆ. ಯಾವುದೇ ವಸ್ತ್ರ ಸಂಹಿತೆ, ಆಹಾರ ಸಂಹಿತೆ, ಪ್ರೇಮ ಸಂಹಿತೆಗಳು ಇಲ್ಲ. ಇದು ದನದ ಮಾಂಸದ ಬಗ್ಗೆಯೇ ಆಗಿದ್ದರೆ, 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗೋ ಹತ್ಯೆ ನಿಷೇಧದ ಬಗ್ಗೆ ವಿವರಣೆ ನೀಡಿ . ಎನ್ಐಎ ಮತ್ತು ನ್ಯಾಯಾಲಯಗಳು ಸತ್ಯ ಎಂದು ಒಪ್ಪಿಕೊಂಡಿರುವ ಲವ್ ಜಿಹಾದನ್ನು ನಾವು ಒಪ್ಪಿಕೊಳ್ಳಲು ಸಿದ್ದವಿಲ್ಲ," ಎಂದಿದ್ದಾರೆ.

ಭಾರತ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಲ್ಲಿ ಮೇಲಕ್ಕೇರಿದೆ

"ಬಿಜೆಪಿಗೆ ಎಂದಿಗೂ ಶಾಂತಿ ಬೇಕಿಲ್ಲ. ಅವರೇನಾದರೂ ಅಧಿಕಾರಕ್ಕೆ ಬಂದರೆ ರಸ್ತೆಯಲ್ಲೇ ಕೋಮುವಾದ ಆರಂಭವಾಗುತ್ತದೆ. ಚರ್ಚ್ ದಾಳಿ, ಪಬ್ ದಾಳಿ ಗಳು ಮತ್ತೆ ಆರಂಭವಾಗುತ್ತವೆ. ಗೋಹತ್ಯೆ ನಡೆಸುವವರು ಬೀದಿಗೆ ಬರುತ್ತಾರೆ. ಇವೆಲ್ಲ ಜೀವನಕ್ಕೂ ಒಳ್ಳೆಯದಲ್ಲ, ವ್ಯವಹಾರಕ್ಕೂ ಒಳ್ಳೆಯದಲ್ಲ. ಇದರಿಂದ ನಿರುದ್ಯೋಗ ತಲೆದೂರುತ್ತದೆ," ಎಂದು ಸಿಎಂ ಬಿಜೆಪಿಗೆ ಮತ ಯಾಕೆ ನೀಡಬಾರದು ಎಂಬ ಕಾರಣವನ್ನು ವಿವರಿಸಿದ್ದರೆ.

"ಭಾರತ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಲ್ಲಿ ಮೇಲಕ್ಕೇರಿದೆ. ಕಾಂಗ್ರೆಸ್ ಗೂಂಡಾಗಳನ್ನು ಬಾಡಿಗೆಗೆ ಪಡೆದು ಚರ್ಚ್ ಗಳ ಮೇಲೆ ದಾಳಿ ಮಾಡಿದ ವಿಚಾರ ಜನರಿಗೆ ಮನವರಿಕೆ ಆಗಿದೆ. ಮತ್ತು ಇದನ್ನು ಬಿಜೆಪಿ ತಲೆಗೆ ಕಟ್ಟಿದ್ದೂ ಗೊತ್ತಾಗಿದೆ. ಈ ಕಾರಣಕ್ಕೆ ದೇಶದಾದ್ಯಂತ ಎಲ್ಲಾ ಚುನಾವಣೆಗಳನ್ನೂ ಬಿಜೆಪಿ ಗೆಲ್ಲುತ್ತಿದೆ," ಎಂದು ಶೋಭಾ ಕರಂದ್ಲಾಜೆ ಟ್ಟೀಟ್ ನಲ್ಲೇ ಉತ್ತರ ನೀಡಿದ್ದಾರೆ.

ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ

"ಬಿಜೆಪಿ ಎಂದಿಗೂ ತಾನು ನೀಡಿದ ವಚನವನ್ನು ಉಳಿಸಿಕೊಳ್ಳುವುದಿಲ್ಲ. ಕೇಂದ್ರದಲ್ಲಿ ಅವರು ಎಲ್ಲರಿಗೂ 15 ಲಕ್ಷ ರೂ ನೀಡುತ್ತೇವೆ ಎಂದರು. ಆರ್ಥಿಕ ಪ್ರಗತಿಯಾಗುತ್ತದೆ ಎಂದರು.

ಆದರೆ ವಾಸ್ತವದಲ್ಲಿ ಅವರು ನೋಟ್ ಬ್ಯಾನ್ ಮಾಡಿದರು, ಆರ್ಥಿಕ ಪ್ರಗತಿಯನ್ನು ಕೊಂದರು. ಅವರು ರೈತ ವಿರೋಧಿ, ಸ್ತ್ರೀ ವಿರೋಧಿ, ಯುವಕರ ವಿರೋಧಿ, ದಲಿತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಮತ್ತು ವ್ಯವಹಾರ ವಿರೋಧಿ" ಎಂದು ಸಿಎಂ ಕಿಡಿಕಾರಿದ್ದರು.

"ಚುನಾವಣಾ ಸಮಾವೇಶದಲ್ಲಿ ಬಿಜೆಪಿ 15 ಲಕ್ಷ ಖಾತೆಗೆ ಹಾಕುವ ಬಗ್ಗೆ ಹೇಳಿದ್ದರೆ ನೀವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ನ್ಯಾಯಾಲಯಕ್ಕೆ ಹೋಗಬಹುದು. ಕಪ್ಪು ಹಣದ ವ್ಯವಹಾರ ಮಾಡುವ ನಿಮ್ಮ ಗೆಳೆಯರಿಗೆ ಅಪನಗದೀಕರಣದಿಂದ ತೊಂದರೆಯಾಗಿದೆ ಎಂಬುದು ನಮಗೆ ಗೊತ್ತು. ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ನಿಮ್ಮ ಯುಪಿಎ ಸರಕಾರದಷ್ಟು ಆರ್ಥಿಕತೆ ದುರ್ಬಲವಾಗಿಲ್ಲ," ಎಂದು ಅವರು ಪ್ರತ್ಯುತ್ತರದಲ್ಲಿ ಹೇಳಿದ್ದಾರೆ.

ಮೋದಿ ಯಾವುದೇ ಖಾಸಗಿ ಭೂಗತ ಸಭೆಗೆ ಹೋಗಿಲ್ಲ

"ಒಂದೊಮ್ಮೆ ಬಿಜೆಪಿ ಆರೋಪಿಯೊಂದಿಗಿರುವ ನನ್ನ ಫೋಟೋ ತೋರಿಸಿ ನನ್ನನ್ನು ಆರೋಪಿ ಮಾಡುವುದಾರೆ, ದಾವೋಸ್ ನಲ್ಲಿ ನೀರವ್ ಮೋದಿ ಜೊತೆಗಿರುವ ಮೋದಿ ಫೋಟೋಗೆ ಅವರನ್ನೂ ಆರೋಪಿಯಾಗಿಸಬಹುದು," ಎಂದು ಸಿದ್ದರಾಮಯ್ಯ ವಾದ ಮಂಡಿಸಿದ್ದರು.

ಇದಕ್ಕೆ ಉತ್ತರ ನೀಡಿರುವ ಕರಂದ್ಲಾಜೆ "ನರೇಂದ್ರ ಮೋದಿ ಯಾವುದೇ ಖಾಸಗಿ ಭೂಗತ ಸಭೆಗೆ ನಿಮ್ಮ ಹಾಗೆ ಹೋಗಿಲ್ಲ. ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ನೀರವ್ ಮೋದಿ ಹೋದಾಗ ಅವರ ಮೇಲೆ ಯಾವುದೇ ಆರೋಪ ಇರಲಿಲ್ಲ. ದೇಶಕ್ಕೆ ಅಪಾಯಕಾರಿ ಎಂದು ಘೋಷಿಸಿದ, ತಲೆಮರೆಸಿಕೊಂಡಿರುವವನ ಕೈಕುಲುಕಿದ್ದಲ್ಲದೆ ನೀವು ಅವರಿಂದ ಉಡುಗೊರೆಯನ್ನೂ ಸ್ವೀಕರಿಸಿದಂತೆ ಕಾಣಿಸುತ್ತಿದೆ," ಎಂದಿದ್ದಾರೆ.

English summary
Karnataka Assembly Elections 2018: BJP MP Shobha Karandlaje given detailed reply to chief minister Siddaramaiah in her series of tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X