ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕವೇ ನಂ.1

ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯಲ್ಲಿ ದೇಶದದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸಿರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಂಡಿದೆ.ನವೆಂಬರ್ 4 ರಂದು ಸ್ಟೇಟ್ಸ್ ಆಫ್ ಸ್ಟೇಟ್ಸ್‘ ಪ್ರಶಸ್ತಿಯನ್ನ ಕರ್ನಾಟಕ ಪಡೆದುಕೊಳ್ಳಲಿದೆ.

By Ramesh
|
Google Oneindia Kannada News

ಬೆಂಗಳೂರು, ಅಕ್ಟೋಬರ್. 29 : ಕರ್ನಾಟಕಕ್ಕೆ ಇನ್ನೊಂದು ಗರಿ ಲಭಿಸಿದೆ. ದೇಶದ ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಂಡಿಯಾ ಟುಡೆ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ.

ಇದರಲ್ಲಿ ಹೂಡಿಕೆಗೆ ಅಗತ್ಯವಾದ ವಾತಾವರಣ, ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಇ - ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡು ಇಂಡಿಯಾ ಟುಡೆ ಮ್ಯಾಗಜಿನ್ ಈ ಸಮೀಕ್ಷೆ ನಡೆಸಿದೆ.

Karnataka Adjudged as the most Improved big state in Economy

ಈ ಸಮೀಕ್ಷೆ ಪ್ರಕಾರ, ದೇಶದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸಿರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಒಂದು ವರ್ಷದ ಪ್ರಗತಿದಾಯಕ ಕಾರ್ಯಕ್ರಮಗಳನ್ನ ಅವಲೋಕಿಸಿ, ಜನಮತದೊಂದಿಗೆ ಈ ಆಯ್ಕೆ ಮಾಡಲಾಗಿದೆ.

ನವೆಂಬರ್ 4 ರಂದು ಸ್ಟೇಟ್ಸ್ ಆಫ್ ಸ್ಟೇಟ್ಸ್' ಪ್ರಶಸ್ತಿಯನ್ನ ಕರ್ನಾಟಕಕ್ಕೆ ನೀಡಲಾಗುವುದು. ಪ್ರಶಸ್ತಿಯನ್ನ ಸ್ವೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದು ಇಂಡಿಯಾ ಟುಡೆ ಸಂಪಾದಕೀಯ ವಿಭಾಗದ ನಿರ್ದೇಶಕ ರಾಜ್ ಚೆಂಗಪ್ಪ ತಿಳಿಸಿದ್ದಾರೆ.

English summary
Karnatak's outstanding performance on improving the business, environment and the quality of life of the people wins laurels the state excels in agriculture, economy, education,heathcare,inclusive,development, interepreneurship and environment among the big states in India,say India today magazine surevy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X