ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಇಬ್ಬರು ನಕ್ಸಲರ ಶರಣಾಗತಿ

|
Google Oneindia Kannada News

ಬೆಂಗಳೂರು, ಡಿ.1 : ಕರ್ನಾಟಕದ ಇಬ್ಬರು ನಕ್ಸಲ್ ನಾಯಕರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ನೀಡಿದ್ದು, ಇಬ್ಬರು ಮಂಗಳವಾರ ಶರಣಾಗಲಿದ್ದಾರೆ. ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಪೊಲೀಸರಿಗೆ ಶರಣಾಗಲಿರುವ ನಕ್ಸಲರಾಗಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯೆ ಗೌರಿ ಲಂಕೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಡಿ.2ರ ಮಂಗಳವಾರ ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಅವರು ಪೊಲೀಸರ ಮುಂದೆ ಶರಣಾಗಲಿದ್ದಾರೆ ಎಂದು ಹೇಳಿದ್ದಾರೆ.

Naxal

ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಬೆಂಗಳೂರಿನಲ್ಲಿ ಡಿ.2ರ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಿದ್ದು, ನಂತರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಗೌರಿ ಲಂಕೇಶ್ ಅವರೊಂದಿಗೆ ಚಿಕ್ಕಮಗಳೂರಿಗೆ ತೆರಳಿ ಪೊಲೀಸರ ಮುಂದೆ ಶರಣಾಗಲಿದ್ದಾರೆ. [ಎಎನ್ಎಫ್ ಗುಂಡಿಗೆ ಆಟೋ ಚಾಲಕ ಬಲಿ]

ಜುಲ್ಫೀಕರ್‌ ವಿರುದ್ಧ 4 ಮತ್ತು ನಾಗರಾಜ್ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿ­ಸಲಿದ್ದಾರೆ. ಸರ್ಕಾರ ಕೊಡುವ ನೆರವಿನಿಂದ ನಾವು ಬದುಕುವುದಿಲ್ಲ. ಬದಲಿಗೆ, ಸ್ವಂತ ದುಡಿಮೆ ಮೇಲೆ ಬದುಕುತ್ತೇವೆ ಎಂದು ಇಬ್ಬರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸಿರಿಮನೆ ನಾಗರಾಜ್ : ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಸಿರಿಮನೆ ಗ್ರಾಮದಲ್ಲಿ 1952ರಲ್ಲಿ ಜನಿಸಿದ ನಾಗರಾಜ್ ಬಿಎಸ್‍ಸಿ ಪದವೀಧರರು. 1973ರಲ್ಲಿ ಮೈಸೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ವೇಳೆ ಕಮ್ಯೂನಿಸ್ಟ್ ವಿಚಾರಧಾರೆಯತ್ತ ಪ್ರಭಾವಿತರಾಗುತ್ತಾರೆ.

1990ರಲ್ಲಿ ಸಾಕೇತ್ ರಾಜನ್ ಭೇಟಿಯಾಗಿ ಪೀಪಲ್ಸ್ ವಾರ್ ಪಕ್ಷದ ಸಂಪರ್ಕ ಪಡೆದು ಕರ್ನಾಟಕ ವಿಮೋಚನಾ ರಂಗಕ್ಕೆ ಸೇರ್ಪಡೆಯಾಗುತ್ತಾರೆ. 2000ದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿಸಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು 2004ರಿಂದ ಭೂಗತರಾಗಿದ್ದಾರೆ.

ನೂರ್‌ ಜುಲ್ಫೀಕರ್‌ : ಚಿತ್ರದುರ್ಗದಲ್ಲಿ 1967ರಲ್ಲಿ ಜನಿಸಿಸಿದ ನೂರ್‌ ಜುಲ್ಫೀಕರ್‌ (ನೂರ್ ಶ್ರೀಧರ್) ಚಿತ್ರದರ್ಗುದ ಜೆಎಂಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶ್‍ನ್ನು 5ನೇ ಸೆಮಿಸ್ಟರ್ ಓದಿದ್ದಾರೆ. ಇಂಜಿನಿಯರಿಂಗ್ ಓದುವ ವೇಳೆ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಗಳಿಂದ ನಕ್ಸಲ್ ಚಳುವಳಿಯ ಪರಿಚಯವಾಗಿತ್ತು.

2001ರಿಂದ 2006ವರೆಗೆ ಮಾವೋವಾದಿ ಪಕ್ಷದಲ್ಲಿ ದೊಡ್ಡ ನಾಯಕರಾಗಿದ್ದ ನೂರ್‌ ಜುಲ್ಫೀಕರ್‌ 2004ರಲ್ಲಿ ಸಾಕೇತ್ ರಾಜನ್ ಎನ್‍ಕೌಂಟರ್ ಆದ ಬಳಿಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಬೇಕೆಂಬ ಪ್ರಸ್ತಾಪವನ್ನು ಕೇಂದ್ರ ಸಮಿತಿ ಇವರ ಮುಂದೆ ಇಟ್ಟಿತ್ತು. ಆದರೆ ಇವರು ನಿರಾಕರಿಸಿದ್ದರು. 2006ರಿಂದ ಇವರು ಭೂಗತರಾಗಿದ್ದಾರೆ.

English summary
Two former CPI (Maoist) leaders Noor Zulfikar (47) and Sirimane Nagaraj (62) will be the first to join the mainstream. They will present themselves before H.S. Doreswamy and Gowri Lankesh, representatives of the civil society on the State committee on December 2 at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X