ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಿಗೆ 600 ಅಂಕ ಗಳಿಸಿದ ಟಾಪ್ ಐದು ಜಿಲ್ಲೆಗಳು

|
Google Oneindia Kannada News

ಬೆಂಗಳೂರು, ಜು. 20: ಕರ್ನಾಟಕದಲ್ಲಿ ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಐದು ಜಿಲ್ಲೆಗಳ 1261 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 445 ವಿದ್ಯಾರ್ಥಿಗಳು 600 ಅಂಕಗಳಿಗೆ ಸರಾಸರಿ 600 ಅಂಕ ಗಳಿಸಿದ್ದಾರೆ.

ಮಂಗಳವಾರ ಸಂಜೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆ ಇಲ್ಲದಿದ್ದರೂ ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಯಲ್ಲಿ ಗಳಿಸಿದ ಅಂಕಗಳ ಸರಾಸರಿ ಅಂಕ ಪರಿಗಣಿಸಿ ಪ್ರಕಟಿಸಿದ ಫಲಿತಾಂಶದಲ್ಲೂ ಹೆಚ್ಚು ಅಂಕ ಗಳಿಸಿ ದಾಖಲೆ ಬರೆದಿದ್ದಾರೆ. ಅದರಲ್ಲೂ ಜಿಲ್ಲಾವಾರು ಲೆಕ್ಕಾಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅಗ್ರ ಪಟ್ಟ ಗಳಿಸಿದ್ದಾರೆ.

2nd PUC ವಿದ್ಯಾರ್ಥಿಗಳ ಕೊರೊನಾ ಪ್ಯಾಕೇಜ್ ಫಲಿತಾಂಶ ಪ್ರಕಟ 2nd PUC ವಿದ್ಯಾರ್ಥಿಗಳ ಕೊರೊನಾ ಪ್ಯಾಕೇಜ್ ಫಲಿತಾಂಶ ಪ್ರಕಟ

ಇನ್ನು ವಿಭಾಗವಾರು 600 ಅಂಕಗಳಿಗೆ 600 ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ 2239 ವಿದ್ಯಾರ್ಥಿಗಳು. ಕಲಾ ವಿಭಾಗದಲ್ಲಿ 18 ಮಂದಿ, ವಾಣಿಜ್ಯ ವಿಭಾಗದಲ್ಲಿ 292 ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 1929 ವಿದ್ಯಾರ್ಥಿಗಳು 600 ಅಂಕಗಳಿಗೆ ಆರು ನೂರು ಅಂಕ ಗಳಿಸಿದ್ದಾರೆ.

Karnataka 2nd PUC Result : 2239 Students 600 out of 600 scored top 5 districts

600 ಕ್ಕೆ 600 ಅಂಕ ಗಳಿಸಿದ ಟಾಪ್ ಐದು ಜಿಲ್ಲೆಗಳು :

1. ದಕ್ಷಿಣ ಕನ್ನಡ 445

2. ಬೆಂಗಳೂರು ದಕ್ಷಿಣ 302,

3. ಬೆಂಗಳೂರು ಉತ್ತರ 261

4. ಉಡುಪಿ 149

5. ಹಾಸನ 104

English summary
Karataka 2nd PUC, 2239 students scored a score of 600 out of 600.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X