ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ನಾಡಿನ 25ನೇ ಮುಖ್ಯಮಂತ್ರಿ ಕುಮಾರಸ್ವಾಮಿ

By Mahesh
|
Google Oneindia Kannada News

ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಯಶಸ್ಸು ಕಂಡಿದ್ದ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಅವರು ಅನುಭವವಿಲ್ಲದ ಕಾಲದಲ್ಲಿ ರಾಜಕೀಯ ಪ್ರವೇಶಿಸಿ, ಹಲವು ಪ್ರಥಮಗಳಿಗೆ ನಾಂದಿ ಹಾಡಿದವರು. ಇಂದು ಅವರು ಎರಡನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾರೆ. ನಾಡಿನ 25ನೇ ಮುಖ್ಯಮಂತ್ರಿಯ ರಾಜಕೀಯ ಬದುಕಿನ ಪ್ರಮುಖ ಘಟನಾವಳಿಗಳುಳ್ಳ ವ್ಯಕ್ತಿಚಿತ್ರ ಇಲ್ಲಿದೆ..

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಮೂರನೇ ಪುತ್ರ ಕುಮಾರಸ್ವಾಮಿ ಅವರು ಈ ಬಾರಿ ಜನರ ಏಳಿಗೆಗಾಗಿ ಸಿಎಂ ಆಗುವ ಕನಸು ಹೊತ್ತಿದ್ದರು. ಕಳೆದ ಬಾರಿ ಟ್ವಿಂಟ್ವಿ20 ಸರ್ಕಾರದಲ್ಲಿ ಈಡೇರಿಸಲಾಗದ ಭರವಸೆಗಳನ್ನು ಈಡೇರಿಸಲು ಅವಕಾಶ ನೀಡಿ ಎಂದು ಕೋರಿದ ಕುಮಾರಸ್ವಾಮಿಗೆ ಕಾಂಗ್ರೆಸ್ ಬಲದಿಂದ ಸಿಎಂ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮೊದಲುಗೊಂಡಿದೆ.

ಜೆಡಿಎಸ್ ನ ಕಿಂಗ್, ಅಭಿಮಾನಿಗಳ ಪಾಲಿನ ಅಣ್ಣ ಕುಮಾರಸ್ವಾಮಿ ಅವರು ಈ ಬಾರಿ ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಕಂಡರು. ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗಗಳನ್ನು ಮೀರಿ ಜಾತ್ಯಾತೀತ ಜನತಾದಳದತ್ತ ಕರ್ನಾಟಕದ ಮತದಾರರು ನೋಡುವಂತೆ ಮಾಡಿದರು.

ಕರ್ನಾಟಕದ 25ನೇ ಮುಖ್ಯಮಂತ್ರಿಯಾದ ಎಚ್ ಡಿಕುಮಾರಸ್ವಾಮಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾದ ಎಚ್ ಡಿಕುಮಾರಸ್ವಾಮಿ

ಮನೆ ಮನೆಗೆ ಕುಮಾರಣ್ಣ ಎಂಬ ಅಭಿಯಾನದ ಮೂಲಕ ತಮ್ಮ ಟ್ವೆಂಟಿ 20 ಆಡಳಿತ ಅವಧಿಯ ಗ್ರಾಮ ವಾಸ್ತವ್ಯವನ್ನು ಮುಂದುವರೆಸಿದ್ದು ಫಲ ನೀಡಿತು. ತಮ್ಮ ಗೆಲುವಿಗೆ ಪಕ್ಷದ ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದು ಕುಮಾರಸ್ವಾಮಿ ಅವರು ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಹೊಸ ಹುಮ್ಮಸ್ಸಿನಲ್ಲಿರುವ ಕುಮಾರಸ್ವಾಮಿ ಅವರ ರಾಜಕೀಯ ಬದುಕಿನ ಹಿನ್ನೋಟ ಇಲ್ಲಿದೆ...

ಎಚ್ಡಿಕೆ ಕುಟುಂಬ ವರ್ಗ ಪರಿಚಯ

ಎಚ್ಡಿಕೆ ಕುಟುಂಬ ವರ್ಗ ಪರಿಚಯ

* 16 ಡಿಸೆಂಬರ್ 1959ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನನ

* ಚನ್ನಪಟ್ಟಣ, ರಾಮನಗರ ಇವರ ರಾಜಕೀಯ ಕಾರ್ಯಕ್ಷೇತ್ರ
* ಬಿಎಸ್ಸಿ ಪದವೀಧರ
* ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್
* ಎಚ್ ಡಿ ಬಾಲಕೃಷ್ಣ, ಎಚ್ ಡಿ ರೇವಣ್ಣ ಇಬ್ಬರು ಅಣ್ಣಂದಿರು. ಎಚ್ ಡಿ ರಮೇಶ್ ತಮ್ಮ, ಇಬ್ಬರು ಸೋದರಿಯರು.
ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ

ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ

ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳಾಗಿರುವ ಕುಮಾರಸ್ವಾಮಿ ಅವರು ಸಿನಿಮಾ ನಿರ್ಮಾಪಕರಾಗಿ ಯಶಸ್ಸು ಕಂಡವರು. ನಂತರ ರಾಜಕೀಯ ಪ್ರವೇಶಿಸಿದವರು.

* 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಎಚ್ಡಿಕೆ

* ರಾಜಕೀಯ ಅನುಭವವಿಲ್ಲದಿದ್ದರೂ 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
* 1998ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು
* 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
* ಫೆಬ್ರವರಿ 2006 ರಿಂದ ಅಕ್ಟೋಬರ್ 2007ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ. ಬಿಜೆಪಿ ಜತೆ 20-20 ಸರ್ಕಾರ ಸ್ಥಾಪನೆ

ಎಚ್ಡಿಕೆ ಸಾಧನೆಗಳು ಯೋಜನೆಗಳು-1

ಎಚ್ಡಿಕೆ ಸಾಧನೆಗಳು ಯೋಜನೆಗಳು-1

* ಸಾರಾಯಿ ನಿಷೇಧ, ಲಾಟರಿ ನಿಷೇಧ,6 ಜಿಲ್ಲೆಗಳಿಗೆ 2689.64 ಕೋಟಿ ಪ್ಯಾಕೇಜ್ ನೀಡಿಕೆ
* ಉದ್ಯಾನಗಳ ನಿರ್ವಹಣೆಗಾಗಿ ವಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನ ಸ್ಥಾಪನೆ.
* ಮೀನುಗಾರಿಕೆ ವೃತ್ತಿ ಮಾಡುವ ಮಹಿಳೆಯರಿಗೆ ಶೇ 4 ರಷ್ಟು ಬಡ್ಡಿದರದಲ್ಲಿ ಸಾಲ ನೀಡಿಕೆ
* ಸುವರ್ಣ ಕಾಯಕ ಉದ್ಯೋಗ ಶಿಕ್ಷಣ ಯೋಜನೆಯಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ
* ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ.
* ರೈತರಿಗೆ ಒಟ್ಟಾರೆ 7000 ಕೋಟಿ ರು ಪ್ಯಾಕೇಜ್ ದೊರೆಯುವಂತೆ ಮಾಡಿದ್ದು ದೊಡ್ದ ಸಾಧನೆ

ಎಚ್ಡಿಕೆ ಸಾಧನೆಗಳು ಯೋಜನೆಗಳು-2

ಎಚ್ಡಿಕೆ ಸಾಧನೆಗಳು ಯೋಜನೆಗಳು-2

* ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ, ಜನತಾ ದರ್ಶನ ಆರಂಭಿಸಿದರು. ಶೇ 70 ರಷ್ಟು ಅರ್ಜಿಗಳನ್ನು ಸ್ವೀಕರಿಸಿ 25 ಕೋಟಿ ರು ನೇರವಾಗಿ ನೀಡಿದ್ದರು.
* ಸುವರ್ಣ ಗ್ರಾಮೋದಯ ಯೋಜನೆ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ
* ಕೋಲಾರ, ಬಿಜಾಪುರಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಘೋಷಣೆ. * ಲ್ಯಾಂಡ್ ಮಾಫಿಯಾ ತಡೆಗೆ ಸೂಕ್ತ ಕ್ರಮ 40 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
* ಕೈಗಾರಿಕೆ ಇತ್ತು ನೀಡಲು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿದ್ದು ಎಚ್ಡಿಕೆ ಕಾಲದಲ್ಲೇ.
* ಉತ್ತರ ಕರ್ನಾಟಕದಲ್ಲಿ ವಿಶೇಷ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ.
* ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ ಯೋಜನೆ, ಆಸರೆ, ಅಮೃತ ಯೋಜನೆ ಅನುಷ್ಠಾನ.
* ಬೆಂಗಳೂರಿನ 190 ಕಿ.ಮೀ ರಸ್ತೆ ದುರಸ್ತಿ, ವಿಸ್ತರಣೆ ಕೈಗೊಳ್ಳಲಾಗಿದೆ.

English summary
Karnataka 25th CM HD Kumraswamy profile: Here we present the short biography and political journey of Vokkaliga leader HD Kumaraswamy who took oath as Karnataka CM for the second time today(May 23). Kumarasway led JDS -Congress coalition government formed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X