ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 29: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಏಪ್ರಿಲ್ 30ರಂದು ಪ್ರಕಟವಾಗಲಿದೆ.

ನಾಳೆ ಮಧ್ಯಾಹ್ನ ಇಲಾಖೆಯ ವೆಬ್‍ಸೈಟ್‍ನಲ್ಲಿ ಪಿಯುಸಿ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಪ್ರಕಟಿಸಲಿದೆ. ಮೇ 1ರಂದು ಆಯಾ ಕಾಲೇಜುಗಳಲ್ಲಿ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ.

Karnataka 2nd PUC results will be declared on April 30

ಮಾರ್ಚ್‍ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 6.90 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 1 ರಿಂದ 17ರ ತನಕ ಪರೀಕ್ಷೆ ನಡೆಸಲಾಗಿತ್ತು.

ಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿ ಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿ

3,37,860 ಮಹಿಳಾ ಅಭ್ಯರ್ಥಿಗಳು ಹಾಗೂ 3,52,292 ಪುರುಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು 53 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯ ಮಾಪನ ನಡೆಸಲಾಗಿತ್ತು. ಫಲಿತಾಂಶ ನೋಡಲು ಈ ಕೆಳಗಿನ ವೆಬ್ ತಾಣಗಳಲ್ಲಿ
http://puc.kar.nic.in, http://puc.karresults.nic.in, http://pue.kar.nic.in.

ನಾಳೆ ಮಧ್ಯಾಹ್ನದ ನಂತರ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದಾಗಿದೆ.

* ಅಧಿಕೃತ ವೆಬ್ ತಾಣವೊಂದಕ್ಕೆ kseeb.kar.nic.in ಗೆ ಭೇಟಿ ಕೊಡಿ
* ಕರ್ನಾಟಕ ಎರಡನೇ ಪಿಯುಸಿ ಪರೀಕ್ಷೆ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ರೋಲ್ ನಂಬರ್ ಹಾಗೂ ಇನ್ನಿತರ ಮಾಹಿತಿ ನಮೂದಿಸಿ
* submit ಬಟನ್ ಒತ್ತಿ.
* ಫಲಿತಾಂಶದ ಪ್ರತಿ ಪಡೆಯಲು ಪ್ರಿಂಟ್ ಔಟ್ ತೆಗೆದುಕೊಳ್ಳಿ

English summary
The Karnataka Secondary Education Examination Board (KSEEB) results will be declared on April 30. 2nd PU students can check their results on official websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X