ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?

|
Google Oneindia Kannada News

ಬೆಂಗಳೂರು, ಜುಲೈ 14: 2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ಬಿಕ್ಕಟ್ಟಿನ ನಡುವೆಯೇ ಪರೀಕ್ಷೆ ಬರೆದಿದ್ದ ದ್ವಿತೀಯ ಪಿಯು ಫಲಿತಾಂಶದಲ್ಲಿ ಬಹಳ ವ್ಯತ್ಯಾಸವೇನು ಆಗಿಲ್ಲ ಎನ್ನುವುದು ಗಮನಾರ್ಹ.

Recommended Video

ಸದ್ಯಕ್ಕೆ ಸರಿಯಾಗೋದಿಲ್ಲ ಕೊರೊನ ಪರಿಸ್ಥಿತಿ - WHO | Oneindia Kannada

ಸಂಪ್ರದಾಯದಂತೆ ಈ ಬಾರಿಯೂ ಹೆಣ್ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇಕಡಾ 69.20ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇಕಡಾ 68.24 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 55.29 ಬಾಲಕರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಉಡುಪಿ ಈ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ. ವಿಜಯಪುರ ಕೊನೆಯ ಕೊನೆಯ ಸ್ಥಾನಕ್ಕೆ ಕುಸಿದಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನ

ಕಲಾ ವಿಭಾಗದಲ್ಲಿ ಶೇಕಡಾ 41.27ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಶೇಕಡಾ 76.02ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 65.53ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷ ಯಾವ ಜಿಲ್ಲೆ ಎಷ್ಟನೇ ಸ್ಥಾನ ಪಡೆದುಕೊಂಡಿದೆ ಎಂಬ ವಿವರ ಇಲ್ಲಿದೆ. ಮುಂದೆ ಓದಿ...

ಮೊದಲ ಸ್ಥಾನದಲ್ಲಿ ಉಡುಪಿ

ಮೊದಲ ಸ್ಥಾನದಲ್ಲಿ ಉಡುಪಿ

- ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ವರ್ಷವೂ ಪ್ರಥಮ ಸ್ಥಾನದಲ್ಲಿ ಮುಂದುವರಿದೆ. ಈ ವರ್ಷ ಉಡುಪಿ ಜಿಲ್ಲೆ 90.71ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ ಉಡುಪಿ ಜಿಲ್ಲೆ 92.20% ರಷ್ಟು ಫಲಿತಾಂಶ ಪಡೆದಿತ್ತು.

- ಶೇಕಡಾ 90.71 ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ಎರಡನೇ ಸ್ಥಾನ ಪಡೆದುಕೊಂಡಿದೆ.

- 81.53ರಷ್ಟು ಫಲಿತಾಂಶ ಹೊಂದಿರುವ ಕೊಡಗು ಮೂರನೇ ಸ್ಥಾನ ಪಡೆದುಕೊಂಡಿದೆ.

- 80.97 ರಷ್ಟು ಫಲಿತಾಂಶ ಪಡೆದಿರುವ ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ.

ಐದನೇ ಸ್ಥಾನದಲ್ಲಿ ಚಿಕ್ಕಮಗಳೂರು

ಐದನೇ ಸ್ಥಾನದಲ್ಲಿ ಚಿಕ್ಕಮಗಳೂರು

5 ಚಿಕ್ಕಮಗಳೂರು 79.11%

6 ಬೆಂಗಳೂರು ದಕ್ಷಿಣ 77.56%

7 ಬೆಂಗಳೂರು ಉತ್ತರ 75.54%

8 ಬಾಗಲಕೋಟೆ 74.59%

9 ಚಿಕ್ಕಬಳ್ಳಾಪುರ 73.74%

10 ಶಿವಮೊಗ್ಗ 72.19%

11 ಹಾಸನ 70.18

12 ಚಾಮರಾಜನಗರ 69.29%

13 ಬೆಂಗಳೂರು ಗ್ರಾಮಾಂತರ 69.02%

ಹದಿನೈದನೇ ಸ್ಥಾನದಲ್ಲಿ ಮೈಸೂರು

ಹದಿನೈದನೇ ಸ್ಥಾನದಲ್ಲಿ ಮೈಸೂರು

14 ಹಾವೇರಿ 68.01%

15 ಮೈಸೂರು 67.98%

16 ಕೋಲಾರ 67.42%

17 ಧಾರವಾಡ 67.31%

18 ಬೀದರ್ 64.61%

19 ದಾವಣಗೆರೆ 64.09%

20 ಚಿಕ್ಕೋಡಿ 63.88%

21 ಮಂಡ್ಯ 63.82%

22 ಗದಗ 63%

ಕೊನೆಯ ಸ್ಥಾನದಲ್ಲಿ ವಿಜಯಪುರ

ಕೊನೆಯ ಸ್ಥಾನದಲ್ಲಿ ವಿಜಯಪುರ

23 ತುಮಕೂರು 62.26%

24 ಬಳ್ಳಾರಿ 62.02%

25 ರಾಮನಗರ 60.96%

26 ಕೊಪ್ಪಳ 60.09%

27 ಬೆಳಗಾವಿ 59.7%

28 ಯಾದಗಿರಿ 58.38%

29 ಕಲಬುರಗಿ 58.27%

30 ಚಿತ್ರದುರ್ಗ 56.8%

31 ರಾಯಚೂರು 56.22%

32 ವಿಜಯಪುರ 54.22

English summary
Karnataka 2nd PUC Results 2020 declared on pue.kar.nic.in, karresults.nic.in kseeb.kar.nic.in. check here District-wise pass percentage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X