ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ವಾರ್ನಿಂಗ್ ಗೆ ಬೆಲೆಯಿಲ್ಲ: ಮತ್ತೆ ವಾರ್ನಿಂಗ್ ನೀಡಿದ ಗವರ್ನರ್

|
Google Oneindia Kannada News

Recommended Video

Karnataka Crisis : ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ರಾಜ್ಯಪಾಲರಿಂದ ವಾರ್ನಿಂಗ್ | Oneindia Kannada

ಬೆಂಗಳೂರು, ಜುಲೈ 20: ಈ ಹಿಂದೆ ಎರಡು ಬಾರಿ ವಾರ್ನಿಂಗ್ ನೀಡಿದ ರಾಜ್ಯಪಾಲರ ಆದೇಶಕ್ಕೆ ಕ್ಯಾರೇ ಅನ್ನದ ಸಮ್ಮಿಶ್ರ ಸರಕಾರಕ್ಕೆ ವಜೂಭಾಯಿ ವಾಲಾ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಬಹುಮತವಿಲ್ಲದ ಸರಕಾರವಿದು, ಮಹತ್ವದ ಕಡತಗಳನ್ನು ವಿಲೇವಾರಿ ಮಾಡುವುದು ಮತ್ತು ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಈ ಹಿಂದೆಯೂ ರಾಜಭವನ ಕುಮಾರಸ್ವಾಮಿ ಸರಕಾರಕ್ಕೆ ಸೂಚಿಸಿತ್ತು.

ಮೊದಲು ಇವಿಎಂ, ನಂತರ ಚುನಾವಣಾ ಆಯೋಗ, ಈಗ ಸುಪ್ರೀಂಕೋರ್ಟ್: ಸುರೇಶ್ ಕುಮಾರ್ ಲೇವಡಿಮೊದಲು ಇವಿಎಂ, ನಂತರ ಚುನಾವಣಾ ಆಯೋಗ, ಈಗ ಸುಪ್ರೀಂಕೋರ್ಟ್: ಸುರೇಶ್ ಕುಮಾರ್ ಲೇವಡಿ

ಈ ಬಗ್ಗೆ, ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ರಾಜ್ಯಪಾಲರ ಕಚೇರಿ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಫೈಲ್ ಗಳನ್ನು ಕ್ಲಿಯರ್ ಮಾಡದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

Karnataka political crisis: Another letter to Chief Secetary by governor, dont ake any major decision

ವಿಶ್ವಾಸಮತಯಾಚನೆಗೆ ಎರಡು ಬಾರಿ ರಾಜ್ಯಪಾಲರು ಸಮ್ಮಿಶ್ರ ಸರಕಾರಕ್ಕೆ ಗಡುವನ್ನು ನೀಡಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿಗಳು, ಗೌರವದಿಂದ ಸಾಧ್ಯವಿಲ್ಲ ಎಂದು ರಾಜ್ಯಪಾಲರಿಗೆ ತಿರುಗೇಟು ನೀಡಿದ್ದರು.

ಸರಕಾರ ಉಳಿಯಲು ಒಂದೆಡೆ ಹೋಮ, ಇನ್ನೊಂದೆಡೆ ಕಿರಿಕ್: ಹೀಗಾದ್ರೆ ಹೇಗೆ ರೇವಣ್ಣ? ಸರಕಾರ ಉಳಿಯಲು ಒಂದೆಡೆ ಹೋಮ, ಇನ್ನೊಂದೆಡೆ ಕಿರಿಕ್: ಹೀಗಾದ್ರೆ ಹೇಗೆ ರೇವಣ್ಣ?

ರಾಜ್ಯ ರಾಜಕೀಯದ ಅಸ್ಥಿರತೆ ಮತ್ತು ದೈನಂದಿನ ಬೆಳವಣಿಗೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯಪಾಲರು ವರದಿ ನೀಡುತ್ತಿದ್ದು ಮುಖ್ಯಕಾರ್ಯದರ್ಶಿಗಳಿಗೆ (ಚೀಫ್ ಸೆಕ್ರೆಟರಿ) ಮಹತ್ವದ ಸೂಚನೆ ನೀಡಿದ್ದಾರೆಂದು ಈ ಹಿಂದೆಯೂ ವರದಿಯಾಗಿತ್ತು.

ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ, ಮೇಲ್ನೋಟಕ್ಕೆ ಈ ಸರಕಾರ ಅಲ್ಪಮತಕ್ಕೆ ಕುಸಿದಿರುವ ಸಾಧ್ಯತೆಯಿದೆ. ಹೀಗಾಗಿ, ಈ ಸಂದರ್ಭದಲ್ಲಿ ಪ್ರಮುಖ ನಿರ್ಧಾರಗಳು ಬೇಡ ಎಂದು ರಾಜ್ಯಪಾಲರು ಸೂಚಿಸಿದ್ದರು. ಆದಾಗ್ಯೂ, ಸಚಿವ ಸಂಪುಟ ಸಭೆ ನಡೆದಿತ್ತು.

English summary
Karnataka political crisis: Another letter to Chief Secretary Vijay Bhaskar by governor Vajubhai Vala. Don't take any major decision
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X