ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನವಾಗಿ ಆಯ್ಕೆಯಾದ ರಾಜ್ಯದ 28 ಸಂಸದರ ಜಾತಿ ಲೆಕ್ಕಾಚಾರ

|
Google Oneindia Kannada News

ಬಹುನಿರೀಕ್ಷಿತ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಗೆ ಊಹಿಸಲೂ ಅಸಾಧ್ಯವಾದ ಮ್ಯಾನ್ ಡೇಟ್ ಸಿಕ್ಕಿದೆ. ಕರ್ನಾಟಕದ ಮತದಾರನೂ ಬಿಜೆಪಿಯನ್ನು ಆಶೀರ್ವದಿಸಿದ್ದಾನೆ.

28ಕ್ಷೇತ್ರಗಳ ಪೈಕಿ 5 ಕ್ಷೇತ್ರ SCಗೆ ಇನ್ನೆರಡು ಕ್ಷೇತ್ರ ST ಸಮುದಾಯಕ್ಕೆ ಮೀಸಲಾಗಿದೆ. ಇನ್ನುಳಿದ 21ಕ್ಷೇತ್ರಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಗೆದ್ದದ್ದು ಲಿಂಗಾಯತ ಸಮುದಾಯದವರು.

ಮೂರು ರಾಜ್ಯಗಳು 'ಕೈ' ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು?ಮೂರು ರಾಜ್ಯಗಳು 'ಕೈ' ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು?

ಇದರ ಜೊತೆಗೆ ಒಕ್ಕಲಿಗೆ, ಬ್ರಾಹ್ಮಣ ಮತ್ತು ಓಬಿಸಿ ಸಮುದಾಯಕ್ಕೆ ಸೇರಿದವರೂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ 25 ಕ್ಷೇತ್ರದಲ್ಲಿ ಗೆದ್ದಿದ್ದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು!ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು!

ಒಂಬತ್ತು - ಲಿಂಗಾಯತ, ಏಳು - ಒಕ್ಕಲಿಗ, ಐದು - ಎಸ್ ಸಿ, ಮೂವರು -ಬ್ರಾಹ್ಮಣರು, ಓಬಿಸಿ ಮತ್ತು ಎಸ್ ಟಿ ಸಮುದಾಯದ ಇಬ್ಬರು ಆಯ್ಕೆಯಾಗಿದ್ದಾರೆ. ಯಾವ ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದವರು? ಪಟ್ಟಿ ಮುಂದಕ್ಕಿದೆ

ಒಂಬತ್ತು - ಲಿಂಗಾಯತ, ಏಳು - ಒಕ್ಕಲಿಗರು ಜಯಶಾಲಿ

ಒಂಬತ್ತು - ಲಿಂಗಾಯತ, ಏಳು - ಒಕ್ಕಲಿಗರು ಜಯಶಾಲಿ

1. ಬಾಗಲಕೋಟೆ - ಪಿ ಸಿ ಗದ್ದಿಗೌಡರ್ (ಬಿಜೆಪಿ) - ಲಿಂಗಾಯತ
2. ಬೆಂಗಳೂರು ಕೇಂದ್ರ - ಪಿ ಸಿ ಮೋಹನ್ (ಬಿಜೆಪಿ ) - ಓಬಿಸಿ
3. ಬೆಂಗಳೂರು ಉತ್ತರ - ಡಿ ವಿ ಸದಾನಂದ ಗೌಡ (ಬಿಜೆಪಿ) - ಒಕ್ಕಲಿಗ
4. ಬೆಂಗಳೂರು ಗ್ರಾಮಾಂತರ - ಡಿ ಕೆ ಸುರೇಶ್ (ಕಾಂಗ್ರೆಸ್) - ಒಕ್ಕಲಿಗ
5. ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ (ಬಿಜೆಪಿ ) - ಬ್ರಾಹ್ಮಣ
6. ಬೆಳಗಾವಿ - ಸುರೇಶ್ ಅಂಗಡಿ (ಬಿಜೆಪಿ) - ಲಿಂಗಾಯತ

ಐದು - ಎಸ್ ಸಿ, ಮೂವರು -ಬ್ರಾಹ್ಮಣರು ಜಯಶಾಲಿ

ಐದು - ಎಸ್ ಸಿ, ಮೂವರು -ಬ್ರಾಹ್ಮಣರು ಜಯಶಾಲಿ

7. ಬಳ್ಳಾರಿ - ವೈ ದೇವೇಂದ್ರಪ್ಪ (ಬಿಜೆಪಿ ) ಎಸ್ ಟಿ
8. ಬೀದರ್ - ಭಗವಂತ ಖೂಬಾ (ಬಿಜೆಪಿ) - ಲಿಂಗಾಯತ
9. ಬಿಜಾಪುರ - ರಮೇಶ್ ಜಿಗಜಿಣಗಿ ( ಬಿಜೆಪಿ ) - ಎಸ್ ಸಿ
10. ಚಾಮರಾಜನಗರ - ವಿ ಶ್ರೀನಿವಾಸ ಪ್ರಸಾದ್ (ಬಿಜೆಪಿ) - ಎಸ್ ಸಿ
11. ಚಿಕ್ಕಬಳ್ಳಾಪುರ - ಬಿ ಎನ್ ಬಚ್ಚೇಗೌಡ (ಬಿಜೆಪಿ ) - ಒಕ್ಕಲಿಗ
12. ಚಿಕ್ಕೋಡಿ - ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) - ಲಿಂಗಾಯತ

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಓಬಿಸಿ ಮತ್ತು ಎಸ್ ಟಿ ಸಮುದಾಯದ ಇಬ್ಬರು

ಓಬಿಸಿ ಮತ್ತು ಎಸ್ ಟಿ ಸಮುದಾಯದ ಇಬ್ಬರು

13. ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ (ಬಿಜೆಪಿ) - ಒಕ್ಕಲಿಗ
14. ಚಿತ್ರದುರ್ಗ - ಎ ನಾರಾಯಣಸ್ವಾಮಿ (ಬಿಜೆಪಿ) - ಎಸ್ ಸಿ
15. ದಕ್ಷಿಣಕನ್ನಡ - ನಳಿನ್ ಕುಮಾರ್ ಕಟೀಲ್ (ಬಿಜೆಪಿ) - ಒಕ್ಕಲಿಗ
16. ದಾವಣಗೆರೆ - ಜಿ ಎಂ ಸಿದ್ದೇಶ್ವರ್ (ಬಿಜೆಪಿ) - ಲಿಂಗಾಯತ
17. ಧಾರವಾಡ - ಪ್ರಲ್ಹಾದ್ ಜೋಷಿ (ಬಿಜೆಪಿ) - ಬ್ರಾಹ್ಮಣ
18. ಕಲಬುರಗಿ - ಡಾ. ಉಮೇಶ್ ಜಾಧವ್ (ಬಿಜೆಪಿ) - ಎಸ್ ಸಿ

ರಾಜ್ಯದ ನೂತನ 28 ಸಂಸದರ ಜಾತಿ ಲೆಕ್ಕಾಚಾರ

ರಾಜ್ಯದ ನೂತನ 28 ಸಂಸದರ ಜಾತಿ ಲೆಕ್ಕಾಚಾರ

19. ಹಾಸನ - ಪ್ರಜ್ವಲ್ ರೇವಣ್ಣ (ಜೆಡಿಎಸ್) - ಒಕ್ಕಲಿಗ
20. ಹಾವೇರಿ - ಶಿವಕುಮಾರ್ ಉದಾಸಿ (ಬಿಜೆಪಿ) - ಲಿಂಗಾಯತ
21. ಕೋಲಾರ - ಎಸ್ ಮುನಿಸ್ವಾಮಿ (ಬಿಜೆಪಿ) - ಎಸ್ ಸಿ
22. ಕೊಪ್ಪಳ - ಸಂಗಣ್ಣ ಕರಡಿ (ಬಿಜೆಪಿ) - ಲಿಂಗಾಯತ
23. ಮಂಡ್ಯ - ಸುಮಲತಾ ಅಂಬರೀಶ್ (ಪಕ್ಷೇತರ) - ಓಬಿಸಿ

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಮೈಸೂರು - ಪ್ರತಾಪ್ ಸಿಂಹ

ಮೈಸೂರು - ಪ್ರತಾಪ್ ಸಿಂಹ

24. ಮೈಸೂರು - ಪ್ರತಾಪ್ ಸಿಂಹ (ಬಿಜೆಪಿ) - ಒಕ್ಕಲಿಗ
25. ರಾಯಚೂರು - ರಾಜಾ ಅಮರೇಶ್ವರ ನಾಯಕ - ಎಸ್ ಟಿ
26. ಶಿವಮೊಗ್ಗ - ಬಿ ವೈ ರಾಘವೇಂದ್ರ (ಬಿಜೆಪಿ) - ಲಿಂಗಾಯತ
27. ತುಮಕೂರು - ಜಿ ಎಸ್ ಬಸವರಾಜು (ಬಿಜೆಪಿ ) - ಲಿಂಗಾಯತ
28. ಉತ್ತರ ಕನ್ನಡ - ಅನಂತ್ ಕುಮಾರ್ ಹೆಗ್ಡೆ (ಬಿಜೆಪಿ) - ಬ್ರಾಹ್ಮಣ

English summary
Loksabha elections 2019: 28 winning MPs caste wise details. 9 Lingayat, 7 Vokkaliga, 5 ST, 3 Brahmin and OBC, ST 2 each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X