ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶವನ್ನು ಸೋಮವಾರ ಪದವಿಪೂರ್ವ ಇಲಾಖೆಯ ನಿರ್ದೇಶಕಿ ಸಿ ಶಿಖಾ ಬಿಡುಗಡೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 596(600) ಅಂಕ ಪಡೆದ ಬೆಂಗಳೂರಿನ ರಜತ್ ಕಶ್ಯಪ್ ಮೊದಲ ಸ್ಥಾನ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಓಲ್ವಿಟಾ ಆನ್ಸಿಲಾ ತಲಾ 596(600) ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜ್ ಎಲ್ಲಾ ಟಾಪ್ ಐದು ಸ್ಥಾನಗಳನ್ನೂ ಬಾಚಿಕೊಂಡಿದ್ದು, ಇದೇ ಕಾಲೇಜಿನ ಕುಸುಮ ಉಜ್ಜಿನಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರು ಪಡೆ ಅಂಕ 594(600)

Karnataka 2nd PUC results: Toppers list

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ

ಈ ಬಾರಿಯ ಫಲಿತಾಂಶದಲ್ಲೂ ಎಂದಿನಂತೇ ಬಾಲಕಿಯರು ಮೇಲುಗೈ ಸಾಧಿಸಿದ್ದು, ಗ್ರಾಮಾಂತರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳೇ ಹೆಚ್ಚು ಉತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಮೂರೂ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಟಾಪ್ ಐದು ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.

ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಮಾರ್ಚ್​ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು.

ವಿಜ್ಞಾನ ವಿಭಾಗ

ವಿಜ್ಞಾನ ವಿಭಾಗ

ರಜತ್ ಕಶ್ಯಪ್, ಕುಮಾರನ್ಸ್ ಪಿಯು ಕಾಲೇಜು ಬೆಂಗಳೂರು 594 (600) ಅಂಕ, ಪ್ರಥಮ ಸ್ಥಾನ.

ದಿವ್ಯಾ, ವಿದ್ಯಾಮಂದಿರ ಪಿಯು ಕಾಲೇಜು ಮಲ್ಲೇಶ್ವರಂ ಬೆಂಗಳೂರು, 593 (600) ಅಂಕ, ದ್ವಿತೀಯ ಸ್ಥಾನ

ಪ್ರಿಯನಾಯಕ್, ಆರ್​ವಿ ಪಿಯು ಕಾಲೇಜು ಜಯನಗರ ಬೆಂಗಳೂರು 593(600) ಅಂಕ, ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ

ವಾಣಿಜ್ಯ ವಿಭಾಗ

ವೋಲ್ವಿತ ಅನ್ಸಿಲಾ ಡಿಸೋಜ ,ಆಳ್ವಾಸ್ ಪಿಯು ಕಾಲೇಜು, ದಕ್ಷಿಣ ಕನ್ನಡ 596 (600) ಅಂಕ, ಪ್ರಥಮ ಸ್ಥಾನ

ಶ್ರೀಕೃಷ್ಣ ಶರ್ಮ, ಸತ್ಯಸಾಹಿ ಲೋಕಸೇವಾ ಕಾಲೇಜು ದಕ್ಷಿಣ ಕನ್ನಡ, 596 (600) ಅಂಕ, ದ್ವಿತೀಯ ಸ್ಥಾನ

ಶ್ರೇಯ ಶೆಣೈ, ಕೆನರಾ ಪಿಯು ಕಾಲೇಜು ದಕ್ಷಿಣ ಕನ್ನಡ 595 (600) ಅಂಕ, ತೃತೀಯ ಸ್ಥಾನ

ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳುದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು

ಕಲಾ ವಿಭಾಗ

ಕಲಾ ವಿಭಾಗ

ಕುಸುಮ ಉಜ್ಜಿನಿ, ಇಂದು ಪಿಯು ಕಾಲೇಜು ಬಳ್ಳಾರಿ 594 (600) ಅಂಕ, ಪ್ರಥಮ ಸ್ಥಾನ

ಹೊಸಮನಿ ಚಂದ್ರಪ್ಪ, ಇಂದು ಪಿಯು ಕಾಲೇಜು ಬಳ್ಳಾರಿ, 591 (600) ಅಂಕ, ಎರಡನೇ ಸ್ಥಾನ

ನಾಗರಾಜು, ಇಂದು ಪಿಯು ಕಾಲೇಜು, ಬಳ್ಳಾರಿ 591(600) ಅಂಕ, ಮೂರನೇ ಸ್ಥಾನ

ಯಾವ ವಿಭಾಗಕ್ಕೆ ಎಷ್ಟು?

ಯಾವ ವಿಭಾಗಕ್ಕೆ ಎಷ್ಟು?

ಕಲಾ: 50.53%
ವಾಣಿಜ್ಯ: 66.39%
ವಿಜ್ಞಾನ: 66.58%

English summary
Karnataka 2nd PUC results: Pre-University board has declared results for 2nd PUC examinations. Here is toppers list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X