ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 27 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

|
Google Oneindia Kannada News

ಬೆಂಗಳೂರು, ಜೂನ್ 18: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಮುಂದಕ್ಕೆ ಹೋಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಇಂದು ನಡೆಯಿತು. ಇಂಗ್ಲೀಷ್ ವಿಷಯದ ಪರೀಕ್ಷೆ ಬಾಕಿ ಉಳಿದುಕೊಂಡಿದ್ದು, ಇಂದಿಗೆ ಪರೀಕ್ಷೆ ಮುಗಿದಿದೆ.

Recommended Video

Finally second PU studenta wrote Englishexam today midst fear and precautions | KSEA

ಕೊರೊನಾ ಭೀತಿ ನಡುವೆಯೇ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲಾಗಿದೆ. ಎಲ್ಲ ಕ್ರಮಗಳನ್ನು ತೆಗೆದುಕೊಂಡರೂ ಕೆಲವೊಂದು ಕಡೆ ಎಡವಟ್ಟು ನಡೆದಿವೆ.

SSLC, PUC ಪರೀಕ್ಷೆ: ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು? SSLC, PUC ಪರೀಕ್ಷೆ: ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು?

ಪರೀಕ್ಷೆ ಏನೋ ಮುಗಿದಿದೆ. ಆದರೆ, ಇನ್ನೊಂದು ಪ್ರಮುಖ ವಿಷಯ ಏನೆಂದರೆ, ಈ ಬಾರಿ ಪರೀಕ್ಷೆ ಸಾಕಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಂದು ರಾಜ್ಯದಲ್ಲಿ 5,95,997 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ, ಈ ಪೈಕಿ ಬರೋಬ್ಬರಿ 27022 ಮಕ್ಕಳು ಪರೀಕ್ಷೆ ಬರೆದಿಲ್ಲ. ಈ ವಿದ್ಯಾರ್ಥಿಗಳು ಕೊರೊನಾ ಭಯದಿಂದಲೇ ಪರೀಕ್ಷೆಗೆ ಹಾಜರಾಗಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.

27022 ಮಕ್ಕಳು ಪರೀಕ್ಷೆ ಬರೆದಿಲ್ಲ

27022 ಮಕ್ಕಳು ಪರೀಕ್ಷೆ ಬರೆದಿಲ್ಲ

ಇಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5,68,975 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆದರೆ, ಪರೀಕ್ಷೆ ತೆಗೆದುಕೊಂಡವರ ಸಂಖ್ಯೆ 5,95,997 ಆಗಿದೆ. ಇವರಲ್ಲಿ 27022 ಮಕ್ಕಳು ಈ ಬಾರಿ ಪರೀಕ್ಷೆ ಬರೆದಿಲ್ಲ. ಪರೀಕ್ಷೆ ಬರೆದವರ ಪೈಕಿ ಅಂತರ ಜಿಲ್ಲೆಯಲ್ಲಿ 18,529 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 1,889 ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆದಿದ್ದಾರೆ.

ಕಲಬುರಗಿಯಲ್ಲಿ ಹೆಚ್ಚಿನ ಸಂಖ್ಯೆ

ಕಲಬುರಗಿಯಲ್ಲಿ ಹೆಚ್ಚಿನ ಸಂಖ್ಯೆ

ಪರೀಕ್ಷೆ ಬರೆಯದ 27022 ಮಕ್ಕಳಲ್ಲಿ ಕಲಬುರಗಿ ಜಿಲ್ಲೆಯವರು ಹೆಚ್ಚಾಗಿದ್ದಾರೆ. ಇಲ್ಲಿನ 1750 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರೂ, ಇಂದಿನ ಪರೀಕ್ಷೆಯಲ್ಲಿ ಹಾಜರಾಗಿಲ್ಲ. ಕೊಡಗಿನಲ್ಲಿ ಮಕ್ಕಳ ಹಾಜರಾತಿಯ ಶೇಕಡ ಪ್ರಮಾಣ ಎಲ್ಲ ಜಿಲ್ಲೆಗಳಿಂತ ಹೆಚ್ಚಿದೆ. ಆದರೂ ಕೂಡ ಅಲ್ಲಿ 140 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಈ ಅಂಕಿಗಳ ಬಗ್ಗೆ ಪಿಯುಸಿ ನಿರ್ದೇಶಕ ಡಾ.ರೇಜು ಮಾಹಿತಿ ನೀಡಿದ್ದಾರೆ.

12 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

12 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

ಕರ್ನಾಟಕದ 12 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿಲ್ಲ. ಕಲಬುರಗಿ 1750, ಬೆಂಗಳೂರು ದಕ್ಷಿಣ 1675, ಬೆಂಗಳೂರು ಉತ್ತರ 1646, ತುಮಕೂರು 1457, ಮೈಸೂರು 1401, ಬಿಜಾಪುರ 1476, ಚಿಕ್ಕೋಡಿ 1359, ರಾಯಚೂರು 1347, ದಾವಣಗೆರೆ 1292, ಬಳ್ಳಾರಿ 1261, ಬೆಳಗಾವಿ 1044, ಚಿತ್ರದುರ್ಗ 1040 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ

ಉಳಿದ ಜಿಲ್ಲೆಗಳಲ್ಲಿ

ಉಳಿದ ಜಿಲ್ಲೆಗಳಾದ ಕೋಲಾರ 730, ಮಂಡ್ಯ 682, ಯಾದಗಿರಿ 568, ಶಿವಮೊಗ್ಗ 538, ಹಾಸನ 535, ದಕ್ಷಿಣ ಕನ್ನಡ 466, ಕೊಪ್ಪಳ 463, ಚಿಕ್ಕಬಳ್ಳಾಪುರ 442, ಉತ್ತರ ಕನ್ನಡ 435, ಚಾಮರಾಜನಗರ 268, ಉಡುಪಿ 163, ಕೊಡಗು 140 ವಿದ್ಯಾರ್ಥಿಗಳು ಇಂದು ನಡೆದ ಪರೀಕ್ಷೆಯಲ್ಲಿ ಹಾಜರಾಗಿಲ್ಲ.

English summary
Karnataka 2nd PUC English Exam: 27022 students absent among 5,95,997 students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X