ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ

|
Google Oneindia Kannada News

ಬೆಂಗಳೂರು, ಮಾ.4 : ಕರ್ನಾಟಕ ಸರ್ಕಾರ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡಗಳು ಮತ್ತು ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಲು ಅಧಿಸೂಚನೆ ಹೊರಡಿಸಲಿದೆ. ಮಾರ್ಚ್ 23ರಿಂದ ಒಂದು ವರ್ಷಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ­ಯಲ್ಲಿನ ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನ ಮತ್ತು ನಿಯಮ ಉಲ್ಲಂಘಿಸಿ, ನಿರ್ಮಿಸಿದ ಕಟ್ಟಡಗಳ ಸಕ್ರಮಕ್ಕೆ ಅವಕಾಶವಿದೆ. [ಅಕ್ರಮ-ಸಕ್ರಮಕ್ಕೆ ಮಾ.23ರ ನಂತರ ಅರ್ಜಿ ಸಲ್ಲಿಸಿ]

ಯಾವುದು ಒಳಪಡುತ್ತದೆ : 2013ರ ಅಕ್ಟೋಬರ್‌ 19ಕ್ಕೂ ಮೊದಲು ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ಮತ್ತು ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನದ ಸಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಕ್ರಮಗೊಳಿಸಿಕೊಳ್ಳಲು 2013ರ ಅಕ್ಟೋಬರ್‌ 19ರಂದು ಇದ್ದ ಮಾರ್ಗ­ಸೂಚಿ ದರದ ಆಧಾರದ ಮೇಲೆಯೇ ದಂಡ ಪಾವತಿ ಮಾಡಬೇಕು. [ಅಕ್ರಮ-ಸಕ್ರಮ ವಿಧೇಯಕ, ರಾಜ್ಯಪಾಲರ ಒಪ್ಪಿಗೆ]

akrama sakrama

ಸ್ವಯಂ ಘೋಷಣೆ ಮಾಡಿಕೊಳ್ಳಬೇಕು : ಅರ್ಜಿ ಸಲ್ಲಿಸುವಾಗ ಎಷ್ಟು ನಿವೇಶನ ಮತ್ತು ಕಟ್ಟಡ ನಿರ್ಮಾಣ ಉಲ್ಲಂಘನೆ ಮಾಡಲಾಗಿದೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಎಷ್ಟು ದೊಡ್ಡ ನಿವೇಶನವಿದ್ದರೂ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಆಡಳಿತ ಅರ್ಜಿ ಪರಿಶೀಲಿಸಿ ದಂಡದ ಮೊತ್ತ ನಿರ್ಧರಿಸಲಿದೆ.

ಎಷ್ಟು ಸಕ್ರಮವಾಗಲಿದೆ : ಸರ್ಕಾರ ವಸತಿ ಉದ್ದೇಶದ ಆಸ್ತಿಗಳಲ್ಲಿನ ಶೇ 50, ವಾಣಿಜ್ಯ ಉದ್ದೇಶದ ಆಸ್ತಿಯಲ್ಲಿನ ಶೇ 25ರಷ್ಟು ಉಲ್ಲಂಘನೆಯನ್ನು ಮಾತ್ರ ಸಕ್ರಮ ಮಾಡಲಿದೆ. ಉಳಿದಂತೆ ಹೆಚ್ಚು ಉಲ್ಲಂಘನೆ ಮಾಡಿದ್ದರೆ, ಕಠಿಣ ಕ್ರಮ ಎದುರಿಸುವುದು ಅನಿವಾರ್ಯ.

ಯಾವುದು ಸಕ್ರಮವಾಗುತ್ತದೆ : ಅನಧಿಕೃತ ಬಡಾವಣೆಗಳಲ್ಲಿ ನಿವೇಶನ, ಭೂ ಉಪಯೋಗಗಳ ಉಲ್ಲಂಘನೆ, ಕಟ್ಟಡದ ಸುತ್ತ ನಿರ್ದಿಷ್ಟ ಜಾಗ ಬಿಡದಿರುವುದು, ನೆಲ ವಿಸ್ತೀರ್ಣ ಪ್ರಮಾಣ ಉಲ್ಲಂಘನೆ ಪ್ರಕರಣಗಳು ಸಕ್ರಮವಾಗಲಿವೆ.

ಇವು ಸಕ್ರಮವಾಗೋಲ್ಲ : ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ, ಉದ್ಯಾನವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ, ನೆಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಸಕ್ರಮ ಮಾಡಲು ಅವಕಾಶವಿಲ್ಲ.

ದಂಡ ಎಷ್ಟು ಕಟ್ಟಬೇಕು : ಚದರ ಮೀಟರ್‌ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳು ದಂಡ ಶುಲ್ಕವನ್ನು ನಿಗದಿ ಮಾಡುತ್ತವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ದಂಡ ಶುಲ್ಕವಿದ್ದು, ಉಳಿದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ಪ್ರತ್ಯೇಕ ದಂಡ ಶುಲ್ಕವಿರಲಿದೆ.

ಸಕ್ರಮಕ್ಕೆ ದಂಡ ಶುಲ್ಕ
ಚದರ ಮೀಟರ್ ಬಿಬಿಎಂಪಿ ಮಹಾನಗರ ಪಾಲಿಕೆ ಪಟ್ಟಣ ಪ್ರದೇಶ
60 40 ರೂ.
30 ರೂ.
20 ರೂ.
60-120 160 ರೂ.
80 ರೂ.
50 ರೂ.
120 ಕ್ಕಿಂತ ಅಧಿಕವಿದ್ದರೆ 600 ರೂ.
250 ರೂ.
150 ರೂ.

ಅರ್ಜಿ ಎಲ್ಲಿ ಸಿಗುತ್ತದೆ : ಅಕ್ರಮ ಸಕ್ರಮಕ್ಕೆ ಸಲ್ಲಿಸುವ ಅರ್ಜಿಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯ. ಆನ್‌ಲೈನ್ ಮೂಲಕವೂ ಅರ್ಜಿಗಳನ್ನು ಪಡೆಯಬಹುದಾಗಿದೆ. ನಗರಾಭಿವೃದ್ಧಿ ಇಲಾಖೆ ವೆಬ್‌ಸೈಟ್‌ನಲ್ಲೂ ಅರ್ಜಿ ಲಭ್ಯವಿದೆ. [ವೆಬ್ ಸೈಟ್ ವಿಳಾಸ]

English summary
Karnataka : Akrama-Sakrama scheme for regularization of unauthorized constructions in urban areas will implemented from March 23 for a period of one year, Here is a details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X