ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಆರು ಬ್ರಾಹ್ಮಣರಲ್ಲಿ ಗೆದ್ದವರೆಷ್ಟು?

|
Google Oneindia Kannada News

ಹದಿನೈದನೇ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಜನಾದೇಶ ಹೊರಬಿದ್ದಿದೆ. ಸರಕಾರ ಯಾರು ರಚಿಸಬೇಕು ಎನ್ನುವ ಗೊಂದಲ ಮುಂದುವರಿದಿರುವ ಮಧ್ಯೆ, ರಾಜ್ಯಪಾಲರು ಬಿಜೆಪಿಗೆ ಸರಕಾರ ರಚಿಸುವಂತೆ ಆಹ್ವಾನಿಸಿದ್ದಾರೆ.

'ನುಡಿದಂತೆ ನಡೆದಿದ್ದೇವೆ..ಕೂಲಿ ಕೊಡಿ' ಎನ್ನುವ ಕಾಂಗ್ರೆಸ್ ಘೋಷಣೆ ಒಂದೆಡೆಯಾದರೆ, 'ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ' ಎನ್ನುವ ಕಮಲದ ಚುನಾವಣಾ ಧ್ಯೇಯವಾಕ್ಯ ಇನ್ನೊಂದೆಡೆ. ಇದರ ಜೊತೆಗೆ, 'ಅಭಿವೃದ್ದಿಗಾಗಿ ಅಧಿಕಾರ.. ಜನಸಾಮಾನ್ಯರ ಸರಕಾರ' ಎನ್ನುವ ಜೆಡಿಎಸ್ ಘೋಷಣೆ..

'ಕಾಂಗ್ರೆಸ್‌ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಪಕ್ಷಕ್ಕೆ ಗೆಲುವಿಲ್ಲ''ಕಾಂಗ್ರೆಸ್‌ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಪಕ್ಷಕ್ಕೆ ಗೆಲುವಿಲ್ಲ'

78ಕ್ಷೇತ್ರವನ್ನು ಗೆದ್ದು ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್, ಮತ್ತೊಂದು 'ಕಾಂಗ್ರೆಸ್ ಮುಕ್ತ್ ಭಾರತ್ ರಾಜ್ಯ'ವಾಗಬಾರದೆಂದು 38ಸ್ಥಾನ ಪಡೆದು ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದೆ.

ಕಾಂಗ್ರೆಸ್ 223 ಸ್ಥಾನಗಳಿಗೆ (ಮೇಲುಕೋಟೆ ಹೊರತು ಪಡಿಸಿ) ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ಒಕ್ಕಲಿಗ 42, ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ 45, ಅಲ್ಪಸಂಖ್ಯಾತ ಮತ್ತು ಮುಸ್ಲಿಮರಿಗೆ 20 ಸೀಟು ಸೇರಿದಂತೆ, ಆರು ಜನ ಬ್ರಾಹ್ಮಣರಿಗೂ ಟಿಕೆಟ್ ನೀಡಿತ್ತು.

ಅಯ್ಯೋ ಪಾಪ: ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!ಅಯ್ಯೋ ಪಾಪ: ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!

ಕಣದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಬ್ರಾಹ್ಮಣ ಸಮುದಾಯದ ಆರು ಜನರಲ್ಲಿ, ನಾಲ್ವರು ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಇಬ್ಬರು ಸೋಲು ಅನುಭವಿಸಿದ್ದಾರೆ. ಗೆದ್ದವರು ಮತ್ತು ಸೋತ ಇಬ್ಬರು ಅಭ್ಯರ್ಥಿಗಳು ಯಾರು? ಮುಂದೆ ಓದಿ..

ಆರ್ ವಿ ದೇಶಪಾಂಡೆ : ಉತ್ತರ ಕನ್ನಡ ಜಿಲ್ಲೆ

ಆರ್ ವಿ ದೇಶಪಾಂಡೆ : ಉತ್ತರ ಕನ್ನಡ ಜಿಲ್ಲೆ

ಅಸೆಂಬ್ಲಿ ಕ್ಷೇತ್ರ: ಹಳಿಯಾಳ
ಅಭ್ಯರ್ಥಿ : ಆರ್ ವಿ ದೇಶಪಾಂಡೆ
ಫಲಿತಾಂಶ: ಗೆಲುವು
ಒಟ್ಟು ಪಡೆದ ಮತಗಳು: 61,577
ಗೆಲುವಿನ ಅಂತರ: 5,140

ವಸಂತ್ ವೈದ್ಯ : ಬೆಳಗಾವಿ ಜಿಲ್ಲೆ

ವಸಂತ್ ವೈದ್ಯ : ಬೆಳಗಾವಿ ಜಿಲ್ಲೆ

ಅಸೆಂಬ್ಲಿ ಕ್ಷೇತ್ರ: ಸೌಂದತ್ತಿ ಯಲ್ಲಮ್ಮ
ಅಭ್ಯರ್ಥಿ : ವಿಶ್ವಾಸ್ ವಸಂತ ವೈದ್ಯ
ಫಲಿತಾಂಶ: ಸೋಲು
ಒಟ್ಟು ಪಡೆದ ಮತಗಳು: 30,018
ಸೋಲಿನ ಅಂತರ: 32,462

ಶಿವರಾಂ ಹೆಬ್ಬಾರ್ : ಉತ್ತರ ಕನ್ನಡ ಜಿಲ್ಲೆ

ಶಿವರಾಂ ಹೆಬ್ಬಾರ್ : ಉತ್ತರ ಕನ್ನಡ ಜಿಲ್ಲೆ

ಅಸೆಂಬ್ಲಿ ಕ್ಷೇತ್ರ: ಯಲ್ಲಾಪುರ
ಅಭ್ಯರ್ಥಿ : ಅರಬೈಲ್ ಹೆಬ್ಬಾರ್ ಶಿವರಾಂ
ಫಲಿತಾಂಶ: ಗೆಲುವು
ಒಟ್ಟು ಪಡೆದ ಮತಗಳು: 66,290
ಗೆಲುವಿನ ಅಂತರ: 1,483

ಪ್ರಸನ್ನ ಕುಮಾರ್ : ಶಿವಮೊಗ್ಗ

ಪ್ರಸನ್ನ ಕುಮಾರ್ : ಶಿವಮೊಗ್ಗ

ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ ನಗರ
ಅಭ್ಯರ್ಥಿ : ಕೆ ಬಿ ಪ್ರಸನ್ನ ಕುಮಾರ್
ಫಲಿತಾಂಶ: ಸೋಲು
ಒಟ್ಟು ಪಡೆದ ಮತಗಳು: 66,290
ಸೋಲಿನ ಅಂತರ: 46,107

ರಮೇಶ್ ಕುಮಾರ್ : ಕೋಲಾರ ಜಿಲ್ಲೆ

ರಮೇಶ್ ಕುಮಾರ್ : ಕೋಲಾರ ಜಿಲ್ಲೆ

ಅಸೆಂಬ್ಲಿ ಕ್ಷೇತ್ರ: ಶ್ರೀನಿವಾಸಪುರ
ಅಭ್ಯರ್ಥಿ : ಕೆ ಆರ್ ರಮೇಶ್ ಕುಮಾರ್
ಫಲಿತಾಂಶ: ಗೆಲುವು
ಒಟ್ಟು ಪಡೆದ ಮತಗಳು: 93,571
ಗೆಲುವಿನ ಅಂತರ: 10,552

ದಿನೇಶ್ ಗುಂಡೂರಾವ್ : ಬೆಂಗಳೂರು ನಗರ

ದಿನೇಶ್ ಗುಂಡೂರಾವ್ : ಬೆಂಗಳೂರು ನಗರ

ಅಸೆಂಬ್ಲಿ ಕ್ಷೇತ್ರ: ಗಾಂಧಿನಗರ (ಬೆಂಗಳೂರು)
ಅಭ್ಯರ್ಥಿ : ದಿನೇಶ್ ಗುಂಡೂರಾವ್
ಫಲಿತಾಂಶ: ಗೆಲುವು
ಒಟ್ಟು ಪಡೆದ ಮತಗಳು: 47,354
ಗೆಲುವಿನ ಅಂತರ: 10,070

English summary
Karnataka Assembly Elections 2018: Fate of Six Brahmin Congress candidates in the election. Four candidates won and two lost the election. Ramesh Kumar, Dinesh Gundurao, R V Deshpande, Shivaram Hebbar retained their seats, while KB Prasanna Kumar and Vishwas Vasant Vaidya lost the battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X