ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್‌ನ 24 ಮಂದಿ ಸದಸ್ಯರು ನಿವೃತ್ತಿ

By Mahesh
|
Google Oneindia Kannada News

ಬೆಂಗಳೂರು, ಜ. 05: ಕರ್ನಾಟಕ ವಿಧಾನ ಪರಿಷತ್‌ನ 25 ಮಂದಿ ಸದಸ್ಯರು ಮಂಗಳವಾರ (ಜನವರಿ 05) ನಿವೃತ್ತಿ ಹೊಂದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ನ ಹನ್ನೆರಡು ಮಂದಿ, ಬಿಜೆಪಿಯ ಏಳು, ಜೆಡಿಎಸ್‌ನ ನಾಲ್ವರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇಂದು ನಿವೃತ್ತರಾದರು. ಜೆಡಿಎಸ್ ಸದಸ್ಯರಾಗಿದ್ದ ಎಂ.ಆರ್.ಹುಲಿನಾಯ್ಕರ್ ಬಿಜೆಪಿಗೆ ಪಕ್ಷಾಂತರಗೊಳ್ಳುವ ಉದ್ದೇಶದಿಂದ ಈಗಾಗಲೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ನ ಸದಸ್ಯರಾದ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ಅಲ್ಲಮ್‌ಪ್ರಭು ಪಾಟೀಲ್, ವೀರಕುಮಾರ್ ಪಾಟೀಲ್, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್, ಶ್ರೀನಿವಾಸ್‌ಮಾನೆ, ಛಬ್ಬೀ ನಾಗರಾಜ್, ಕೆ.ಪ್ರತಾಪ್‌ಚಂದ್ರಶೆಟ್ಟಿ, ಎ.ವಿ.ಗಾಯತ್ರಿ ಶಾಂತೇಗೌಡ, ದಯಾನಂದ ರೆಡ್ಡಿ, ನಸೀರ್ ಅಹಮದ್, ಟಿ.ಜಾನ್ ಹಾಗೂ ಧರ್ಮಸೇನಾ ನಿವೃತ್ತಿಯಾದರು.

ಬಿಜೆಪಿ ಸದಸ್ಯರಾದ ಬಸವರಾಜ್ ಹಾವಗೆಪ್ಪ ಪಾಟೀಲ್, ಜಿ.ಎಸ್.ನ್ಯಾಮಗೌಡ, ಕವಟಗಿಮಠ್ ಮಹಂತೇಶ್ ಮಲ್ಲಿಕಾರ್ಜುನ್, ಆಚಾರ್ ಹಾಲಪ್ಪ ಬಸಪ್ಪ, ಮೃತ್ಯುಂಜಯ ಜಿನಗ, ಆರ್.ಕೆ.ಸಿದ್ದರಾಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ ಅವರು ನಿವೃತ್ತಿ ಹೊಂದಿದ್ದಾರೆ.

Karnataka 24 MLCs retiring on January 05, 2015

ಜೆಡಿಎಸ್ ಸದಸ್ಯರಾದ ಪಟೇಲ್ ಶಿವರಾಮ್, ಜಿ.ರಾಮಕೃಷ್ಣ, ಇ.ಕೃಷ್ಣಪ್ಪ, ಎಸ್.ನಾಗರಾಜು ಅವರು ನಿವೃತ್ತಿಯಾಗಿದ್ದು, ಜೆಡಿಎಸ್ ಸದಸ್ಯರಾಗಿದ್ದ ಎಂ.ಆರ್.ಹುಲಿನಾಯ್ಕರ್ ಬಿಜೆಪಿಗೆ ಪಕ್ಷಾಂತರಗೊಳ್ಳುವ ಉದ್ದೇಶದಿಂದ ಈಗಾಗಲೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಇಪ್ಪತ್ತೈದು ಸದಸ್ಯರ ಪೈಕಿ ಒಂಭತ್ತು ಮಂದಿ ಮರು ಆಯ್ಕೆಯಾಗಿದ್ದು, ಐದು ಮಂದಿ ಪರಾಭವಗೊಂಡಿದ್ದಾರೆ. ಉಳಿದ ಕೆಲವರಿಗೆ ಟಿಕೆಟ್ ಸಿಗದೆ ಚುನಾವಣಾ ಸ್ಪರ್ಧೆಯಿಂದ ದೂರ ಸರಿದಿದ್ದರೆ ಇನ್ನೂ ಕೆಲವರು ಚುನಾವಣಾ ಸ್ಪರ್ಧೆಯಲ್ಲಿದ್ದರೂ ಕೊನೆ ಗಳಿಗೆಯಲ್ಲಿ ನಿವೃತ್ತರಾಗಿದ್ದರು. ಮತ್ತೆ ಕೆಲವರು ಬಂಡಾಯವಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಗೆದ್ದವರು: ಕಾಂಗ್ರೆಸ್‌ನ ಸಚಿವ ಎಸ್.ಆರ್.ಪಾಟೀಲ್, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್, ಮಾನೇ ಶ್ರೀನಿವಾಸ್, ಕೆ.ಪ್ರತಾಪಚಂದ್ರ ಶೆಟ್ಟಿ, ರಘು ಆಚಾರ್, ಹಾಗೂ ಧರ್ಮಸೇನಾ, ಬಿಜೆಪಿಯಿಂದ ಕವಟಗಿಮಠ ಮಹಂತೇಶ್‌ಮಲ್ಲಿಕಾರ್ಜುನ, ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನ ಸಂದೇಶ್ ನಾಗರಾಜ್ ಅವರು ಸೇರಿದ್ದಾರೆ.

ಹೊಸದಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಇಪ್ಪತ್ತೈದು ಮಂದಿ ಅಭ್ಯರ್ಥಿಗಳು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವುದು ಬಾಕಿ ಉಳಿದಿದೆ. ಕಾಂಗ್ರೆಸ್‌ನಿಂದ ಹದಿಮೂರು, ಬಿಜೆಪಿಯಿಂದ ಆರು ಹಾಗೂ ಜೆಡಿಎಸ್‌ನಿಂದ ನಾಲ್ಕು, ಪಕ್ಷೇತರರು ಇಬ್ಬರು ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಕಾಂಗ್ರೆಸ್‌ನಿಂದ ವಿಜಯ್‌ಸಿಂಗ್, ಆರ್.ಪ್ರಸನ್ನಕುಮಾರ್, ಎಂ.ಎ.ಗೋಪಾಲಸ್ವಾಮಿ, ಎಂ.ನಾರಾಯಣಸ್ವಾಮಿ, ಎಸ್.ರವಿ, ಬಿಜೆಪಿಯಿಂದ ಬಿ.ಜಿ.ಪಾಟೀಲ್, ಪ್ರದೀಪ್ ಶೆಟ್ಟರ್, ಎಂ.ಕೆ.ಪ್ರಾಣೇಶ್, ಎಂ.ಪಿ.ಸುನೀಲ್ ಸುಬ್ರಮಣಿ, ಜೆಡಿಎಸ್‌ನಿಂದ ಸಿ.ಆರ್.ಮನೋಹರ್, ಎನ್.ಅಪ್ಪಾಜಿಗೌಡ, ಕಾಂತರಾಜ್ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶ ಮಾಡಲಿದ್ದಾರೆ.

ಪಕ್ಷೇತರರಾದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ವಿವೇಕ್‌ರಾವ್ ವಸಂತರಾವ್ ಕೂಡ ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಪ್ರವೇಶ ಮಾಡಲಿದ್ದಾರೆ. ( ಒನ್ ಇಂಡಿಯಾ ಸುದ್ದಿ)

English summary
Here is a list of 24 Member of Legislative Council who are retiring on January 05, 2015. The list has 11 congress, 7 BJP, 4 JDS and 1 independent member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X