ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

58ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕಲಿಗಳು ಇವರೇ!

By Srinath
|
Google Oneindia Kannada News

Karnataka 58 Achievers get 58th Kannada Rajyotsava Awards
ಬೆಂಗಳೂರು, ಅ.31: 58 ನೆಯ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರ ಅರ್ಹ 58 ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕರಿಸಿದೆ. ಈ ಬಾರಿಯ ಪ್ರಶಸ್ತಿಗಳು ಸಮ ತೂಕದ ಮತ್ತು ವಿವಾದರಹಿತದ್ದಾಗಿದೆ ಎನ್ನಬಹುದಾಗಿದೆ.

ಈ ಶ್ರೇಯಸ್ಸು ಹಿರಿಯರಾದ ಡಾ. ಯು ಆರ್ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಕಾಲಕ್ಕೆ ಆಯ್ಕೆ ಸಮಿತಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಹಾಗೆಯೇ ಈ ಸಂಖ್ಯೆ 58ಕ್ಕೇ ಸೀಮಿತವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಕೊನೆಯ ಘಳಿಗೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಸಾಧಕರನ್ನು ಗುರುತಿಸುವ ತುರ್ತು ಪರಿಸ್ಥಿತಿ ತಲೆ'ದೂರುವುದು' ಬೇಡ.

ಇನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ಅಭಿನಂದಿಸುತ್ತಾ... ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:

ಸಾಹಿತ್ಯ
ಕೋ. ಚನ್ನಬಸಪ್ಪ - ದಾವಣಗೆರೆ
ಪ್ರೊ. ಚಂದ್ರಕಾಂತ ಕುಸನೂರು - ಗುಲ್ಬರ್ಗಾ
ಡಾ. ಮಲ್ಲಿಕಾ ಘಂಟಿ - ಬಾಗಲಕೋಟೆ
ಪ್ರೊ. ಕೆ.ಬಿ. ಸಿದ್ದಯ್ಯ- ತುಮಕೂರು
ಡಾ. ಶ್ರೀಕಂಠ ಕೂಡಿಗೆ - ಶಿವಮೊಗ್ಗ

ರಂಗಭೂಮಿ

ಗಜಾನನ ಹರಿ ಮಹಾಲೆ - ಧಾರವಾಡ
ಎಚ್.ವಿ. ವೆಂಕಟಸುಬ್ಬಯ್ಯ - ಬೆಂಗಳೂರು
ನ. ರತ್ನ - ಮೈಸೂರು
ಫ್ಲೊರಿನಾ ಬಾಯಿ - ಗದಗ
ಶಶಿಧರ ಅಡಪ- ದಕ್ಷಿಣ ಕನ್ನಡ

ಸಂಗೀತ
ಸೋಹನ್ ಕುಮಾರಿ - ಬೆಂಗಳೂರು
ಫಯಾಜ್ ಖಾನ್ - ಧಾರವಾಡ
ಬಸವರಾಜ ತಿರುಕಪ್ಪ ಭಜಂತ್ರಿ - ಹಾವೇರಿ
ಹನುಮಂತರಾವ ಗೊನವಾರ - ರಾಯಚೂರು

ನೃತ್ಯ
ಎಂ. ಶಕುಂತಲಾ ಹನುಮಂತಪ್ಪ - ಚಿಕ್ಕಮಗಳೂರು

ಜಾನಪದ
ಡಾ. ಶಾಂತಿನಾಯಕ - ಉತ್ತರ ಕನ್ನಡ
ಎಲಿಸವ್ವ ಮಾದರ - ದಾವಣಗೆರೆ
ಬನ್ನೂರು ಕೆಂಪಮ್ಮ - ಮೈಸೂರು
ಮಹದೇವಪ್ಪ ಬೋನಪ್ಪ ಬಡಿಗೇರ - ಬಾಗಲಕೋಟೆ
ಶರಣಪ್ಪ ವಡಗೇರಿ - ಕೊಪ್ಪಳ

ಯಕ್ಷಗಾನ ಬಯಲಾಟ
ಡಾ. ಕೆ.ಎಂ. ರಾಘವ ನಂಬಿಯಾರ್ - ಉಡುಪಿ
ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ - ಕಾಸರಗೋಡು
ನಾಯಪ್ಪ ಸಂಗಪ್ಪ ಕುಂಬಾರ - ಬಾಗಲಕೋಟೆ
ಲಕ್ಷ್ಮೀಬಾಯಿ ಸಾಲಹಳ್ಳಿ - ಬೆಳಗಾವಿ

ಸಮಾಜಸೇವೆ
ಸೂಲಗಿತ್ತಿ ನರಸಮ್ಮ - ತುಮಕೂರು
ಕೊಂಡಜ್ಜಿ ಬಿ. ಷಣ್ಮುಕಪ್ಪ - ದಾವಣಗೆರೆ
ಮೈನಾ ಗೋಪಾಲಕೃಷ್ಣ - ಮೈಸೂರು
ಟಿ. ರಾಜಾ - ಬೆಂಗಳೂರು
ಬಸವಲಿಂಗಪ್ಪ ಎಸ್. ಜಮಖಂಡಿ - ಬಾಗಲಕೋಟೆ

ಹೊರನಾಡು ಕನ್ನಡಿಗ
ಡಾ. ಆರತಿ ಕೃಷ್ಣ- ಅಮೆರಿಕ

ಸಂಕೀರ್ಣ
ಹರೇಕಳ ಹಾಜಬ್ಬ - ದಕ್ಷಿಣ ಕನ್ನಡ
ಈಶ್ವರಚಂದ್ರ ಚಿಂತಾಮಣಿ - ಬಿಜಾಪುರ
ಶಿವಯ್ಯ ಹಿರೇಮಠ - ಯಾದಗಿರಿ

ಸಂಘ ಸಂಸ್ಥೆ
ಶಾಹೀನ್ ಶಿಕ್ಷಣ ಸಂಸ್ಥೆ - ಬೀದರ್
ಬಿ.ಬಿ. ಬಣ್ಣದ ಜಾನಪದ ಕಲಾಮೇಳ - ಗದಗ

ವಿಜ್ಞಾನ ತಂತ್ರಜ್ಞಾನ
ಡಾ. ಕೆ.ಪಿ. ರಾವ್ - ಉಡುಪಿ
ಡಾ.ಎಸ್. ಅಯ್ಯಪ್ಪನ್ - ಚಾಮರಾಜನಗರ

ಕೃಷಿ-ಪರಿಸರ
ಕೆ. ನಾರಾಯಣಸ್ವಾಮಿ - ಚಿಕ್ಕಬಳ್ಳಾಪುರ
ಡಾ.ಎಂ.ಡಿ. ಸುಭಾಷ್ ಚಂದ್ರ - ಉತ್ತರ ಕನ್ನಡ
ಅನಸೂಯಮ್ಮ - ರಾಮನಗರ
ವಸಂತಕುಮಾರ್ ತಿಮಕಾಪುರ - ಮೈಸೂರು

ಕ್ರೀಡೆ
ಡಾ.ಸಿ.ಎಂ. ಮುತ್ತಯ್ಯ - ಕೊಡಗು
ಜಿ.ಎಚ್. ತುಳಸೀಧರ - ಬಳ್ಳಾರಿ
ಸದಾಶಿವ ಸಾಲಿಯಾನ - ದಕ್ಷಿಣ ಕನ್ನಡ

ಲಲಿತಕಲೆ
ಶೀಲಾಗೌಡ - ಬೆಂಗಳೂರು
ಅಲ್ಲೀಸಾಬ ಸೈ ನದಾಫ - ಬಾಗಲಕೋಟೆ
ಟಿ.ಎಂ. ಮಾಯಾಚಾರ್ - ಮಂಡ್ಯ
ವಿಜಯ ಹಾಗರಗುಂಡಗಿ - ಗುಲ್ಬರ್ಗಾ

ವೈದ್ಯಕೀಯ
ಡಾ.ವಿ. ಲಕ್ಷ್ಮೀನಾರಾಯಣ - ಕೋಲಾರ

ಚಲನಚಿತ್ರ
ಸುಂದರನಾಥ ಸುವರ್ಣ - ದಕ್ಷಿಣ ಕನ್ನಡ
ಆರ್. ರತ್ನ - ಬೆಂಗಳೂರು
ಲೋಕನಾಥ್ - ಬೆಂಗಳೂರು ಗ್ರಾಮಾಂತರ
ಗಿರಿಜಾ ಲೋಕೇಶ್ - ಬೆಂಗಳೂರು

ಮಾಧ್ಯಮ
ಗುಡಿಹಳ್ಳಿ ನಾಗರಾಜ - ಚಿತ್ರದುರ್ಗ
ಸಿ.ಜಿ. ಮಂಜುಳಾ - ಬೆಂಗಳೂರು
ಆರ್.ಪಿ. ವೆಂಕಟೇಶಮೂರ್ತಿ- ಹಾಸನ
ಪಿ. ಮಹಮದ್ - ಬೆಂಗಳೂರು
ಎಸ್.ಆರ್. ವೆಂಕಟೇಶ್ ಪ್ರಸಾದ್ - ಕೋಲಾರ

English summary
Karnataka 58 Achievers get 58th Kannada Rajyotsava Awards. The the second highest civilian award (the Rajyotsava Award) will be given to these eminent personalities on November 1st. The selection committee headed by Jnanpith awardee Dr U.R. Ananthamurthy has finalised the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X