ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಐಜಿಯಾಗಿ ಬಡ್ತಿ ಪಡೆದ ಎಸ್ಪಿ ಸೋನಿಯಾ ನಾರಂಗ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಹಗರಣ ಬೆಳಕಿಗೆ ಬರಲು ಕಾರಣರಾದ ಐಪಿಎಸ್‌ ಅಧಿಕಾರಿ ಸೋನಿಯಾ ನಾರಂಗ್ ಸೇರಿದಂತೆ ರಾಜ್ಯದ 11 ಐಪಿಎಸ್‌ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಮುಂಬಡ್ತಿ ನೀಡಿದೆ. ಸೋನಿಯಾ ನಾರಂಗ್ ಡಿಐಜಿಯಾಗಿ ಬಡ್ತಿ ಪಡೆದಿದ್ದಾರೆ.

ಸದ್ಯ, ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋನಿಯಾ ನಾರಂಗ್ ಅವರು, ಡಿಸೆಂಬರ್ 31ರಂದು ಡಿಐಜಿಯಾಗಿ ಬಡ್ತಿ ಪಡೆಯಲಿದ್ದಾರೆ. 2015ರ ಜನವರಿಯಿಂದ ನಾರಂಗ್ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [ಕರ್ನಾಟಕದಿಂದ ವರ್ಗಾವಣೆ ಬಯಸಿಲ್ಲ: ಸೋನಿಯಾ ನಾರಂಗ್]

sonia narang

ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಎಸ್‌ಪಿ ಸೋನಿಯಾ ನಾರಂಗ್‌ ಅವರು 2015ರ ಮೇ 11ರಂದು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು. ಆನಂತರ ನಡೆದ ಹಲವು ಬೆಳವಣಿಗೆಗಳ ಬಳಿಕ ವೈ. ಭಾಸ್ಕರ ರಾವ್ ಅವರು ಡಿಸೆಂಬರ್ 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. [ಕರ್ನಾಟಕ ಲೋಕಾಯುಕ್ತ ಹಗರಣದ Timeline]

ಬಡ್ತಿ ಪಡೆದ ಇತರರು : ಪ್ರತಾಪ್ ರೆಡ್ಡಿ, ಸುನಿಲ್ ಅಗರವಾಲ್, ಶಿವಕುಮಾರ್ ಅವರು ಐಜಿಪಿಯಿಂದ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಹೇಮಂತ್ ನಿಂಬಾಳ್ಕರ್, ಎಸ್.ರವಿ, ಚಂದ್ರಶೇಖರ್, ಪಂಕಜ್‌ಕುಮಾರ್ ಠಾಕೂರ್ ಅವರು ಡಿಐಜಿ ಹುದ್ದೆಯಿಂದ ಐಜಿಪಿಯಾಗಿ ಬಡ್ತಿ ಪಡೆದಿದ್ದಾರೆ. ಸುಬ್ರಹ್ಮಣ್ಯರಾವ್ ಹಾಗೂ ಎಚ್.ಎನ್.ವೆಂಕಟೇಶ್ ಅವರು ಎಸ್‌ಪಿ ಹುದ್ದೆಯಿಂದ ಡಿಐಜಿ ಹುದ್ದೆಗೆ ಬಡ್ತಿ ಹೊಂದಿದ್ದಾರೆ.

English summary
Bengaluru lokayukta SP Sonia Narang and other 10 IPS officers of Karnataka get promotions. Sonia Narang promoted to the rank of deputy inspector general of police (DIG).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X