ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 49 ಬರ ಪೀಡಿತ ತಾಲೂಕುಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಒಂದು ಕಡೆ ಮಳೆ ಮತ್ತೊಂದು ಕಡೆ ಬರ. ಹೌದು ಈ ವರ್ಷ ಮುಂಗಾರು ಋತುವಿನಲ್ಲಿ ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆಯಾಗಿದೆ. ಜೊತೆಗೆ ಬರವೂ ಸಹ ಹಲವು ತಾಲೂಕುಗಳಲ್ಲಿ ಇದೆ.

ಕರ್ನಾಟಕ ಸರ್ಕಾರ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ 22 ಜಿಲ್ಲೆಗಳಲ್ಲಿ ಅಪಾರವಾದ ನಷ್ಟವಾಗಿದೆ. ಆದರೂ ಸಹ 49 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ.

ಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ

Karnataka Announced 49 Taluk As Drought Hit

18 ಜಿಲ್ಲೆಯ 49 ತಾಲೂಕುಗಳು ಬರಪೀಡಿತ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಆಗಸ್ಟ್ 30ರ ತನಕ ರಾಜ್ಯದಲ್ಲಿ ಸುರಿದ ಮಳೆಯನ್ನು ಆಧರಿಸಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಮಾಡಲಾಗಿದೆ.

ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ

ಬರಪೀಡಿತ ತಾಲೂಕುಗಳು

* ಬೆಂಗಳೂರು ನಗರ : ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ
* ಬೆಂಗಳೂರು ಗ್ರಾಮಾಂತರ : ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
* ರಾಮನಗರ : ಕನಕಪುರ, ರಾಮನಗರ
* ಕೋಲಾರ : ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
* ಚಿಕ್ಕಬಳ್ಳಾಪುರ : ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
* ತುಮಕೂರು : ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
* ಚಿತ್ರದುರ್ಗ : ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
* ದಾವಣಗೆರೆ : ಜಗಳೂರು
* ಚಾಮರಾಜನಗರ : ಕೊಳ್ಳೇಗಾಲ
* ಬಳ್ಳಾರಿ : ಹೊಸಪೇಟೆ, ಸಂಡೂರು, ಸಿರಗುಪ್ಪ
* ಕೊಪ್ಪಳ : ಗಂಗಾವತಿ, ಮಾನ್ವಿ, ರಾಯಚೂರು, ಸಿಂಧನೂರು
* ಕಲಬುರಗಿ : ಚಿಂಚೋಳಿ, ಜೇವರ್ಗಿ, ಸೇಡಂ
* ಯಾದಗಿರಿ : ಯಾದಗಿರಿ
* ಬೆಳಗಾವಿ : ಅಥಣಿ
* ಬಾಗಲಕೋಟೆ : ಬಾದಾಮಿ, ಬೀಳಗಿ, ಜಮಖಂಡಿ
* ವಿಜಯಪುರ : ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
* ಗದಗ : ನರಗುಂದ

English summary
Karnataka government announced 49 taluk of state as drought. 22 district of state effected by rain and flood in the month of August 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X