ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೀಕರಿಸಬಲ್ಲ ಶಕ್ತಿ ಬಳಕೆಗೆ ಕರ್ನಾಟಕ ಬದ್ಧ

|
Google Oneindia Kannada News

ಬೆಂಗಳೂರು, ಸೆ. 10 : ನವೀಕರಿಸಬಲ್ಲ ಶಕ್ತಿ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಪರ್ಯಾಯ ಶಕ್ತಿ ಬಳಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಇಂಧನ ಮರುಬಳಕೆ ಕುರಿತು ತಯಾರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ, 'ಶಕ್ತಿ ಎಲ್ಲರಗೂ' ಎಂಬ ತತ್ವದಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು. ಕೇಂದ್ರ ಇಂಧನ ಸಚಿವ ಪಿಯುಷ್‌ ಗೋಯಲ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.(ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ : ಡಿಕೆಶಿ)

dkshi

ಡಿ.ಕೆ.ಶಿವಕುಮಾರ್‌ ಭಾಷಣದ ಹೈಲೈಟ್ಸ್‌
* ಮುಂದಿನ ಮೂರು ವರ್ಷದಲ್ಲಿ ಈಗ ಉತ್ಪಾದನೆಯಾಗುತ್ತಿರುವ 14,301 ಮೆಗಾ ವ್ಯಾಟ್‌ ವಿದ್ಯುತ್‌ಗೆ ಹೆಚ್ಚುವರಿ 3,100 ಮೆಗಾ ವ್ಯಾಟ್‌ ವಿದ್ಯುತ್‌ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
* ಕೂಡಗಿ ವಿದ್ಯುತ್‌ ಸ್ಥಾವರದಿಂದ ಎರಡು ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ.
* ಗುಲ್ಬರ್ಗದಲ್ಲಿ ಕಿರು ಜಲವಿದ್ಯುತ್‌ ಸ್ಥಾವರ ಸ್ಥಾಪನೆ ಮಾಡುವ ಚಿಂತನೆಯಿದ್ದು 1,320 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ.
* ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲು ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
* ಆದರೆ, ಕಲ್ಲಿದ್ದಲು ಬಳಕೆ ಮಾಡದೆ ಶಕ್ತಿ ಉತ್ಪಾದಿಸುವ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ.
* ಪರ್ಯಾಯ ಶಕ್ತಿ ಮೂಲಗಳಿಂದ ಸದ್ಯ 4,000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.
* ಪವನ ವಿದ್ಯುತ್‌, ಸೋಲಾರ್‌, ಬಯೋ ಪವರ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
* 2021ರೊಳಗೆ ಸೋಲಾರ್‌ನಿಂದಲೇ ಎರಡು ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಪಡೆಯುವ ಗುರಿ ಹೊಂದಲಾಗಿದೆ.
* ರೈತರ ಅನುಕೂಲಕ್ಕೆ ಸೋಲಾರ್‌ ಬಳಕೆ ಮಾಡಲು ತಿಳಿಸಲಾಗಿದ್ದು 'ಸೂರ್ಯ ರೈತ' ಯೋಜನೆಯಡಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ಅಳವಡಿಕೆ ಮಾಡಲಾಗುವುದು.
* ಎಸ್‌ಸಿ, ಎಸ್‌ಟಿ ವರ್ಗದವರಿಗೆ ಸೋಲಾರ್‌ ಪಂಪ್‌ ನೀಡುವ ಚಿಂತನೆ ಮಾಡಲಾಗಿದ್ದು ಕೇಂದ್ರ ಸರ್ಕಾರ ಇದಕ್ಕೆ ಅಗತ್ಯ ಅನುದಾನ ನೀಡಬೇಕು.
* ಬೆಂಗಳೂರು ಮಹಾನಗರದ ಸಮರ್ಪಕ ವಿದ್ಯುತ್‌ ಪೂರೈಕೆ ಮತ್ತು ಲೈನ್‌ ದುರಸ್ತಯಿಗೆ 1,500 ಕೋಟಿ ರೂ. ಮೀಸಲಿಡಲಾಗಿದೆ.
* ರಾಜ್ಯದ ಎಲ್ಲಾ ವಿದ್ಯುತ್ ಮಾರ್ಗಗಳ ದುರಸ್ತಿಗೆ ಕೆಪಿಟಿಸಿಎಲ್‌ ಕ್ರಮ ತೆಗೆದುಕೊಳ್ಳಲಿದೆ. ಇನ್ನೂ ಸಾವಿರ ಕಿಮೀ ವ್ಯಾಪ್ತಿಯ ಹೊಸ ಮಾರ್ಗ ಎಳೆಯಲು ಚಿಂತನೆ ನಡೆಸಲಾಗಿದೆ.
* ಅಗತ್ಯವಿರುವಕಡೆ ಗ್ರಿಡ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು 77.46 ಕೋಟಿ ರೂ. ಅಗತ್ಯವಿದೆ.
* ರಾಜೀವ್‌ಗಾಂಧಿ ವಿದ್ಯುದ್ದೀಕರಣ ಯೋಜನೆ ಪ್ರಗತಿಯಲ್ಲಿದ್ದು ಮುಂದಿನ ವರ್ಷದೊಳಗೆ ಎಲ್ಲ ಫಲಾನುಭವಿಗಳಿಗೆ ಸೌಲಭ್ಯ ಕಲಪಿಸಲಾಗುವುದು.
* ಸ್ಮಾರ್ಟ್‌ ಗ್ರಿಡ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ದೇಶದಲ್ಲಿ ಇದು ಮೊದಲ ಸಾಧನೆಯಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

English summary
The speed of execution of power transmission network is likely to be thwarted by issues like acquisition of ‘right of way’, environmental clearances and compensation for crop loss, said DK Shivakumar, Karnataka Energy Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X