ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka 7th Pay Commission; ಪೊಲೀಸರ ನಿರೀಕ್ಷೆಗಳು

ಕರ್ನಾಟಕ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿದೆ. ಕರ್ನಾಟಕದ ಪೊಲೀಸರು ಆಯೋಗ ಪರಿಗಣನೆ ಮಾಡಿಬೇಕಾಗಿರುವ ಅಂಶಗಳ ಕುರಿತು ಮನವಿ ಸಲ್ಲಿಕೆ ಮಾಡಲಾಗಿದೆ.

|
Google Oneindia Kannada News

ಬೆಂಗಳೂರು, ಜನವರಿ 27; ಕರ್ನಾಟಕ ಸರ್ಕಾರ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆ ಮಾಡಿದೆ. ಆಯೋಗ ಈಗಾಗಲೇ ತನ್ನ ಕಾರ್ಯವನ್ನು ಆರಂಭಿಸಿದೆ.

ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಮನವಿಯನ್ನು ವೇತನ ಆಯೋಗಕ್ಕೆ ಸಲ್ಲಿಕೆ ಮಾಡುತ್ತಿವೆ. ಆಯೋಗ ಸಹ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಪ್ರತಿಕ್ರಿಯೆ ನೀಡುವಂತೆ ಕೋರಿದೆ.

7th Pay Commission; ವೇತನ ಶ್ರೇಣಿ, ತುಟ್ಟಿ ಭತ್ಯೆಯ ವಿವರಗಳು7th Pay Commission; ವೇತನ ಶ್ರೇಣಿ, ತುಟ್ಟಿ ಭತ್ಯೆಯ ವಿವರಗಳು

ಕರ್ನಾಟಕದ ಪೊಲೀಸರ ಪರವಾಗಿ 7ನೇ ವೇತನ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಆದ್ಯತೆ ನೀಡಲು ಮನವಿ ಎಂದು ಪತ್ರವೊಂದು ಸಲ್ಲಿಕೆಯಾಗಿದೆ.

7th Pay Commission; ಭತ್ಯೆ, ನಿವೃತ್ತಿ ವಯಸ್ಸು, ಪಿಂಚಣಿ ಪರಿಶೀಲನೆ 7th Pay Commission; ಭತ್ಯೆ, ನಿವೃತ್ತಿ ವಯಸ್ಸು, ಪಿಂಚಣಿ ಪರಿಶೀಲನೆ

Karnataka 7th Pay Commission Exceptions From Karnataka Police

(ನಟರಾಜ್ ಜೆ. ಹೆಚ್. ಆರ್‌. ಹೆಚ್‌ಸಿ-328) ಡಿ. ಸಿ. ಆರ್‌. ಬಿ. ಘಟಕ ಜಿಲ್ಲಾ ಪೊಲೀಸ್ ಕಚೇರಿ, ದಾವಣಗೆರೆ ಈ ಪತ್ರವನ್ನು ಬರೆದಿದ್ದಾರೆ.

Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು

ಪತ್ರದಲ್ಲಿ ಏನಿದೆ?; ಈ ಮೂಲಕ ಮಾನ್ಯರಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರತೀ ನಿತ್ಯ ಕನಿಷ್ಠ 18-20 ಗಂಟೆಗಳ ಕಾಲ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಸಂಖ್ಯೆ ಶೇ 80 ಕ್ಕೂ ಅಧಿಕವಿರುತ್ತದೆ.

ಪೊಲೀಸ್ ಠಾಣೆಗಳಲ್ಲಿ, ಸಂಚಾರ ನಿಯಂತ್ರಣ ಕರ್ತವ್ಯದಲ್ಲಿ, ಸಶಸ್ತ್ರ ಮೀಸಲು ಪಡೆಗಳಲ್ಲಿ, ಕಛೇರಿಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್‌, ಎಎಸ್‌ಐ, ಪಿಎಸ್‌ಐ, ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ವರೆಗಿನ ಅಧಿಕಾರಿಗಳು ಪ್ರತೀ ನಿತ್ಯ ಒಂದಿಲ್ಲ ಒಂದು ಕಷ್ಟದ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ.

2016ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮುಷ್ಕರ ನಡೆಸಲು ಮುಂದಾದಾಗ ಸರ್ಕಾರ ಪೊಲೀಸರ ವೇತನ ಹೆಚ್ಚಿಸುವುದಾಗಿ ಹೇಳಿ ಸನ್ಮಾನ್ಯ ಔರಾದ್ಕಾರ್ ಐಪಿಎಸ್ ಅಧಿಕಾರಿಯ ನೇತೃತ್ವಲ್ಲಿ ಒಂದು ಸಮಿತಿ ನೇಮಕ ಮಾಡಿತ್ತು. ಅವರು ನೀಡುವ ವರದಿಯನ್ನಾಧರಿಸಿ ಪೊಲೀಸರಿಗೆ ಸೌಲಭ್ಯವನ್ನು ನೀಡುತ್ತೇವೆ ಇದರಿಂದ ಪೊಲೀಸರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಣೆ ಮಾಡುತ್ತೇವೆಂದು ಹೇಳಿತ್ತು.

ಆದರೆ ರಚಿಸಿದ್ದ ಸಮಿತಿಯಿಂದ ವರದಿ ಪಡೆದ ಸರ್ಕಾರ ಕೇವಲ ಹೊಸದಾಗಿ ಇಲಾಖೆಗೆ ಸೇರುವ ಪೊಲೀಸ್ ಕಾನ್ಸ್‌ಟೇಬಲ್‌ಗಳ ಮೂಲ ವೇತನ ಹೆಚ್ಚಿಸಿದ್ದು ಬಿಟ್ಟರೆ ಇಲಾಖೆಯ ಬೇರೆ ಸ್ತರಗಳ ಅಧಿಕಾರಿಗಳಿಗೆ ಇದರಿಂದ ಒಂದು ರೂಪಾಯಿಯಷ್ಟು ಆರ್ಥಿಕ ಸೌಲಭ್ಯವನ್ನೂ ನೀಡಲಿಲ್ಲ.

Karnataka 7th Pay Commission Exceptions From Karnataka Police

2016 ನೇ ಸಾಲಿನಲ್ಲಿ ಸರ್ಕಾರವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ಭತ್ಯೆಗಳನ್ನು ಹೆಚ್ಚಿಸಿ ಆದೇಶ ಮಾಡಿರುತ್ತದೆ. ಅವುಗಳು ಇಲ್ಲಿಯವರೆಗೆ ಪರಿಷ್ಕರಣೆ ಆಗಿರುವುದಿಲ್ಲ.

* UNIFM-MNTS-ALLW-500. ಪ್ರಸ್ತುತ ಇರುವುದು 500, ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 2000.

* MED-200. ಪ್ರಸ್ತುತ ಇರುವುದು 200, ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 1000 ರೂ.

* RTIONALLOW-400. ಪ್ರಸ್ತುತ ಇರುವುದು 400. ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 3000 ರೂ.

* HARDSHIPPALLOW-2000. ಪ್ರಸ್ತುತ ಇರುವುದು 2000, ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 5000.

* CONVEYANCEALLOW-600. ಪ್ರಸ್ತುತ ಇರುವುದು 600. ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 2000 ರೂ.

* SPL KIT-40. ಪ್ರಸ್ತುತ ಇರುವುದು 40, ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 500 ರೂ.

* TOTAL 3740, ಮನವಿ ಪುರಸ್ಕರಿಸಿ ಹೆಚ್ಚಿಸಬೇಕಾಗಿರುವುದು 13,500ರೂ.

ಮಾನ್ಯರು ಈ ಮೇಲ್ಕಂಡಂತೆ ಭತ್ಯಗಳನ್ನು ಹೆಚ್ಚಿಸಿ ಹಗಲಿರುಳೆನ್ನದೇ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸರ ಜೀವನ ಮಟ್ಟವನ್ನು ಸುಧಾರಣೆ ಮಾಡಲು ಈ ಮೂಲಕ ಮಾನ್ಯರಲ್ಲಿ ಮನವಿಯನ್ನು ನಿವೇದಿಸಿಕೊಂಡಿರುತ್ತೇನೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಜೆಟ್‌ನಲ್ಲಿ ಅನುದಾನ ನೀಡಿ; ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲು ಇಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿದೆ.

ಫೆಬ್ರವರಿ 17ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದ ಬಜೆಟ್‌ ಮೇಲೆ ನಿರೀಕ್ಷೆ ಅತಿಯಾಗಿದೆ.

English summary
Government of Karnataka has constituted the 7th State Pay Commission to consider revision of pay scales of State Government employees. Here is the exceptions from Karnataka police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X