ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ: ಹಣದ ಭರಾಟೆ ತಡೆಗೆ ಐಟಿ ಇಲಾಖೆಯಿಂದ ಕ್ರಮ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 17: ಇನ್ನು ಕೆಲವೇ ವಾರಗಳಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುವ ನಿರೀಕ್ಷೆಯಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಆದಾಯ ತೆರಿಗೆ ಇಲಾಖೆಯಿಂದ ಹಲವು ತಂಡಗಳನ್ನು ನೇಮಿಸಲಾಗುವುದು ಎಂದು ಕರ್ನಾಟಕ ಮತ್ತು ಗೋವಾ ವಿಭಾಗದ ಆದಾಯ ತೆರಿಗೆ(ತನಿಖಾ) ವಿಭಾಗದ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಆದಾಯ ತೆರಿಗೆ ವಿಭಾಗದ ಹೊಸ ಕಚೇರಿಯನ್ನು ಉದ್ಘಾಟಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವೂ ಹಲವು ಸುತ್ತಿನ ಸಭೆಗಳನ್ನು ನಡೆಸಿ ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದ ವೀರಪ್ಪ ಮೊಯ್ಲಿ ಟ್ವೀಟ್!ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದ ವೀರಪ್ಪ ಮೊಯ್ಲಿ ಟ್ವೀಟ್!

Karnataka assembly elections 2018: IT dept perceives use of money power

'ಆದಾಯ ತೆರಿಗೆ ವಿಭಾಗದ ಉಪ ನಿರ್ದೇಶಕರಿಗೆ ಅನುಮಾನ ಬಂದಲ್ಲಿ ತಕ್ಷಣವೇ ಸ್ವಂತ್ತನ್ನು ವಶಪಡಿಸಿಕೊಳ್ಳುವ ಅಥವಾ ಹುಡುಕುವ ಶಾಸನಬದ್ಧ ಅಧಿಕಾರವಿರುತ್ತದೆ. ಅಲ್ಲದೆ, ಎಲ್ಲೇ ಹಣದ ಹಂಚಿಕೆಯಾಗುತ್ತಿದ್ದರೂ, ಅಥವಾ ಸಾಗಾಟವಾಗುತ್ತಿದ್ದರೂ ಆ ಬಗ್ಗೆ ಇಲಾಖೆಗೆ ಜನರು ದೂರು ನೀಡಲು ಅಥವಾ ಮಾಹಿತಿ ನೀಡಲು ಹೆಲ್ಫ್ ಲೈನ್ ರೀತಿಯ ಫೊನ್ ನಂಬರ್ ಮತ್ತು ಇಮೇಲ್ ಐಡಿಯೊಂದನ್ನು ಒದಗಿಸುತ್ತಿದ್ದೇವೆ' ಎಂದು ಸಹ ಅವರು ಹೇಳಿದರು.

English summary
Money power is perceived to play a major role in the upcoming Karnataka Assembly Elections 2018. In a bid to curb the role of money power, the Income Tax authorities would have dedicated teams in the state to keep a close watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X