ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ: ಕಲಾ ವಿಭಾಗದಲ್ಲಿ ಕೊಟ್ಟೂರಿನ ಒಂದೇ ಕಾಲೇಜಿಗೆ 6 ರ್‍ಯಾಂಕ್!

|
Google Oneindia Kannada News

ಬೆಂಗಳೂರು, ಜೂ. 18: ಕಲಾ ವಿಭಾಗದಲ್ಲಿ ರಾಜ್ಯದಲ್ಲಿ 11 ವಿದ್ಯಾರ್ಥಿಗಳು ಟಾಪ್ ರ್‍ಯಾಂಕ್ ಗಳಿಸಿದ್ದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಸ್ವತಂತ್ರ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 594 ಅಂಕ ಗಳಿಸುವ ಮೂಲಕ ಮೊದಲ ರ್‍ಯಾಂಕ್ ಗಳಿಸಿದ್ದಾರೆ.

ಕೊಟ್ಟೂರಿನ ಇಂದು ಸ್ವತಂತ್ರ್ ಪಿಯು ಕಾಲೇಜಿನ ಶ್ವೇತಾ ಭೀಮಾ ಶಂಕರ್ ಹಾಗೂ ಮಡಿವಾಳರ ಸಹನಾ ಅವರು 594 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಅಗ್ರ ರ್‍ಯಾಂಕ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಧಾರವಾಡದ ಎಸ್‌ಜೆಎಂವಿಎಸ್ ಮಹಿಳಾ ಪಿಯುಸಿ ಕಾಲೇಜಿನ ಸಾನಿಕಾ ರವಿಶಂಕರ್ 593 ಅಂಕ ಗಳಿಸಿ ರಡನೇ ರ್‍ಯಾಂಕ್ ಗಳಿಸಿದ್ದಾರೆ. ಅದೇ ರೀತಿ ಕಲಬುರಗಿಯ ಕದಂಬ ಪಿಯುಸಿ ಕಾಲೇಜಿನ ನಿಂಗಣ್ಣ ಅಗಸರ್ 593 ಅಂಕ ಗಳಿಸಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ. ಒಟ್ಟಾರೆ ಕಲಾ ವಿಭಾಗದ 11 ರ್‍ಯಾಂಕ್ ನಲ್ಲಿ ಬಳ್ಳಾರಿ ಜಿಲ್ಲೆಯ ಹಿಂದು ಸ್ವತಂತ್ರ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸಿ ರಾಜ್ಯದ ನಂಬರ್ ಒನ್ ಕಲಾ ಕಾಲೇಜು ಆಗಿ ಹೊರ ಹೊಮ್ಮಿದೆ.

ಕಲಾ ವಿಭಾಗದಲ್ಲಿ ರ್‍ಯಾಂಕ್ ಗಳಿಸಿದ ಟಾಪರ್ 11:

ಶ್ವೇತಾ ಭೀಮಾ ಶಂಕರ್ , 594 ಅಂಕ, ಇಂದು ಸ್ವತಂತ್ರ ಪಿಯುಸಿ ಕಾಲೇಜು, ಕೊಟ್ಟೂರು, ಬಳ್ಳಾರಿ,

ಮಡಿವಾಳರ ಸ್ನೇಹಾ, 594 ಅಂಕ, ಇಂದು ಸ್ವತಂತ್ರ ಪಿಯುಸಿ ಕಾಲೇಜು, ಕೊಟ್ಟೂರು, ಬಳ್ಳಾರಿ,

ಸಾನಿಕಾ ರವಿಂಕರ್, 593, ಎಸ್‌ಜೆಎಂವಿಎಸ್ ಮಹಿಳಾ ಪಿಯು ಕಾಲೇಜು, ಧಾರವಾಡ,

Karnataka 2nd PUC result: Arts division 11 toppers list

ನಿಂಗಣ್ಣ ಅಗಸರ್, 593, ಕದಂಬ ಪಿಯುಸಿ ಕಾಲೇಜು, ಕಲಬುರಗಿ,

ಶಿವರಾಜ್, 593, ಆನಂದೇಶ್ವರ ಪಿಯು ಕಾಳೇಜು ನರೇಗಲ್, ಗದಗ,

ಜಿ. ಮೌನೇಶ್, 593, ಹಿಂದು ಸ್ವತಂತ್ರ ಪಿಯುಸಿ ಕಾಲೇಜು, ಕೊಟ್ಟೂರು, ಬಳ್ಳಾರಿ,

ಎಚ್‌. ಸಂತೋಷ, 592, ಎಸ್‌ಯುಎಂಜೆ ಪಿಯುಸಿ ಕಾಲೇಜು, ಹರಪನಹಳ್ಳಿ ಬಳ್ಳಾರಿ,

ಪೂರ್ಣಿಮಾ ಉಜ್ಜನಿ, 591 , ಪಂಚಮಸಾಲಿ ಪಿಯು ಕಾಲೇಜು ಇಟಲಿ, ಬಳ್ಳಾರಿ,

ಸಮೀರ್ 591 , ಹಿಂದು ಸ್ವತಂತ್ರ್ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

ಶಾಂತಾ ಜಿ. 591,ಹಿಂದು ಸ್ವತಂತ್ರ್ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

ಕಾವೇರಿ ಜಗ್ಗಲ್, 591 ಹಿಂದು ಸ್ವತಂತ್ರ್ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

Recommended Video

ಎಷ್ಟೇ ಪರ್ಫಾಮ್ ಮಾಡಿದ್ರು ಬಿಸಿಸಿಐ ಕಣ್ಣಿಗೆ ಬೀಳೋದು ಕಷ್ಟ | *Cricket | OneIndia Kannada

English summary
Karnataka 2nd PUC Results 2022: District-wise pass percentage: Arts divison, Ballari Hindu independent puc college bags 6 ranks know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X