ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.15ರಂದು ಮರು ಮೌಲ್ಯಮಾಪನ ನಂತರದ 2ನೇ ಪಿಯು ರಿಸಲ್ಟ್

By Mahesh
|
Google Oneindia Kannada News

ಬೆಂಗಳೂರು, ಜೂ.14: ಮರು ಮೌಲ್ಯಮಾಪನದ ನಂತರದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಜೂ.15ರಂದು ಪ್ರಕಟಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. ಇನ್ನುಳಿದ ಅರ್ಜಿಗಳ ಮರು ಮೌಲ್ಯಮಾಪನ ಜಾರಿಯಲ್ಲಿದ್ದು, ಜೂ. 17ರಂದು ಮತ್ತೊಂದು ಸುತ್ತಿನ ಫಲಿತಾಂಶ ಪ್ರಕಟವಾಗಲಿದೆ.

ಇಲ್ಲಿತನಕ ಸುಮಾರು 30 ಸಾವಿರ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಜೂ.15ರಂದು ಫ‌ಲಿತಾಂಶ ಪ್ರಕಟಿಸಲಾಗುತ್ತದೆ. ಉಳಿದ ಉತ್ತರ ಪತ್ರಿಕೆಗಳ ಫ‌ಲಿತಾಂಶವನ್ನು ಜೂ.17ರಂದು ಎರಡನೇ ಹಂತದಲ್ಲಿ ಪ್ರಕಟಿಸುವುದಾಗಿ ಹೇಳಿದರು. [2015ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

Kimmane Rathnakar

ಒಂದು ವೇಳೆ ಜೂ.17ರ ವೇಳೆಗೆ ಮರು ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳದಿದ್ದಲ್ಲಿ ಜೂ.19ರೊಳಗೆ ಪೂರ್ಣ ಫ‌ಲಿತಾಂಶ ಹೊರ ಬೀಳಲಿದೆ.

ಬೆಳಗ್ಗೆ 10.30ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲೇಶ್ವರಂ ಇಲಾಖೆ ಕಚೇರಿಯಲ್ಲಿ ಫ‌ಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 11 ಗಂಟೆ ಸುಮಾರಿಗೆ ವೆಬ್‌ಸೈಟ್‌ಗಳಲ್ಲಿ ಫ‌ಲಿತಾಂಶ ಲಭ್ಯವಾಗಲಿದೆ.[ಸಿಇಟಿ 2015 ಫಲಿತಾಂಶ ಪ್ರಕಟ, 5 ಟಾಪರ್ಸ್ ಗೆ ಉಚಿತ ಸೀಟು]

ಮಾರ್ಚ್ 12ರಿಂದ ಮಾ.30ರ ತನಕ 1017 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಒಟ್ಟಾರೆ ಶೇ.60.54 ಫಲಿತಾಂಶ ಬಂದಿತ್ತು. ಅದರೆ, ಗ್ರೇಸ್ ಮಾರ್ಕ್ಸ್ ಗೊಂದಲದಿಂದಾಗಿ ಅನೇಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಮುಂದಾಗಿದ್ದರು.

ಯಾವ ಯಾವ ತಾಣಗಳಲ್ಲಿ ಫಲಿತಾಂಶ ಸಿಗುತ್ತೆ?
http://www.pue.kar.nic.in
http://www.karresults.nic.in
http://www.puc.kar.nic.in
www.karnatakaeducation.net
http://results.karnatakaeducation.net
www.bangaloreeducation.net
(ಒನ್ ಇಂಡಿಯಾ ಸುದ್ದಿ)

English summary
Karnataka II PUC examination 2015 results after Revaluation & Retotalling will be announced on June 15 and June 17 said Primary and higher education minister Kimmane Rathnakar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X