Breaking; ಕೋವಿಡ್ ನಿರ್ವಹಣೆ, ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ
ಬೆಂಗಳೂರು, ಜನವರಿ 24; ಕರ್ನಾಟಕ ಸರ್ಕಾರ ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡಲು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರ 50 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.
ಸೋಮವಾರ ಈ ಕುರಿತು ಆದೇಶ ಪ್ರಕಟವಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಬಿ. ಎಸ್. ಸುಮತಿ ಆದೇಶ ಹೊರಡಿಸಿದ್ದಾರೆ. ಸಚಿವರು ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಇಷ್ಟು ದಿನ ಸ್ವಾತಂತ್ರ್ಯ ದಿನಾಚರಣೆ ಮತ್ತು ನವೆಂಬರ್ 1ರಂದು ಧ್ವಜಾರೋಹಣ ಮಾಡಲು ಮಾತ್ರ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿತ್ತು.
ದಿನಾಂಕ 9/9/2021ರಂದು ಮುಖ್ಯಮಂತ್ರಿಗಳ ಟಿಪ್ಪಣಿಯಂತೆ 10/9/2021ರಂದು ಹೊರಡಿಸಿದ್ದ ಅಧಿಸೂಚನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
ಮುಖ್ಯಮಂತ್ರಿಗಳ 24/1/2022ರ ಟಿಪ್ಪಣಿಯಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ಈ ಕೆಳಕಂಡಂತೆ ಸೂಚಿಸಿರುವ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
* ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ
* ಗೋವಿಂದ ಕಾರಜೋಳ - ಬೆಳಗಾವಿ
* ಕೆ. ಎಸ್. ಈಶ್ವರಪ್ಪ - ಚಿಕ್ಕಮಗಳೂರು
* ಬಿ. ಶ್ರೀರಾಮುಲು - ಬಳ್ಳಾರಿ
* ವಿ. ಸೋಮಣ್ಣ - ಚಾಮರಾಜನಗರ
* ಉಮೇಶ್ ವಿ. ಕತ್ತಿ - ವಿಜಯಪುರ
* ಎಸ್. ಅಂಗಾರ - ಉಡುಪಿ
* ಆರಗ ಜ್ಞಾನೇಂದ್ರ - ತುಮಕೂರು
* ಡಾ. ಸಿ. ಎನ್. ಅಶ್ವತ್ಥ ನಾರಾಯಣ - ರಾಮನಗರ
* ಸಿ. ಸಿ. ಪಾಟೀಲ್ - ಬಾಗಲಕೋಟೆ
* ಆನಂದ್ ಸಿಂಗ್ - ಕೊಪ್ಪಳ
* ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ
* ಪ್ರಭು ಚವ್ಹಾಣ - ಯಾದಗಿರಿ
* ಮುರುಗೇಶ್ ನಿರಾಣಿ - ಕಲಬುರಗಿ
* ಶಿವರಾಮ್ ಹೆಬ್ಬಾರ್ - ಹಾವೇರಿ
* ಎಸ್. ಟಿ. ಸೋಮಶೇಖರ್ - ಮೈಸೂರು
* ಬಿ. ಸಿ. ಪಾಟೀಲ್ - ಚಿತ್ರದುರ್ಗ ಮತ್ತು ಗದಗ
* ಬಿ. ಎ. ಬಸವರಾಜ - ದಾವಣಗೆರೆ
* ಡಾ. ಕೆ. ಸುಧಾಕರ್ - ಬೆಂಗಳೂರು ಗ್ರಾಮಾಂತರ
* ಕೆ. ಗೋಪಾಲಯ್ಯ - ಹಾಸನ ಮತ್ತು ಮಂಡ್ಯ
* ಶಶಿಕಲಾ ಜೊಲ್ಲೆ - ವಿಜಯನಗರ
* ಎಂಟಿಬಿ ನಾಗರಾಜ್ - ಚಿಕ್ಕಬಳ್ಳಾಪುರ
* ಕೆ. ಸಿ. ನಾರಾಯಣ ಗೌಡ - ಶಿವಮೊಗ್ಗ
* ಬಿ. ಸಿ. ನಾಗೇಶ್ - ಕೊಡಗು
* ವಿ. ಸುನೀಲ್ ಕುಮಾರ್ - ದಕ್ಷಿಣ ಕನ್ನಡ
* ಹಾಲಪ್ಪ ಆಚಾರ್ - ಧಾರವಾಡ
* ಶಂಕರ್ ಬಿ. ಮುನೇನಕೊಪ್ಪ - ರಾಯಚೂರು ಮತ್ತು ಬೀದರ್
* ಮುನಿರತ್ನ - ಕೋಲಾರ