ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಆಕ್ಷೇಪಕ್ಕೆ 10 ಪ್ರಶ್ನೆಗಳ ಬಾಣ ಎಸೆದ ಬಿಜೆಪಿ

By Mahesh
|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಬಿಜೆಪಿ ಕೇಳಿದ ಆ 10 ಪ್ರಶ್ನೆಗಳು | Oneindia Kannada

ಬೆಂಗಳೂರು, ಏಪ್ರಿಲ್ 26: ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆಂದು ಕರಾವಳಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಮುಂದಿಟ್ಟಿರುವ 10 ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಆಗ್ರಹಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ರಂದು ರಾಹುಲ್ ಗಾಂಧಿ ಕರ್ನಾಟಕದ ಅಂಕೋಲದಲ್ಲಿ ಏರ್ಪಡಿಸಲಾಗಿರುವ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ 10 ಪ್ರಶ್ನೆಗಳನ್ನು ಅವರ ಮುಂದಿಡುತ್ತದೆ. ಅದಕ್ಕೆ 10 ನಿಮಿಷದಲ್ಲೇ ಉತ್ತರಿಸಬಹುದು ಎಂದರು.

ಅಂಕೋಲಾದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋಅಂಕೋಲಾದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ

ಸಂಸತ್ತಿನಲ್ಲಿ ಮಾತನಾಡಲು 15 ನಿಮಿಷ ಕೂಡಾ ಅವಕಾಶ ನೀಡಿದ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಜತೆ 15 ನಿಮಿಷಗಳ ಕಾಲ ಚರ್ಚೆ ನಡೆಸಲು ಸಿದ್ಧವೇ ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಸಮೀಕ್ಷೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಈ ರೀತಿ ಪ್ರಶ್ನೆಗಳನ್ನು ಎಸೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರೈತ ಪರ ಸರ್ಕಾರ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ. ಆದರೆ ವಸ್ತುಸ್ಥಿತಿ ಬೇರೆಯದೇ ಆಗಿದೆ. ರಾಜ್ಯದಲ್ಲಿ ಸರಿಸುಮಾರು 3,781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ ರೈತರ ಆತ್ಮಹತ್ಯೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಶುಕ್ರವಾರ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ರೈತರ ಮೇಲೆ ಲಾಠಿಚಾರ್ಜ್

ರೈತರ ಮೇಲೆ ಲಾಠಿಚಾರ್ಜ್

Siddaramaiah government lathicharged 'dakshin kannada farmers' who came to Bengaluru to protest against the government, will Rahul Gandhi apologise for the atrocities against the farmers? Is it not true that Congress has institutionalised corruption?

ತಾವು ಬೆಳೆದ ಬೆಳೆಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿತ್ತು. ಕೃಷಿಗಾಗಿ ಯಾವುದೇ ಕಾರ್ಯಕ್ರಮವನ್ನು ನೀಡಲಿಲ್ಲ. ಬದಲಾಗಿ ಖಜಾನೆಯನ್ನು ಲೂಟಿ ಹೊಡೆಯಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು

ಕೇಂದ್ರದಿಂದ ಕೊಟ್ಟ ಬರ ಪರಿಹಾರ ನಿಧಿ ಏನಾಯ್ತು?

ಕೇಂದ್ರದಿಂದ ಕೊಟ್ಟ ಬರ ಪರಿಹಾರ ನಿಧಿ ಏನಾಯ್ತು?

Is it not true that in 2017 Karnataka faced severe drought, 5456 crore was given by centre for irrigation but no money spent by Siddaramaiah where did the money vanish?

ರಾಜ್ಯದಲ್ಲಿ ಸಮರ್ಪಕ ಮಳೆಯಿಂದ ತತ್ತರಿಸಿದ್ದಾಗ, ಕಳೆದ ಬಾರಿ 160 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿತ್ತು. ಕೇಂದ್ರ ಸರ್ಕಾರ ನೀರಾವರಿ ಯೋಜನೆಗೆ 5456 ಕೋಟಿ ರೂ. ಬಿಡುಗಡೆ ಮಾಡಿತ್ತು. ಆ ಹಣ ಎಲ್ಲಿ ಹೋಗಿದೆ?

ಕೃಷ್ಣ ಜಲಾನಯನ ಪ್ರದೇಶಕ್ಕೆ ನೀಡಿದ ಹಣ ಎಲ್ಲಿ?

ಕೃಷ್ಣ ಜಲಾನಯನ ಪ್ರದೇಶಕ್ಕೆ ನೀಡಿದ ಹಣ ಎಲ್ಲಿ?

ಕೃಷ್ಣ ಜಲಾನಯನ ಪ್ರದೇಶದಲ್ಲಿ 50 ಸಾವಿರ ಕೋಟಿ ರೂ. ಖರ್ಚು ಮಾಡಿ ನೀರಾವರಿ ಯೋಜನೆಯನ್ನು ವಿಸ್ತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ ವಿನಿಯೋಗಿಸಿದ್ದು ಕೇವಲ 6996 ಕೋಟಿ ರೂ. ಇದಕ್ಕೆ ರಾಹುಲ್ ಗಾಂಧಿ ಉತ್ತರವೇನು?

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ

ದೇಶದಲ್ಲೇ ಬೆಂಗಳೂರು ಪ್ರಮುಖ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಲ್ಲಿನ ಟ್ರಾಫಿಕ್ ಸಮಸ್ಯೆ, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವುದಕ್ಕೆ ಸರ್ಕಾರದಿಂದ ಸಾಧ್ಯವಾಗಿಲ್ಲ. ಸ್ಟೀಲ್ ಬ್ರಿಡ್ಜ್ ನಿರ್ಮಾಣ ನೆಪದಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆಸಲು ಮುಂದಾಗಿದ್ದರು. ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ಮುಖ್ಯಮಂತ್ರಿ ಎಷ್ಟು ಹಣ ಕಳಿಸುತ್ತಿದ್ದಾರೆ?

You wanted to ease the traffic flow in Bengaluru, but the Hebbal Steel Flyover was done away with, because of corruption. Did you conceptualise an alternate for that? If not, then why?

ಸಕಾಲ ಯೋಜನೆ ಕೈಬಿಟ್ಟಿದ್ದೇಕೆ?

ಸಕಾಲ ಯೋಜನೆ ಕೈಬಿಟ್ಟಿದ್ದೇಕೆ?

Why was Sakala project, a grievance redressal system, done away with? Why is Mallikarjun Kharge not attending meetings of Lokpal? Isn't Congress responsible for non-appointment of Lokpal?

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ(ಸದಾನಂದ ಗೌಡ)ದ ಅವಧಿಯಲ್ಲಿ ಸಕಾಲ ಯೋಜನೆ ಜಾರಿಗೊಳಿಸಿತ್ತು. ಯೋಜನೆಯ ಪರಿಸ್ಥಿತಿ ಈಗ ಹೇಗಿದೆ ಎಂಬುದಕ್ಕೆ ಉತ್ತರ ನೀಡಬೇಕು, ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲ್ ಸಭೆಗೆ ಗೈರಾದರು ಏಕೆ? ಲೋಕಪಾಲ ನೇಮಕಾತಿಯಾಗದಿರುವುದಕ್ಕೆ ಕಾಂಗ್ರೆಸ್ ಕಾರಣವಲ್ಲವೇ?

ಬೆಂಗಳೂರಿನಲ್ಲಿ ಮೇಣದ ಬತ್ತಿ ಮೆರವಣಿಗೆ ಯಾವಾಗ?

ಬೆಂಗಳೂರಿನಲ್ಲಿ ಮೇಣದ ಬತ್ತಿ ಮೆರವಣಿಗೆ ಯಾವಾಗ?

Has Rahul Gandhi ever held a candle light march for rape victims of Karnataka? When will you hold a candle light march in Bengaluru?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 800ಕ್ಕೂ ಹೆಚ್ಚು ದಲಿತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. 750ಕ್ಕೂ ಹೆಚ್ಚು ಮಹಿಳೆಯರ ಹತ್ಯೆ, 350ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, ಈ ಬಗ್ಗೆ ಮೊದಲು ಉತ್ತರಿಸಲಿ, ನಂತರ ಮೇಣದ ಬತ್ತಿ ಮೆರವಣಿಗೆ ಮಾಡಲಿ.

ಪಿಎಫ್ ಐ ಪರ ಕಾಂಗ್ರೆಸ್ ನಿಂತಿರುವುದೇಕೆ?

ಪಿಎಫ್ ಐ ಪರ ಕಾಂಗ್ರೆಸ್ ನಿಂತಿರುವುದೇಕೆ?

Why this appeasement politics of releasing PFI workers and thereafter communal politics in the State?

ಪಿಎಫ್ಐ ಹಾಗೂ ಎಸ್ಡಿಪಿಐ ನಂತಹ ಸಂಘಟನೆಗಳಿಂದ ರಾಜ್ಯದಲ್ಲಿ ಅನೇಕ ಜನಾಂಗೀಯ ಕಲಹ ನಡೆದಿದೆ. ಇದರ ಅರಿವು ರಾಹುಲ್ ಗಾಂಧಿಗೆ ಇಲ್ಲವೇ..? ಕರ್ನಾಟಕದಲ್ಲಿ ಅತಿ ಹೆಚ್ಚು ಗಲಭೆ ನಡೆದಿದೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಕೊರತೆ

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಕೊರತೆ

Why this there a shortage of trained surgical staff in hospital? Why is there a shortage of teachers across schools and colleges in Karnataka?

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ರಾಜ್ಯ ಸಾಕಷ್ಟು ಹಿಂದುಳಿದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶುಗಳ ಮರಣ ಪ್ರಮಾಣ ಪ್ರತಿನಿತ್ಯ ನಡೆಯುತ್ತಿದೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದೆ. ರಾಜ್ಯದ 1767 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 5501 ಶಾಲೆಗಳಲ್ಲಿ ಕೇವಲ ಓರ್ವ ಶಿಕ್ಷಕ ಪಾಠ ಮಾಡುವಂತಾಗಿದೆ

ಮೂಲ ಸೌಕರ್ಯ ಕೊರತೆ

ಮೂಲ ಸೌಕರ್ಯ ಕೊರತೆ

Why is there a vast difference in the infrastructure built by congress govt and centre in Karnataka?

ಮೂಲ ಸೌಕರ್ಯ ಕೊರತೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡುವೆ ಏಕೆ ಹೆಚ್ಚು ಅಂತರವಿದೆ?

ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಾಗಿದೆ ಎಂಬ ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಮುಂದಾಗಿತ್ತು. ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇಕೆ?

ಇವಿಎಂ, ಆಧಾರ್ ಮೇಲೆ ನಂಬಿಕೆ ಇಲ್ಲ

ಇವಿಎಂ, ಆಧಾರ್ ಮೇಲೆ ನಂಬಿಕೆ ಇಲ್ಲ

You don't trust CJI, EC, EVM, Aadhar, World Bank, PMO, but do you trust Siddaramaiah government in Karnataka?

ನಿಮಗೆ ಸಿಜೆಐ, ಇವಿಎಂ, ಆಧಾರ್, ವಿಶ್ವಬ್ಯಾಂಕ್, ಪ್ರಧಾನಿ ಸಚಿವಾಲಯದ ಮೇಲೆ ನಂಬಿಕೆಯಿಲ್ಲ. ಸಿದ್ದರಾಮಯ್ಯ ಸರ್ಕಾರದ ಮೇಲಾದರೂ ನಿಮಗೆ ಪರಿಪೂರ್ಣ ನಂಬಿಕೆಯಿದೆಯೆ?

English summary
Karnataka assembly Elections 2018 : BJP's 10 Counter Questions To Rahul Gandhi. Moments before Rahul Gandhi's rallies BJP spokesperson Sambit Patra has 10 questions for the Congress President countering his 15 minutes dare to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X