ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳು

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 27: ಇಡೀ ದೇಶವೇ ಎದುರು ನೋಡುತ್ತಿರುವ ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Recommended Video

Karnataka Elections 2018 : ಅಮಿತ್ ಮಾಳವೀಯಗೆ ಚುನಾವಣಾ ದಿನಾಂಕ ಮೊದಲೇ ತಿಳಿದದ್ದು ಹೇಗೆ | Oneindia Kannada

ಒಟ್ಟು ಮತದಾರರು, ಚುನಾವಣಾ ದಿನಾಂಕ, ಅಭ್ಯರ್ಥಿಗಳ ಖರ್ಚಿಗೆ ಮಿತಿ ನಿಗದಿ, ಮತಗಟ್ಟೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಇದೇ ಮೇ 26ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಅವಧಿ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ.

ವಿಧಾನಸಭಾ ಕ್ಷೇತ್ರಗಳು

ವಿಧಾನಸಭಾ ಕ್ಷೇತ್ರಗಳು

ಒಟ್ಟು ವಿಧಾನಸಭಾ ಕ್ಷೇತ್ರಗಳು - 224

ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರಗಳು - 36

ಪರಿಶಿಷ್ಟ ವರ್ಗಜ್ಜೆ ಮೀಸಲು ಕ್ಷೇತ್ರಗಳು - 15

ಮತದಾರರು

ಒಟ್ಟು ಮತದಾರರು - 4,96,82,357

2013ರಲ್ಲಿ ಇದ್ದ ಮತದಾರರು - 4,36,85,000

ಪುರುಷ ಮತದಾರರು - 2,51,79,219

ಮಹಿಳಾ ಮತದಾರರು - 2,44,76,840

ಜನಸಂಖ್ಯೆಗೆ ಹೋಲಿಸಿದಾಗ ಕರ್ನಾಟಕದಲ್ಲಿ ಶೇಕಡಾ 72 ಮತದಾರರಿದ್ದಾರೆ. 2011ರ ಜನಗಣತಿಗೆ ಹೋಲಿಸಿದರೆ ಈ ಸಂಖ್ಯೆ ಸರಿಸುಮಾರು ಸರಿಯಾಗಿದೆ. ಲಿಂಗ ಅನುಪಾತವೂ ಜನಗಣತಿಯ ಲೆಕ್ಕಕ್ಕೆ ಸರಿಯಾಗಿದೆ ಎಂದು ಒಪಿ ರಾವತ್ ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳುಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

ಗುರುತಿನ ಚೀಟಿ

ಗುರುತಿನ ಚೀಟಿ

ಚುನಾವಣಾ ಆಯೋಗದ ಬಳಿ ಇರುವ ಗುರುತಿನ ಚೀಟಿಯಲ್ಲಿ ಶೇಕಡಾ 99.47 ಮತದಾರರ ಭಾವಚಿತ್ರಗಳಿವೆ. ಶೇಕಡಾ 97.46 ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ.

ಚುನಾವಣೆಗೂ 7 ದಿನ ಮೊದಲು ಮನೆಗಳಿಗೆ ಮತ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಇದನ್ನೇ ದಾಖಲೆಯಾಗಿ ಉಪಯೋಗಿಸಿ ಮತದಾನ ಮಾಡಬಹುದು ಎಂದು ರಾವತ್ ಹೇಳಿದ್ದಾರೆ.

ಪ್ರತಿ ಮನೆಗೂ ಮತದಾನ ಮಾರ್ಗದರ್ಶಿಯನ್ನು ನೀಡಲಾಗುತ್ತದೆ. ಇದು ಕನ್ನಡ ಮತ್ತು ಬೇಕಿದ್ದರೆ ಇಂಗ್ಲೀಷ್ ಭಾಷೆಯಲ್ಲೂ ಇರುತ್ತದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು? ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಮತಗಟ್ಟೆಗಳು

ಮತಗಟ್ಟೆಗಳು

2013 ರಲ್ಲಿ ರಾಜ್ಯದಲ್ಲಿ ಇದ್ದ ಮತಗಟ್ಟೆಗಳು - 52,034

2018 ರಲ್ಲಿ ಮತಗಟ್ಟೆಗಳ ಸಂಖ್ಯೆ - 56,696.

ಒಟ್ಟಾರೆ ಮತಗಟ್ಟೆಗಳ ಸಂಖ್ಯೆಯಲ್ಲಿ ಶೇಕಡಾ 9 ಹೆಚ್ಚಳವಾಗಿದೆ.

ಈ ಚುನಾವಣೆಯಲ್ಲಿ 'ಆಕ್ಸೆಸಿಬಲ್ ಎಲೆಕ್ಷನ್' ಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.

ನಗರ ಪ್ರದೇಶದ ಪ್ರತೀ ಕ್ಷೇತ್ರಗಳ 5 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 450 ಮಹಿಳೆಯರೇ ನಿರ್ವಹಣೆ ಮಾಡುವ ಮತಗಟ್ಟೆಗಳಾಗಿವೆ.

ಇವಿಎಂ

ಇವಿಎಂ

ಬಾರಿ ಸಂಪೂರ್ಣವಾಗಿ ವಿವಿಪ್ಯಾಟ್ ಹೊಂದಿರುವ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರತೀ ಕ್ಷೇತ್ರದಲ್ಲಿ ಒಂದು ವಿವಿಪ್ಯಾಟ್ ಗಳ ಸ್ಲಿಪ್ ಲೆಕ್ಕ ಹಾಕಿ ಇವಿಎಂಗಳ ಜತೆ ತಾಳೆ ಮಾಡಲಾಗುತ್ತದೆ.

ಈ ಬಾರಿ ಅಭ್ಯರ್ಥಿಗಳ ಭಾವಚಿತ್ರವನ್ನು ಇವಿಎಂಗಳಲ್ಲಿ ಪ್ರಕಟ ಮಾಡಲಾಗುತ್ತದೆ. ಇನ್ನು ಎಲೆಕ್ಟ್ರಾನಿಕ್ ಟ್ರಾನ್ಸಿಮಿಟೆಡ್ ಪೋಸ್ಟಲ್ ವೋಟ್ ವ್ಯವಸ್ಥೆಯನ್ನು ಸೇನೆ ಮತ್ತು ಸರಕಾರಿ ಸೇವೆಯಲ್ಲಿರುವವರಿಗೆ ನೀಡಲಾಗುತ್ತದೆ.

ನೀತಿ ಸಂಹಿತೆ

ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ. ಸಂಪೂರ್ಣ ಕರ್ನಾಟಕಕ್ಕೆ ಇದು ಅನ್ವಯವಾಗಲಿದೆ. ಅಭ್ಯರ್ಥಿಗಳಿಗೆ ಮತ್ತು ಕೇಂದ್ರ ಸರಕಾರ ಘೋಷಣೆ ಮಾಡುವ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೂ ಇದು ಅನ್ವಯವಾಗಲಿದೆ.

ಪ್ರಚಾರ

ಪ್ರಚಾರ

ಪ್ರಚಾರಕ್ಕೆ ಪರಿಸರಕ್ಕೆ ಪೂರಕ ವಸ್ತುಗಳನ್ನು ಬಳಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಫ್ಲೆಕ್ಸ್, ಪಾಲಿಥೀನ್, ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಹೇರಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ಚುನಾವಣಾ ಆಯೋಗ ತಡೆ ಹಾಕಿದೆ. ಶಿಕ್ಷಣ ಸಂಸ್ಥೆ, ಆಸ್ಪತ್ರೆ ಆವರಣದಲ್ಲಿ ಪ್ರಚಾರ ಮಾಡುವಂತಿಲ್ಲ.

ಭದ್ರತೆ

ಕೇಂದ್ರ ಶಸಸ್ತ್ರ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದು ರಾವತ್ ಹೇಳಿದ್ದಾರೆ.

ಇನ್ನು ಚುನಾವಣಾ ಅಕ್ರಮಗಳು ಕಂಡು ಬಂದರೆ ಪರಿಶೀಲನೆಗೆ 'ಫೈಯಿಂಗ್ ಎಕ್ಸ್ ಪರ್ಟ್' ಇರಲಿದ್ದಾರೆ. ಇವರು ಜಿಪಿಎಸ್ ಹೊಂದಿದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇನ್ನು ದಾಖಲೆ ಇದ್ದ ಹಣವನ್ನು ಜಪ್ತಿ ಮಾಡುವುದಿಲ್ಲ. ದಾಖಲೆ ಇಲ್ಲದ ಹಣ ಮತ್ತು ಇತರ ವಸ್ತುಗಳನ್ನು ಮಾತ್ರ ವಶಕ್ಕೆ ಪಡೆಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಖರ್ಚಿಗೆ ಮಿತಿ

ಖರ್ಚಿಗೆ ಮಿತಿ

ಪ್ರತೀ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂಪಾಯಿಗಳನ್ನು ಚುನಾವಣೆಗೆ ಖರ್ಚು ಮಾಡಬಹುದು. ಪಕ್ಷಗಳಿಗೆ ಖರ್ಚಿಗೆ ಯಾವುದೇ ಮಿತಿ ಇಲ್ಲ.

ಇದೇ ಮೊದಲ ಬಾರಿಗೆ ಮತದಾನ ಕೇಂದ್ರಗಳ ಸುತ್ತ ಸ್ಥಾಪಿಸಲಾದ ಬೂತ್ ಗಳ ಖರ್ಚುಗಳನ್ನು ಅಭ್ಯರ್ಥಿಗಳ ಖಾತೆಗೆ ಸೇರಿಸಲಾಗುತ್ತದೆ.

ಕಳೆದ ಬಾರಿ ಅಂದರೆ 2013ರಲ್ಲಿ ಶೇಕಡಾ 71.45 ಮತದಾನ ನಡೆದಿತ್ತು. ಇದನ್ನು ಹೆಚ್ಚಿಸಲು ಒತ್ತು ನೀಡುವುದಾಗಿ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಚುನಾವಣಾ ದಿನಾಂಕಗಳು

ಕರ್ನಾಟಕದಲ್ಲಿ ಏಕ ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್ 17 - ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ ಆರಂಭ

ಏಪ್ರಿಲ್ 24 - ನಾಮಪತ್ರ ಸಲ್ಲಿಸಲು ಕೊನೆಯ ದಿನ

ಏಪ್ರಿಲ್ 25 - ನಾಮಪತ್ರಗಳ ಪರಿಶೀಲನೆ

ಏಪ್ರಿಲ್ 27 - ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಮೇ 12- ಮತದಾನ

ಮೇ 15 - ಮತ ಎಣಿಕೆ

English summary
Karnataka assembly elections 2018: Karnataka assembly election to be held on March 12 said chief election commissioner OP Rawat in New Delhi. Highlights of the elections are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X