Breaking: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಬೆಂಗಳೂರು,
ಜುಲೈ
20:
ಕರ್ನಾಟಕ
ದ್ವಿತೀಯ
ಪಿಯುಸಿ
ಫಲಿತಾಂಶ
ಇಂದು
ಪ್ರಕಟಗೊಂಡಿದೆ.
ಫಲಿತಾಂಶ
ನೀಡಲು
ಪಿಯು
ಬೋರ್ಡ್
ಮುಂದೆ
ಸವಾಲೊಂದು
ಎದುರಾಗಿದ್ದು,
ನೋಂದಣಿ
ಸಂಖ್ಯೆ
ಇಲ್ಲದೇ
ಫಲಿತಾಂಶ
ನೋಡುವುದು
ಹೇಗೆ
ಎಂಬ
ಗೊಂದಲ
ಬಗೆಹರಿಸಲು
ಪಿಯು
ಬೋರ್ಡ್
ಸ್ಪಷ್ಟನೆ
ನೀಡಿದೆ.
ಪ್ರತಿ
ವರ್ಷ
ಪರೀಕ್ಷೆಗೆ
ಕೊಟ್ಟ
ನೋಂದಣಿ
ಸಂಖ್ಯೆ
ಮೇಲೆ
ಫಲಿತಾಂಶ
ಸಿಗುತ್ತಿತ್ತು.
ಈ
ಬಾರಿ
ಪರೀಕ್ಷೆಯಾಗದೆ
ರಿಜಿಸ್ಟರ್
ನಂಬರ್
ಸಿಕ್ಕಿಲ್ಲ.
ಹೀಗಾಗಿ,
ಫಲಿತಾಂಶ
ಸಲುವಾಗಿ
ವಿದ್ಯಾರ್ಥಿಗಳಿಗೆ
ಹೊಸದಾಗಿ
ರಿಜಿಸ್ಟರ್
ನಂಬರ್
ಜನರೇಟ್
ಮಾಡುವ
ವ್ಯವಸ್ಥೆ
ಮಾಡಲಾಗಿದೆ.
Know
my
number
ಆಯ್ಕೆಯನ್ನು
ಪಿಯು
ವೆಬ್ಸೈಟ್
ಮೂಲಕ
ವಿದ್ಯಾರ್ಥಿಗಳು
ಪರಿಶೀಲಿಸಬಹುದು.
4.30ರ
ಸುಮಾರಿಗೆ
ಅಧಿಕೃತವಾಗಿ
ವೆಬ್ಸೈಟ್ನಲ್ಲಿ
ಫಲಿತಾಂಶ
ಲಭ್ಯವಾಗಲಿದೆ.
ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಅನ್ನು ಖಚಿತಪಡಿಸಿಕೊಳ್ಳುವ ಮೂಲಕ http://karresults.nic.in ವೆಬ್ಸೈಟ್ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ದ್ವಿತೀಯ ಪಿಯುಸಿಯ ಫಲಿತಾಂಶ ಲಭ್ಯವಾಗಲಿದೆ .
ಸ್ಯಾಟ್ಸ್ನಲ್ಲಿ ನೋಂದಣಿಯಾಗಿರುವ ಮೊಬೈಲ್ ನಂಬರ್ಗೆ ಫಲಿತಾಂಶ ಬರಲಿದೆ. ಪಿಯು ಫಲಿತಾಂಶದ ಬಗ್ಗೆ ಅಸಮಧಾನವಿದ್ದರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ.45ರಷ್ಟು ಅಂಕ ಗಳಿಕೆ, ಪ್ರಧಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸರುವ ಅಂಕದಲ್ಲಿ ಶೇ.45ರಷ್ಟು ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಶೇ.10ರಷ್ಟು ಅಂಕ ಜತೆಗೆ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ.5ರಷ್ಟು ಫಲಿತಾಂಶ ನೀಡುತ್ತೇವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
SSLC+1st PUC+ ದ್ವಿತೀಯ ಪಿಯುಸಿ ಕೃಪಾಂಕ ಪರಿಗಣನೆ ಮಾಡಲಾಗಿದೆ. ಅದರಂತೆ, 6,66,497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 3,35,138 ವಿದ್ಯಾರ್ಥಿಗಳು, 3,31,359 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಆಗಿದ್ದಾರೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಕೂಡ ಪ್ರಕಟಿಸಲಾಗುತ್ತಿದೆ, ಕನಿಷ್ಠ ಉತ್ತೀರ್ಣ ಅಂಕ ನೀಡಿ ಪಾಸು ಮಾಡಲಾಗುತ್ತದೆ. 4,50,706 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಒಟ್ಟು 6,65497 ಪರೀಕ್ಷೆ ಬರೆಯಬೇಕಿದ್ದವರು , ಡಿಸ್ಟಿಂಕ್ಷನ್ ಮತ್ತು ಫಸ್ಟ್ ಕ್ಲಾಸ್ - 1,95,650 , ದ್ವಿತೀಯ ದರ್ಜೆ , 1,47, 055ಯಲ್ಲಿ ಉತ್ತೀರ್ಣರಾಗಿದ್ದಾರೆ.
600ಕ್ಕೆ
600
ಅಂಕ
ಪಡೆದ
ವಿದ್ಯಾರ್ಥಿಗಳು:
ದಕ್ಷಿಣ
ಕನ್ನಡ
ಜಿಲ್ಲೆ
445,
ಬೆಂಗಳೂರು
ದಕ್ಷಿಣ
302,
ಬೆಂಗಳೂರು
ಉತ್ತರ
261,
ಉಡುಪಿ
149,
ಹಾಸನ
104
ವಿದ್ಯಾರ್ಥಿಗಳು.
ವಾಣಿಜ್ಯ
ವಿಭಾಗ-2,51,686,
ವಿಜ್ಞಾನ,
2,19,777,
ಕಲಾ
ವಿಭಾಗದಲ್ಲಿ
1,95,304
ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ಗ್ರಾಮೀಣ
ಭಾಗದ
ವಿದ್ಯಾರ್ಥಿಗಳ
ಸಂಖ್ಯೆ
1,47,594
ಇದ್ದರೆ,
ನಗರ
ಪ್ರದೇಶದಲ್ಲಿ
5,18,903
ವಿದ್ಯಾರ್ಥಿಗಳಿದ್ದಾರೆ.